ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಹ್ಯಾಕಥಾನ್‌ನಲ್ಲಿ ಬಹುಮಾನ
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಿಂದ ಅಭಿನಂದನೆ
(Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಪಿ ಪ್ರಮೋದ್‌ರಾವ್, ಸಾಗರ್ ಎಸ್, ಮೋಹಿತ್‌ಕೋಟ್ಯಾನ್ ಮತ್ತು ಪ್ರದ್ಯುನ್ಮ ಶೆಟ್ಟಿಗಾರ್ ರವರು“ಸೃಷ್ಟಿ 2026” ಎಂಬ ರಾಜ್ಯ ಮಟ್ಟದ ತಾಂತ್ರಿಕ ಪ್ರಾಜೆಕ್ಟ್ ದರ್ಶನ ಮತ್ತು ಸ್ಪರ್ಧೆ ಹ್ಯಾಕಥಾನ್‌ನಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.
ಈ ಸ್ಪರ್ಧೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇದರ ಸಹಯೋಗದೊಂದಿಗೆ ಸೃಷ್ಟಿ ಇನೋವೇಟಿವ್ ಎಕ್ಸ್ಚೇಂಜ್ 2026 ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಿದ ಈ ಪ್ರಾಜೆಕ್ಟ್ ಆರೋಗ್ಯ ಸೇವೆಯಲ್ಲಿಎದುರಾಗುವ ಸವಾಲುಗಳನ್ನು ಪರಿಹರಿಸುವ ಮೂಲಕ ಸೇವೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಹೃತ್ಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.
ಈ ರೀತಿ ಯಶಸ್ಸು ವಿದ್ಯಾರ್ಥಿಗಳ ನಿಷ್ಠೆ, ಶ್ರಮ ಹಾಗೂ ಶಿಕ್ಷಣದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.

