• Home  
  • ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ “ಸೆನ್ಶಿಯಾ – 2026”ರಲ್ಲಿ ರನ್ನರ್ (Students Of SMVITM , Gets Runner- Up prizes in “Sentia-2026”)
- ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ “ಸೆನ್ಶಿಯಾ – 2026”ರಲ್ಲಿ ರನ್ನರ್ (Students Of SMVITM , Gets Runner- Up prizes in “Sentia-2026”)

Share: ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ “ಸೆನ್ಶಿಯಾ – 2026”ರಲ್ಲಿ ರನ್ನರ್ ಮಂಗಳೂರು ಇನ್ಸಿಟ್ಯೂಟ್‌ ಆಫ್ ಟೆಕ್ನಾಲಜಿ, ಮೂಡಬಿದ್ರೆ ಇಲ್ಲಿ  ನಡೆದ ಸ್ಪರ್ಧೆ  (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಂಗಳೂರು ಇನ್ಸಿಟ್ಯೂಟ್‌ ಆಫ್ ಟೆಕ್ನಾಲಜಿ, ಮೂಡಬಿದ್ರೆ ಇಲ್ಲಿ  ನಡೆದ “ಸೆನ್ಶಿಯಾ – 2026೬”ರಲ್ಲಿ ರನ್ನರ್ ಆಫ್ ಟ್ರೋಫಿ ಲಭಿಸಿದೆ.    ಲೆನ್ಸ್ ಕ್ರಾಫ್ಟ್ (ಫೋಟೋಗ್ರಫಿ) ಸ್ಪರ್ಧೆಯಲ್ಲಿ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ದೀಪಕ್ ರವರು ಪ್ರಥಮ ಬಹುಮಾನ ಹಾಗೂ ಸಿ […]

 (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಂಗಳೂರು ಇನ್ಸಿಟ್ಯೂಟ್‌ ಆಫ್ ಟೆಕ್ನಾಲಜಿ, ಮೂಡಬಿದ್ರೆ ಇಲ್ಲಿ  ನಡೆದ “ಸೆನ್ಶಿಯಾ – 2026೬”ರಲ್ಲಿ ರನ್ನರ್ ಆಫ್ ಟ್ರೋಫಿ ಲಭಿಸಿದೆ.

   ಲೆನ್ಸ್ ಕ್ರಾಫ್ಟ್ (ಫೋಟೋಗ್ರಫಿ) ಸ್ಪರ್ಧೆಯಲ್ಲಿ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ದೀಪಕ್ ರವರು ಪ್ರಥಮ ಬಹುಮಾನ ಹಾಗೂ ಸಿ ವಿಘ್ನೇಶ್ ಕುಮಾರ್ ಅವರು ದ್ವಿತೀಯ ಬಹುಮಾನ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ನಿಶಾಂತ್ ಜತ್ತನ್ ಮತ್ತು ಚೇತನ್ ವಿ ಕೋಟ್ಯಾನ್ ರವರು ದೃಶ್ಯಂ (ವಿಡಿಯೋಗ್ರಫಿ) ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಗಣಕ ಯಂತ್ರ ವಿಭಾಗದ ನಿಖಿತ್ ಪೆರೇರಾ ಮತ್ತು ಪ್ರೀಯಾಂಕಾ ಅವರು ಲಿವಿಂಗ್ ಕ್ಯಾನ್ವಾಸ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು, ಗಣಕಯಂತ್ರ ವಿಭಾಗದ ಶರಣ್ಯ ತಂತ್ರಿಯವರು ಕ್ರೋಮಾಫೇಟ್ ಸ್ಫರ್ಧೆಯಲ್ಲಿ ದ್ವಿತೀಯ ಬಹುಮಾನ, ಗಣಕಯಂತ್ರ ವಿಭಾಗದ ಧನುಷ್ ಎಸ್ ರವರು ಸ್ಪೆಲ್ ಬಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಗಣಕಯಂತ್ರ ವಿಭಾಗದ ಅರೋನ್ ಓವನ್ ಡಿಸೋಜಾ ಮತ್ತು ತಂಡದವರು ಬ್ಯಾಟಲ್ ಆಫ್ ಬ್ಯಾಂಡ್ ಸ್ಪರ್ಧೆಯಲ್ಲಿ ರನ್ನರ್ ಆಫ್ ಬಹುಮಾನವನ್ನು ಗಳಿಸಿರುತ್ತಾರೆ.

 ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಂಸ್ಥೆಯ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.