• Home  
  • ಬಂಟರು ಹಾಗೂ ಬಿಲ್ಲವರು, ಮೊಗವೀರರ  ಎರಡು ಕಣ್ಣುಗಳಿದ್ದಂತೆ : ಕಿರಣ್ ಕುಮಾರ್ ಉದ್ಯಾವರ (Banta and billavas, Mogaveer’s  have two eyes : Kiran Kumar Udyavara)
- ರಾಜಕೀಯ

ಬಂಟರು ಹಾಗೂ ಬಿಲ್ಲವರು, ಮೊಗವೀರರ  ಎರಡು ಕಣ್ಣುಗಳಿದ್ದಂತೆ : ಕಿರಣ್ ಕುಮಾರ್ ಉದ್ಯಾವರ (Banta and billavas, Mogaveer’s  have two eyes : Kiran Kumar Udyavara)

Share: ಬಂಟರು ಹಾಗೂ ಬಿಲ್ಲವರು, ಮೊಗವೀರರ  ಎರಡು ಕಣ್ಣುಗಳಿದ್ದಂತೆ : ಕಿರಣ್ ಕುಮಾರ್ ಉದ್ಯಾವರ  ಉಡುಪಿ: ಮೊಗವೀರರಿಗೆ ಬಿಲ್ಲವ ಮತ್ತು ಬಂಟರು ಎರಡು ಕಣ್ಣುಗಳಿದ್ದಂತೆ. ಇದರಲ್ಲಿ ನಾವು ನಮ್ಮ ಎರಡೂ ಕಣ್ಣುಗಳನ್ನು ಉಳಿಸಿಕೊಳ್ಳುವುದು ಅತೀಮುಖ್ಯವಾಗಿದೆ ಎಂದು ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ (EX TP Member Kiran Kumar udyawara) ಹೇಳಿದ್ದಾರೆ.   ಕೋಟ ಶ್ರೀನಿವಾಸ ಪೂಜಾರಿಯವರು ರಾಜ್ಯದಲ್ಲಿ ಹಾಗೂ ಜಯಪ್ರಕಾಶ್ ಹೆಗ್ಡೆಯವರು ಸಂಸದರಾಗಿ ದೇಶದಲ್ಲಿರುವುದು ಅತಿಮುಖ್ಯ. ಸಂಸದರಾಗಿ ಜಯಪ್ರಕಾಶ್ ಹೆಗ್ಡೆ ಮತ್ತು […]

ಬಂಟರು ಹಾಗೂ ಬಿಲ್ಲವರು, ಮೊಗವೀರರ  ಎರಡು ಕಣ್ಣುಗಳಿದ್ದಂತೆ : ಕಿರಣ್ ಕುಮಾರ್ ಉದ್ಯಾವರ

 ಉಡುಪಿ: ಮೊಗವೀರರಿಗೆ ಬಿಲ್ಲವ ಮತ್ತು ಬಂಟರು ಎರಡು ಕಣ್ಣುಗಳಿದ್ದಂತೆ. ಇದರಲ್ಲಿ ನಾವು ನಮ್ಮ ಎರಡೂ ಕಣ್ಣುಗಳನ್ನು ಉಳಿಸಿಕೊಳ್ಳುವುದು ಅತೀಮುಖ್ಯವಾಗಿದೆ ಎಂದು ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ (EX TP Member Kiran Kumar udyawara) ಹೇಳಿದ್ದಾರೆ.

