• Home  
  • ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಭದ್ರತೆಯಲ್ಲಿ ಮಹಿಳೆಯರ ಸಬಲೀಕರಣ ಕಾರ್ಯಾಗಾರ (One day workshop on “CyberShe-Empowering Women in Cyber Security”)
- ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಭದ್ರತೆಯಲ್ಲಿ ಮಹಿಳೆಯರ ಸಬಲೀಕರಣ ಕಾರ್ಯಾಗಾರ (One day workshop on “CyberShe-Empowering Women in Cyber Security”)

Share: ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಭದ್ರತೆಯಲ್ಲಿ ಮಹಿಳೆಯರ ಸಬಲೀಕರಣ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿದ ಡಾ. ರಂಜಿತ್ ಕೊಲ್ಕರ್ (Udupi, Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕ, ಮಹಿಳಾ ಸಬಲೀಕರಣ ಘಟಕವು ಐಇಇಇ ವುಮನ್ ಇನ್ ಇಂಜಿನಿಯರಿಂಗ್ ಘಟಕದ ಸಹಯೋಗದೊಂದಿಗೆ ಸೈಬರ್ ಭದ್ರತೆಯಲ್ಲಿ ಮಹಿಳೆಯರ ಸಬಲೀಕರಣ ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಶುಕ್ರವಾರ ಆಯೋಜಿಸಲಾಗಿತ್ತು.    ಸೈಬರ್ ಸುರಕ್ಷತೆ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸಿ ಮಹಿಳಾ ವಿದ್ಯಾರ್ಥಿನಿಯರನ್ನು […]

(Udupi, Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕ, ಮಹಿಳಾ ಸಬಲೀಕರಣ ಘಟಕವು ಐಇಇಇ ವುಮನ್ ಇನ್ ಇಂಜಿನಿಯರಿಂಗ್ ಘಟಕದ ಸಹಯೋಗದೊಂದಿಗೆ ಸೈಬರ್ ಭದ್ರತೆಯಲ್ಲಿ ಮಹಿಳೆಯರ ಸಬಲೀಕರಣ ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಶುಕ್ರವಾರ ಆಯೋಜಿಸಲಾಗಿತ್ತು.

   ಸೈಬರ್ ಸುರಕ್ಷತೆ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸಿ ಮಹಿಳಾ ವಿದ್ಯಾರ್ಥಿನಿಯರನ್ನು ಈ ವೃತ್ತಿ ಕ್ಷೇತ್ರದತ್ತ ಆಕರ್ಷಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶ.

  ಕಾರ್ಯಾಗಾರದಲ್ಲಿ ನ್ಯಾಷನಲ್ ಫಾರೆನ್‌ಸಿಕ್ ಸೈನ್ಸಸ್ ಯುನಿವರ್ಸಿಟಿ), ಗೋವಾ ಇದರ ಸೈಬರ್ ಸೆಕ್ಯೂರಿಟಿ ಮತ್ತು ಡಿಜಿಟಲ್ ಫಾರೆನ್‌ಸಿಕ್ ಸೈನ್ಸಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಂಜಿತ್ ಕೊಲ್ಕರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು.

   ಅವರು ಮಾತನಾಡಿ ಸೈಬರ್ ಸುರಕ್ಷತೆಯ ಮೂಲಭೂತ ಅಂಶಗಳು, ಸೈಬರ್ ಬೆದರಿಕೆಗಳು, ಸೈಬರ್ ಫಾರೆನ್‌ಸಿಕ್ ಹಾಗೂ ಈ ಕ್ಷೇತ್ರದಲ್ಲಿ ಹೆಚ್ಚುತ್ತಿರುವ  ವೃತ್ತಿ ಅವಕಾಶಗಳ  ಕುರಿತು  ಮೌಲ್ಯಯುತ ಮಾಹಿತಿಯನ್ನು ನೀಡಿದರು.

    ನೈಜ ಘಟನೆಗಳ ಉದಾಹರಣೆಯ ಮೂಲಕ ನಿತಂತರ ಕೌಶಲ್ಯಾಭಿವೃದ್ಧಿ, ನೈತಿಕ ಮೌಲ್ಯಗಳು ಹಾಗೂ ಡಿಜಿಟಲ್ ವ್ಯವಸ್ಥೆಗಳ ಭದ್ರತೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಸಮಪಕ ಮಾಹಿತಿ ನೀಡಿದರು.

    ಶ್ರೀ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಧಾಕೃಷ್ಣ ಎಸ್ ಐತಾಳ್ ಮಾತನಾಡಿ, ತಾಂತ್ರಿಕವಾಗಿ ಹಾಗೂ ನೈತಿಕ ಹೊಣೆಗಾರಿಕೆಯುಳ್ಳ ಇಂಜಿನಿಯರ್‌ಗಳನ್ನು ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರಮುಖ್ಯ. ಸೈಬರ್ ಸುರಕ್ಷತೆ, ಡಿಜಿಟಲ್ ಫಾರೆನ್‌ಸಿಕ್ ಹಾಗೂ ಸಂಬಂಧಿತ ಸಂಶೋಧನಾ ಕ್ಷೇತ್ರಗಳಲ್ಲಿ ಮಹಿಳೆಯರು ನಾಯಕತ್ವ ವಹಿಸಿಕೊಳ್ಳಬೇಕೆಂದು ತಿಳಿಸಿದರು.

   ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್  ಮಾತನಾಡಿ, ಇಂದಿನ ಡಿಜಿಟಲ್ ಸಂಪರ್ಕಿತ ಜಗತ್ತಿನಲ್ಲಿ ಸೈಬರ್ ಸುರಕ್ಷತೆಯ ಮಹತ್ವ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದರು. ವಿದ್ಯಾರ್ಥಿನಿಯರು ಹೊಸ ಮತ್ತು ಪರಿಣಾಮಕಾರಿ ತಾಂತ್ರಿಕ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಆರಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.

ಈ ಸಂದರ್ಭ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.