• Home  
  • ಬಂಟಕಲ್‌ ;  ಬೈಕಿಗೆ ಟೆಂಪೋ ಡಿಕ್ಕಿ, ಬೈಕ್ ಸವಾರ ಮೃತ್ಯು (bantakal tempo collides with bike: bike rider dies)
- ಅಪರಾಧ

ಬಂಟಕಲ್‌ ;  ಬೈಕಿಗೆ ಟೆಂಪೋ ಡಿಕ್ಕಿ, ಬೈಕ್ ಸವಾರ ಮೃತ್ಯು (bantakal tempo collides with bike: bike rider dies)

Share: ಬಂಟಕಲ್‌ : ಬೈಕಿಗೆ ಟೆಂಪೋ ಡಿಕ್ಕಿ, ಬೈಕ್ ಸವಾರ ಮೃತ್ಯು (Bantakal) ಬಂಟಕಲ್ಲು:  ತಡರಾತ್ರಿ ಬಂಟಕಲ್ಲು ಅರಸೀಕಟ್ಟೆಯ ರಸ್ತೆಯಲ್ಲಿ ಬೈಕೊಂದು ಅಫಘಾತಕ್ಕೆ ಈಡಾಗಿ ಬೈಕ್ ಸವಾರ ಮೃತ ಪಟ್ಟ ಘಟನೆ ಘಟಿಸಿದೆ. ಮೃತ ಯುವಕನನ್ನು ಶಂಕರಪುರದ ಶ್ಯಾಮ ಎಂಬವರ ಮಗ ದರ್ಶನ್‌ (19)ಎಂದು ಗುರುತಿಸಲಾಗಿದೆ.  ತಡ ರಾತ್ರಿ ತರಕಾರಿ ಸಾಗಾಟ ಮಾಡುತಿದ್ದ ವಾಹನ ಡಿಕ್ಕಿಯಾಗಿ ಪರಾರಿ ಆಗಿತ್ತು. ಶಿರ್ವ ಪೋಲಿಸರು ವಾಹನ ಪತ್ತೆ ಹಚ್ಚಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.   ಮೃತ ಬೈಕ್ ಸವಾರ ಮೂಲತಃ ಕಾರವಾರ […]

ಬಂಟಕಲ್‌ : ಬೈಕಿಗೆ ಟೆಂಪೋ ಡಿಕ್ಕಿ, ಬೈಕ್ ಸವಾರ ಮೃತ್ಯು

(Bantakal) ಬಂಟಕಲ್ಲು:  ತಡರಾತ್ರಿ ಬಂಟಕಲ್ಲು ಅರಸೀಕಟ್ಟೆಯ ರಸ್ತೆಯಲ್ಲಿ ಬೈಕೊಂದು ಅಫಘಾತಕ್ಕೆ ಈಡಾಗಿ ಬೈಕ್ ಸವಾರ ಮೃತ ಪಟ್ಟ ಘಟನೆ ಘಟಿಸಿದೆ.

ಮೃತ ಯುವಕನನ್ನು ಶಂಕರಪುರದ ಶ್ಯಾಮ ಎಂಬವರ ಮಗ ದರ್ಶನ್‌ (19)ಎಂದು ಗುರುತಿಸಲಾಗಿದೆ.

 ತಡ ರಾತ್ರಿ ತರಕಾರಿ ಸಾಗಾಟ ಮಾಡುತಿದ್ದ ವಾಹನ ಡಿಕ್ಕಿಯಾಗಿ ಪರಾರಿ ಆಗಿತ್ತು. ಶಿರ್ವ ಪೋಲಿಸರು ವಾಹನ ಪತ್ತೆ ಹಚ್ಚಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

  ಮೃತ ಬೈಕ್ ಸವಾರ ಮೂಲತಃ ಕಾರವಾರ ಕಡೆಯವನಾಗಿದ್ದು ಶಂಕರಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ.  ಕೆಲವೇ ದಿನಗಳ ಹಿಂದೆ ಇದೇ ಯುವಕ ಬೈಕ್ ಅಫಘಾತದಲ್ಲಿ ಕೈ ಮೂಳೆ ಮುರಿತಕ್ಕೆ ಒಳಗಾಗಿ ಮನೆಯಲ್ಲಿದ್ದ ಎನ್ನಲಾಗಿದೆ.

  ಅಫಘಾತದ ರಭಸಕ್ಕೆ ಮೃತನ ತಲೆಬುರುಡೆ ಒಡೆದು ಮಿದುಳು ಹೊರಕ್ಕೆ ಬಿದ್ದ ದೃಶ್ಯ ಭೀಕರವಾಗಿತ್ತು.  

 ಶಿರ್ವ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು , ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಂಬುಲೆನ್ಸ್ ವಾಹನದಲ್ಲಿ ಮೃತ ಶರೀರವನ್ನು ಜಿಲ್ಲಾಸ್ಪತೆಯ ಶವಗಾರಕ್ಕೆ ಸಾಗಿಸಲಾಯಿತು.

 ಶಿರ್ವ ಠಾಣಾಧಿಕಾರಿ ಶಕ್ತಿವೇಲು (SI Shakthivelu) ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.