  ಕೋಟ ಶ್ರೀನಿವಾಸ ಪೂಜಾರಿಯವರು ರಾಜ್ಯದಲ್ಲಿ ಹಾಗೂ ಜಯಪ್ರಕಾಶ್ ಹೆಗ್ಡೆಯವರು ಸಂಸದರಾಗಿ ದೇಶದಲ್ಲಿರುವುದು ಅತಿಮುಖ್ಯ. ಸಂಸದರಾಗಿ ಜಯಪ್ರಕಾಶ್ ಹೆಗ್ಡೆ ಮತ್ತು ರಾಜ್ಯದಲ್ಲಿ ನಮ್ಮ ಪರವಾಗಿ ಹೋರಾಡಲು ಕೋಟ ಶ್ರೀನಿವಾಸ ಪೂಜಾರಿ ಎರಡು ಶಕ್ತಿ ಸಿಕ್ಕಂತಾಗುತ್ತದೆ. ಆದುದರಿಂದ ನಾವು ಯೋಚಿಸಿ ಮತ ಹಾಕಬೇಕಾಗಿದೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.

 ಕರಾವಳಿಯ ಸಮಸ್ಯೆಗಳನ್ನು ಪ್ರಧಾನಮಂತ್ರಿಗಳ ಗಮನಕ್ಕೆ ತರುವ, ಅಭಿವೃದ್ಧಿಗೆ ಪೂರಕವಾಗುವ ಸಂಸದರು ಇಲ್ಲಿಗೆ ಬೇಕಾಗಿದ್ದಾರೆ. ಉಡುಪಿ ಜಿಲ್ಲೆ ಅಭಿವೃದ್ಧಿ ಕೆಲಸದಲ್ಲಿ ೧೦ ವರ್ಷ ಹಿಂದೆ ಬಿದ್ದಿದೆ.

 ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಇರುವ ಉಡುಪಿಯಲ್ಲಿ ಒಂದೇ ಒಂದು ಐಟಿ ಅಥವಾ ಯುವಕ ಯುವತಿಯರಿಗೆ ಒಳ್ಳೆಯ ಉದ್ಯೋಗ ನೀಡುವಂತಹ  ಯಾವುದೇ ಕಂಪನಿ ಇನ್ನೂ ಬಂದಿಲ್ಲ. ಇಲ್ಲಿನ ಯುವಕ, ಯುವತಿಯರು  ಉದ್ಯೋಗ ಅರಸಿ ಇತರ ಕಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯೇ ಇಲ್ಲಿನ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ  ಸಿಗುವಂತಾಗಬೇಕಿದೆ.

  ಈಗಾಗಲೇ ನಾವು ಉಡುಪಿ ನಗರದ ಹೊರವಲಯದಲ್ಲಿರುವ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆ ಕಂಡಿದ್ದೇವೆ. ಅಲ್ಲದೇ  ಪ್ರತಿಷ್ಠಿತ ಮೀನುಗಾರಿಕಾ ಬಂದರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಮಲ್ಪೆ ಬೀಚಿಗೆ ಹೋಗುವ ರಸ್ತೆಯ ಕಾಮಗಾರಿಯು ಇನ್ನೂ ಕುಂಠಿತವಾಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.  ಒಟ್ಟಾರೆಯಾಗಿ ಕರಾವಳಿಯ ಮೀನುಗಾರರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.

ಒಂದೆರಡು ವರ್ಷ ಹಿಂದೆ ಮುಳುಗಡೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಬಗ್ಗೆ ಯಾವುದೇ ಸರಿಯಾದ ಮಾಹಿತಿಯನ್ನೂ ಸರಕಾರ ಇನ್ನೂ ನೀಡಿಲ್ಲ. ಇದಕ್ಕೆ ಕಾರಣ ಇಲ್ಲಿನ ಲೋಕಸಭಾ ಸದಸ್ಯರು ಈ ಬಗ್ಗೆ ಸರಿಯಾದ ಮಾಹಿತಿ ಪ್ರಧಾನಿಗಳ ಗಮನಕ್ಕೆ ತಂದಿಲ್ಲ. ಇಲ್ಲಿನ ಲೋಕಸಭಾ ಸದಸ್ಯರು  ತಮ್ಮ ಹೆಸರಿನಿಂದ ತಮ್ಮ ಅಭಿವೃದ್ಧಿ ಕಾರ‍್ಯದಿಂದ ಗೆಲ್ಲದೇ ಬರೀ ಪ್ರಧಾನಮಂತ್ರಿಗಳ ಹೆಸರಲ್ಲಿ ಗೆದ್ದಿದ್ದಾರೆ. ಹೀಗಾಗಿ ಇಲ್ಲಿನ ಯಾವುದೇ ಸಮಸ್ಯೆಗಳು ಪ್ರಧಾನ ಮಂತ್ರಿಗಳ ಗಮನಕ್ಕೆ ಬಂದಿಲ್ಲ. ಮುಂದಿನ ಸಂಸದರು ಕೂಡ ಪ್ರಧಾನಿಗಳ ಹೆಸರಲ್ಲಿ ಗೆದ್ದರೆ, ಕರಾವಳಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ಎಂದು ಕಿರಣ್‌ ಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ .

