ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಆಶಾ ನಿಲಯ” ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ
(Bantakal) ಬಂಟಕಲ್: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು “ಆಸರೆ” ಸಮಾಲೋಚನಾ ಘಟಕದ ವತಿಯಿಂದ ಉಡುಪಿಯ “ಆಶಾನಿಲಯ”ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿದರು.
ಈ ಭೇಟಿಯಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷ ಚೇತನ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ತಿಳಿದುಕೊಂಡರು.
ಆಶಾ ನಿಲಯದ ಮಕ್ಕಳಿಗಾಗಿ ವಿದ್ಯಾರ್ಥಿಗಳು ನೃತ್ಯ , ಸಂಗೀತ ಮುಂತಾದ ಮನೋರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ಮಕ್ಕಳನ್ನು ಮನೋರಂಜಿಸಿದರು. ಹಾಗೂ ಸಿಹಿತಿಂಡಿ ವಿತರಿಸಿದರು.
ಗಣಕಯಂತ್ರ ವಿಭಾಗದ ಸಮಾಲೋಚನ ಘಟಕದ ಸದಸ್ಯರಾದ ಡಾ. ಸದಾನಂದ್ ಎಲ್ ಮತ್ತು ಯಶಸ್ವಿನಿ ಎ. ಎಸ್ ಇವರು ಆಶಾ ನಿಲಯದ ಸಿಬ್ಬಂದಿವರ್ಗದವರ ಜೊತೆ ಮಾತನಾಡಿ, ವಿಕಲ ಚೇತನ ಮಕ್ಕಳ ಕಲಿಕಾ ವಿಧಾನದ ಬಗ್ಗೆ ಮಾಹಿತಿ ಪಡೆದರು.

