• Home  
  • ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಆಟಿಸಂ ಸ್ಟೆಕ್ಟ್ರಂ ಡಿಸಾರ್ಡರ್ ಪತ್ತೆ ಮಾಡುವ ಯಂತ್ರದಅಭಿವೃದ್ಧಿ (Early Detection of Autism in Toddlers Using Machine Learning)  
- ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಆಟಿಸಂ ಸ್ಟೆಕ್ಟ್ರಂ ಡಿಸಾರ್ಡರ್ ಪತ್ತೆ ಮಾಡುವ ಯಂತ್ರದಅಭಿವೃದ್ಧಿ (Early Detection of Autism in Toddlers Using Machine Learning)  

Share: ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಆಟಿಸಂ ಸ್ಟೆಕ್ಟ್ರಂ ಡಿಸಾರ್ಡರ್ ಪತ್ತೆ ಮಾಡುವ ಯಂತ್ರದಅಭಿವೃದ್ಧಿ (Bantakal) ಬಂಟಕಲ್:‌ ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿಆಟಿಸಂ ಸ್ಪೆಕ್ಟಂ ಡಿಸಾರ್ಡರ್‌ಕಾಯಿಲೆಯನ್ನು ಯಂತ್ರ ಕಲಿಕಾ ತಂತ್ರ ಜ್ಞಾನವನ್ನು ಬಳಸಿಕೊಂಡು ಪತ್ತೆ ಮಾಡುವ ಯಂತ್ರವನ್ನು ಗಣಕಯಂತ್ರ ವಿಭಾಗದ  ವಿದ್ಯಾರ್ಥಿಗಳಾದ ರಮ್ಯಾ, ಶರಣ್ಯ, ಶ್ರೀಯಾ ಶೆಟ್ಟಿ ಮತ್ತು ವೈಷ್ಣವಿ ಬಿಜೂರ್‌ರವರು ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಸವಿತಾ ಶೆಣೈಯವರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನುಅಭಿವೃದ್ಧಿ ಪಡಿಸಿದ್ದಾರೆ.  ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ ನರಮಂಡಲದ ಬೆಳವಣಿಗೆಯಲ್ಲಿನ […]

(Bantakal) ಬಂಟಕಲ್:‌ ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿಆಟಿಸಂ ಸ್ಪೆಕ್ಟಂ ಡಿಸಾರ್ಡರ್‌ಕಾಯಿಲೆಯನ್ನು ಯಂತ್ರ ಕಲಿಕಾ ತಂತ್ರ ಜ್ಞಾನವನ್ನು ಬಳಸಿಕೊಂಡು ಪತ್ತೆ ಮಾಡುವ ಯಂತ್ರವನ್ನು ಗಣಕಯಂತ್ರ ವಿಭಾಗದ  ವಿದ್ಯಾರ್ಥಿಗಳಾದ ರಮ್ಯಾ, ಶರಣ್ಯ, ಶ್ರೀಯಾ ಶೆಟ್ಟಿ ಮತ್ತು ವೈಷ್ಣವಿ ಬಿಜೂರ್‌ರವರು ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಸವಿತಾ ಶೆಣೈಯವರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನುಅಭಿವೃದ್ಧಿ ಪಡಿಸಿದ್ದಾರೆ.

 ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆಯಾಗಿದ್ದು, ಅದು ಒಂದು ಮಗುವಿನ ನಡವಳಿಕೆ ಮತ್ತು ಸಾಮಾಜಿಕ ಸಂವಹನಗಳ ಮೇಲೆ ಪರಿಣಾಮ ಬೀರುತ್ತದೆ. ಈ ಯಂತ್ರದ ಮೂಲಕ ತಾಂತ್ರಿಕ ಅಧ್ಯಯನ ತಂತ್ರಗಳನ್ನು ಬಳಸಿಕೊಂಡುಚಿಕ್ಕ ಮಕ್ಕಳಲ್ಲಿ ಮೊದಲ ಹಂತದ ಆಟಿಸಂ ಸ್ಪೆಕ್ಟಂಡಿಸಾರ್ಡರ್‌ನಂತಹ ಕಾಯಿಲೆಯನ್ನು ಪತ್ತೆ ಹಚ್ಚಿ ಸುಧಾರಿತ ಚಿಕಿತ್ಸೆ ನೀಡುವಲ್ಲಿ ಸಹಾಯಕವಾಗಿದೆ.

 ಈ ಯೋಜನೆಯಿಂದ ಆಟಿಸಂ ಸ್ಪೆಕ್ಟಂ ಡಿಸಾರ್ಡರ್‌ಕಾಯಿಲೆಯನ್ನು ಪತ್ತೆಹಚ್ಚಲು ಲಾಸೋ (lasso) ಎಂಬ ವೈಶಿಷ್ಟ್ಯತೆಯ ಆಯ್ಕೆಯಂತಹ ತಂತ್ರಜ್ಞಾನಗಳನ್ನು ಬಳಸಿ ನಂತರ ಎಕ್ಸ್ಜಿ ಬೂಸ್ಟ್ ((XGBoost),ರಾಂಡಮ್ ಫಾರೆಸ್ಟ್ (Random forest) ಮತ್ತು ಗ್ರೇಡಿಯಂಟ್ ಬೂಸ್ಟಿಂಗ್ (gradienr boosting) ಮೂಲಕ ಕಾಯಿಲೆಯ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ತಂತ್ರಜ್ಞಾನವು ಒಟ್ಟಾರೆಯಾಗಿ 94.79% ನಿಖರತೆಯನ್ನು ಸಾಧಿಸುತ್ತದೆ.

ಈ ಯಂತ್ರವು ಪೋಷಕರಿಗೆ ಮತ್ತು ಮಕ್ಕಳನ್ನು ಆರೈಕೆ ಮಾಡುವವರಿಗೆ ತುಂಬಾ ಸಹಾಯಕವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.