 ಮುಂದೆ ಓರ್ವ ಉತ್ತಮ ನಾಯಕನನ್ನು ನಾವು ಗೆಲ್ಲಿಸಿದರೆ, ಇಲ್ಲಿನ ಸಮಸ್ಯೆಗಳ ಬಗ್ಗೆ ಪ್ರಧಾನಿಗಳ ಬಳಿ ಮಾತನಾಡಲು ಸಾಧ್ಯವಾಗುತ್ತದೆ. ಆದುದರಿಂದ ಶಾಸಕರಾಗಿ, ಮಂತ್ರಿಗಳಾಗಿ, ಲೋಕಸಭಾ ಸದಸ್ಯರಾಗಿ ಅನುಭವ ಇರುವ ಜಯಪ್ರಕಾಶ್ ಹೆಗ್ಡೆಯವರನ್ನು ಆರಿಸಿ ಕಳಿಸಿದರೆ, ಕರಾವಳಿ ಭಾಗದ ಜನರಿಗೆ ನ್ಯಾಯ ಒದಗಿಸಿದಂತಾಗುತ್ತದೆ.

  ಕೋಟ ಶ್ರೀನಿವಾಸ ಪೂಜಾರಿ ಅವರು ಓರ್ವ ಉತ್ತಮ ನಾಯಕ. ಅವರು ರಾಜ್ಯದ ಅಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿದ್ದಾರೆ. ಮತ್ತೊಂದೆಡೆ ಜಯಪ್ರಕಾಶ್ ಹೆಗ್ಡೆ ಅವರು ಕೂಡಾ ಓರ್ವ ಅಭಿವೃದ್ಧಿಗೆ ಪೂರಕವಾಗಿರುವ ಅಭ್ಯರ್ಥಿಯಾಗಿದ್ದಾರೆ. ಅವರು ಸಂಸದರಾಗಿ ದೇಶದ ಹಾಗೂ ಉಡುಪಿ  ಚಿಕ್ಕಮಗಳೂರಿನ  ಅಭಿವೃದ್ಧಿಗೆ ಬೇಕಾಗಿದ್ದಾರೆ.

ಯಾವುದೇ ರಾಜಕೀಯ ಪಕ್ಷದ ಪ್ರಚಾರ ಕಾರ‍್ಯದಲ್ಲಿ ಹಿಂದುಳಿದ ವರ್ಗದವರನ್ನು ಕಾಣಬಹುದು. ಎಲ್ಲಾ ಕೆಲಸ ಕಾರ್ಯದಲ್ಲಿಯೂ ಹಿಂದುಳಿದ ವರ್ಗದವರು ಮುಂದು. ಅದೇ ರೀತಿ ಅನ್ಯಾಯ ಕೂಡ ಹಿಂದುಳಿದ ವರ್ಗದವರಿಗೆ ಸೀಮಿತ. ಇದನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ.

ಕರಾವಳಿಯಲ್ಲಿ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ, ವಿದ್ಯಾಭ್ಯಾಸ ಉದ್ಯೋಗ ಸಿಗುವಂತಾಗಬೇಕು ಎಂದೂ ಕಿರಣ್‌ ಕುಮಾರ್‌ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.