• Home  
  • ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಇನ್ಕ್ಯುಬೇಷನ್ ಜಾಗೃತಿ ಕಾರ್ಯಕ್ರಮ (Incubation Awareness Programme at SMVITM)
- ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಇನ್ಕ್ಯುಬೇಷನ್ ಜಾಗೃತಿ ಕಾರ್ಯಕ್ರಮ (Incubation Awareness Programme at SMVITM)

Share:   ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಇನ್ಕ್ಯುಬೇಷನ್ ಜಾಗೃತಿ ಕಾರ್ಯಕ್ರಮ   ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ  (Udupi – Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲದಲ್ಲಿ ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಮಂಡಳಿ, ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆ ಮತ್ತು ಭಾರತ ಸರಕಾರದ (RAMP)  ಯೋಜನೆಯಡಿಯಲ್ಲಿ ಒಂದು ದಿನದ ಇನ್ಕ್ಯುಬೇಷನ್  ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.   ಕಾರ್ಯಕ್ರಮವನ್ನು ಡೀನ್ (ಸಂಶೋಧನೆ) ಡಾ. […]

 (Udupi – Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲದಲ್ಲಿ ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಮಂಡಳಿ, ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆ ಮತ್ತು ಭಾರತ ಸರಕಾರದ (RAMP)  ಯೋಜನೆಯಡಿಯಲ್ಲಿ ಒಂದು ದಿನದ ಇನ್ಕ್ಯುಬೇಷನ್  ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

  ಕಾರ್ಯಕ್ರಮವನ್ನು ಡೀನ್ (ಸಂಶೋಧನೆ) ಡಾ. ಸಚಿನ್ ಭಟ್, ಮತ್ತು ಡೀನ್  (ಶೈಕ್ಷಣಿಕ)  ಡಾ. ಸುದರ್ಶನ್‌ರಾವ್  ಉದ್ಘಾಟಿಸಿದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ  ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ್ ಶೆಟ್ಟಿ ವಹಿಸಿದ್ದರು.

ಅವರು ಉದಯೋನ್ಮುಖ ಉದ್ಯಮಿಗಳಿಗೆ ಲಭ್ಯವಿರುವ ವಿವಿಧ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿ,  ವಿದ್ಯಾರ್ಥಿಗಳನ್ನು ಉದ್ಯಮಿಗಳಾಗಿ ಪರಿವರ್ತಿಸುವ ಬಗ್ಗೆ  ಮಾಹಿತಿ ನೀಡಿದರು.

   MSME ಮಂಗಳೂರು ಇದರ ಜಂಟಿ ನಿರ್ದೇಶಕ  ಸುಂದರ್  ಶೇರಿಗಾರ್‌ ಮಾತನಾಡಿ, ಉದ್ಯಮಿಗಳಿಗೆ ಹಣಕಾಸಿನ ನೆರವು, MSME ನೋಂದಣಿಯ ಪ್ರಯೋಜನಗಳು ಮತ್ತು ಕಾರ್ಯವಿಧಾನಗಳ ಕುರಿತು ಮಾಹಿತಿ ನೀಡಿದರು.

  ಕಾರ್ಯಕ್ರಮವನ್ನು ಕರ್ನಾಟಕ ತಾಂತ್ರಿಕ ಉನ್ನತೀಕರಣ ಮಂಡಳಿಯ ಸಹಾಯಕ ಸಲಹೆಗಾರ ಅರವಿಂದ್ ಬಾಲೇರಿಯವರು ಸಂಯೋಜಿಸಿದರು.

   ಈ ಕಾರ್ಯಕ್ರಮದಲ್ಲಿಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

    ಕಾರ್ಯಾಗಾರದಲ್ಲಿ ಮಡಿಕೇರಿಯ ಕಾರ್ಪೊರೇಷನ್ ಬ್ಯಾಂಕಿನ ಪ್ರಮುಖ ಜಿಲ್ಲಾ ವ್ಯವಸ್ಥಾಪಕ ಆರ್. ಕೆ. ಬಾಲಚಂದ್ರ, ಮಣಿಪಾಲದ ಬಯೋಇನ್‌ಕ್ಯುಬೇಟರ್‌ನ ವ್ಯವಸ್ಥಾಪಕ ಡಾ. ಕ್ಲಾವಿಯನ್ ಮಿರಾಂಡಾ, ಅಲರ್‌ಇನ್ನೋವೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಸಚಿನ್ ಭಟ್ ಮತ್ತು ನಿಟ್ಟೆಅಕ್ವಾಮರೀನ್ ಸೆಂಟರ್‌ ಆಫ್‌ಎಕ್ಸಲೆನ್ಸ್‌ ಮುಖ್ಯಸ್ಥ ಆಶಿಕ್ ಶೆಟ್ಟಿ ಅವರು ಉಪನ್ಯಾಸ ನೀಡಿದರು.

    ಸಂಪನ್ಮೂಲ ವ್ಯಕ್ತಿಗಳು ತಮ್ಮಉಪನ್ಯಾಸದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಉದ್ಯಮ ಶೀಲತೆಯ ಪ್ರಸ್ತುತತೆ ಮತ್ತುಇಂಜಿನಿಯರಿಂಗ್‌ ಇನ್‌ಕ್ಯುಬೇಶನ್ ಪರಿಸರ ವ್ಯವಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅಗತ್ಯತೆಯನ್ನು ತಿಳಿಸಿದರು.

  ಕಾರ್ಯಾಗಾರವು ಕರ್ನಾಟಕ ತಾಂತ್ರಿಕ ಉನ್ನತೀಕರಣ ಮಂಡಳಿ, ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆಗಳ ತಜ್ಞರಿಂದ  ಸುಗಮಗೊಳಿಸಲ್ಪಟ್ಟ ಐಡಿಯಾ ಮೌಲ್ಯೀಕರಣ, ಮೂಲ ಮಾದರಿ ಅಭಿವೃದ್ಧಿ ಮತ್ತುಇನ್‌ಕ್ಯುಬೇಶನ್  ಪ್ರಕ್ರಿಯೆಯ ಕುರಿತಾಗಿತ್ತು.

Leave a comment

Your email address will not be published. Required fields are marked *

eMedia Kannada  @2025. All Rights Reserved.