• Home  
  • ಬಂಟಕಲ್;‌ ಶಿಕ್ಷಣದ ಹೊರತಾಗಿ ವೃತ್ತಿಪರ ಜೀವನಕ್ಕೆ ಐಇಇಇ ಮೂಲಕ ಜಾಗೃತಿ (“Beyond the classroom: Discover IEEE for professional growth”)
- ಶಾಲಾ ಕಾಲೇಜು

ಬಂಟಕಲ್;‌ ಶಿಕ್ಷಣದ ಹೊರತಾಗಿ ವೃತ್ತಿಪರ ಜೀವನಕ್ಕೆ ಐಇಇಇ ಮೂಲಕ ಜಾಗೃತಿ (“Beyond the classroom: Discover IEEE for professional growth”)

Share: ಬಂಟಕಲ್;‌ ಶಿಕ್ಷಣದ ಹೊರತಾಗಿ ವೃತ್ತಿಪರ ಜೀವನಕ್ಕೆ ಐಇಇಇ ಮೂಲಕ ಜಾಗೃತಿ (Bantakal) ಬಂಟಕಲ್: ಬಂಟಕಲ್‌  ಶ್ರೀ ಮಧ್ವ ವಾದಿರಾಜ ತಾಂತ್ರಿಕ  ಮಹಾ ವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕವು ವಿಶ್ವದ ಅತೀ ದೊಡ್ಡ ತಾಂತ್ರಿಕ ಸಂಸ್ಥೆ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಸಹಯೋಗದೊಂದಿಗೆ ಐಇಇಇ ಮೂಲಕ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಲಭ್ಯವಿರುವ ಅವಕಾಶಗಳ ಕುರಿತು ಜಾಗೃತಿ ಮೂಡಿಸುವ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಕೆನರಾ ಇಂಜಿನಿಯರಿಂಗ್  ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ  ಸಹಾಯಕ ಪ್ರಾಧ್ಯಾಪಕಿ […]

(Bantakal) ಬಂಟಕಲ್: ಬಂಟಕಲ್‌  ಶ್ರೀ ಮಧ್ವ ವಾದಿರಾಜ ತಾಂತ್ರಿಕ  ಮಹಾ ವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕವು ವಿಶ್ವದ ಅತೀ ದೊಡ್ಡ ತಾಂತ್ರಿಕ ಸಂಸ್ಥೆ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಸಹಯೋಗದೊಂದಿಗೆ ಐಇಇಇ ಮೂಲಕ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಲಭ್ಯವಿರುವ ಅವಕಾಶಗಳ ಕುರಿತು ಜಾಗೃತಿ ಮೂಡಿಸುವ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಕೆನರಾ ಇಂಜಿನಿಯರಿಂಗ್  ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ  ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ  ಅಶ್ವಿನಿ ವಿ ಆರ್  ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

 ಇವರು ವೃತ್ತಿಪರ ಜೀವನದಲ್ಲಿ ಐಇಇಇಯ ಮಹತ್ವದ ಬಗ್ಗೆ ವಿವರಿಸಿದರು ಮತ್ತು ಕಾಲೇಜಿನ ಮಟ್ಟದಲ್ಲಿ ಐಇಇಇ ಘಟಕದ  ಅಡಿಯಲ್ಲಿ ಉಪ ಘಟಕದ ಸ್ಥಾಪನೆಗೆ  ಒತ್ತು ನೀಡಿದರು.

 ಮಹಿಳಾ ಇಂಜಿನಿಯರ್‌ಗಳ ಐಇಇಇ ಘಟಕದ ಬಗ್ಗೆ ಮಾತನಾಡಿ,  ಶೈಕ್ಷಣಿಕ ಮತ್ತು ಕೈಗಾರಿಕಾ ಸಹ ಸಂಶೋಧಕರೊಂದಿಗೆ ನೆಟ್‌ವರ್ಕಿಂಗ್ ಮತ್ತು ಸಹಯೋಗದಲ್ಲಿ ಮಹಿಳಾ ಪ್ರಾಧ್ಯಾಪಕರಿಗೆ  ಈ ಐಇಇಇ ಘಟಕವು ಹೇಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

 ಸಂಶೋಧನೆಗೆ ಸಂಬಂಧಿಸಿದಂತೆ ಅಧ್ಯಾಪಕರಿಗೆ  ದೊರಕುವ ಅನುದಾನದ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳನ್ನು ಆನ್‌ಲೈನ್ ಮುಖಾಂತರ  ಬೆಂಗಳೂರಿನ ಹರ್ಮನ್  ಇಂಟರ್ ನ್ಯಾಷನಲ್‌ನ ಹಿರಿಯ ಇಂಜಿನಿಯರ್ ಶ್ರೀಮತಿ ಜಯಸುಧಾ ಬಿ ಎಸ್ ಕೆ ಮತ್ತು ಟಿಕೆಎಮ್ ಸಿಇ ಕೊಲ್ಲಂ ನ ಪ್ರಾಧ್ಯಾಪಕಿ  ಡಾ. ಬಿಜುನಾ ಕುಂಜು ಕೆ ಇವರನ್ನು  ಸಂಪರ್ಕಿಸಿ ಐಇಇಇ ಘಟಕದ ಪ್ರಯೋಜನದ ಬಗ್ಗೆ ತಿಳಿಸಿಕೊಟ್ಟರು.

  ಕಾರ್ಯಕ್ರಮದಲ್ಲಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ. ರಾಧಕೃಷ್ಣ ಐತಾಳ್, ಐಇಇಇ ವಿದ್ಯಾರ್ಥಿ ಶಾಖೆಯ ಸಂಯೋಜಕರಾದ  ಡಾ. ಸದಾನಂದ ಎಲ್ ವಿವಿಧ ತಾಂತ್ರಿಕ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a comment

Your email address will not be published. Required fields are marked *

eMedia Kannada  @2025. All Rights Reserved.