• Home  
  • ಬಂಟ ಸಮುದಾಯದ ಸಾಂಸ್ಕೃತಿಕ ಪ್ರಜ್ಞೆ, ಕ್ರೀಡಾ ಮನೋಭಾವ ಎಲ್ಲಾ ರಂಗದಲ್ಲಿ ಮಿಂಚಲು ಕಾರಣ; ಡಾ. ಎಂ. ಮೋಹನ್ ಅಳ್ವಾ (Dr. M Mohan Alva)
- ಕರಾವಳಿ

ಬಂಟ ಸಮುದಾಯದ ಸಾಂಸ್ಕೃತಿಕ ಪ್ರಜ್ಞೆ, ಕ್ರೀಡಾ ಮನೋಭಾವ ಎಲ್ಲಾ ರಂಗದಲ್ಲಿ ಮಿಂಚಲು ಕಾರಣ; ಡಾ. ಎಂ. ಮೋಹನ್ ಅಳ್ವಾ (Dr. M Mohan Alva)

Share: ಬಂಟ ಸಮುದಾಯದ ಸಾಂಸ್ಕೃತಿಕ ಪ್ರಜ್ಞೆ, ಕ್ರೀಡಾ ಮನೋಭಾವ ಎಲ್ಲಾ ರಂಗದಲ್ಲಿ ಮಿಂಚಲು ಕಾರಣ; ಡಾ. ಎಂ. ಮೋಹನ್ ಅಳ್ವಾ (Dr. M Mohan Alva) (UDUPI) ಉಡುಪಿ:  ಬಂಟ ಸಮುದಾಯಕ್ಕೆ ಇರುವ ಸಾಂಸ್ಕೃತಿಕ ಪ್ರಜ್ಞೆ ಮತ್ತು ಕ್ರೀಡಾ ಮನೋಭಾವವವೇ ಅವರು ಎಲ್ಲಾ ರಂಗದಲ್ಲಿ ಮೆರೆಯುವುದಕ್ಕೆ ಕಾರಣವಾಗಿದೆ. ಸಾಂಸ್ಕೃತಿಕ ರಂಗಕ್ಕೆ ಬಂಟರ ಕೊಡುಗೆ ಅಪೂರ್ವವಾಗಿದೆ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಅಳ್ವಾ ಹೇಳಿದರು.   ಅವರು ಅವರು ಜಾಗತಿಕ ಬಂಟರ […]

ಬಂಟ ಸಮುದಾಯದ ಸಾಂಸ್ಕೃತಿಕ ಪ್ರಜ್ಞೆ, ಕ್ರೀಡಾ ಮನೋಭಾವ ಎಲ್ಲಾ ರಂಗದಲ್ಲಿ ಮಿಂಚಲು ಕಾರಣ; ಡಾ. ಎಂ. ಮೋಹನ್ ಅಳ್ವಾ (Dr. M Mohan Alva)

(UDUPI) ಉಡುಪಿ:  ಬಂಟ ಸಮುದಾಯಕ್ಕೆ ಇರುವ ಸಾಂಸ್ಕೃತಿಕ ಪ್ರಜ್ಞೆ ಮತ್ತು ಕ್ರೀಡಾ ಮನೋಭಾವವವೇ ಅವರು ಎಲ್ಲಾ ರಂಗದಲ್ಲಿ ಮೆರೆಯುವುದಕ್ಕೆ ಕಾರಣವಾಗಿದೆ. ಸಾಂಸ್ಕೃತಿಕ ರಂಗಕ್ಕೆ ಬಂಟರ ಕೊಡುಗೆ ಅಪೂರ್ವವಾಗಿದೆ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಅಳ್ವಾ ಹೇಳಿದರು.

  ಅವರು ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ವಿಶ್ವ ಬಂಟರ ಸಮ್ಮೇಳನದ 2ನೇ ದಿನ ಇಲ್ಲಿನ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  ಸೌಂದರ್ಯ ಪ್ರಜ್ಞೆ ಇರುವುದರಿಂದ ಬಂಟರು ಸಿನೆಮಾದಂತಹ ಪ್ರದರ್ಶನ ಕಲೆಗಳಲ್ಲಿ ಯಶಸ್ವಿಯಾಗಿದ್ದಾರೆ. ಸಾಂಸ್ಕೃತಿಕ ಪ್ರಜ್ಞೆಯಿಂದಾಗಿ ಯಕ್ಷಗಾನ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿ, ಮೇಳಗಳ ಸಂಘಟಕರಾಗಿ, ಯಕ್ಷಗಾನ ಪೋಷಕರಾಗಿ ಬಂಟರು ತೆಂಕು ಮತ್ತು ಬಡಗುತಿಟ್ಟುಗಳರೆಡನ್ನು ಸಂಘಟಿಸುವುದಕ್ಕೆ ಮುನ್ನಡೆಸುವುದಕ್ಕೆ ಕಾರಣರಾಗಿದ್ದಾರೆ. ಕ್ರೀಡಾ ಮನೋಭಾವದಿಂದ ಉದ್ಯೋಗ ಉದ್ಯಮಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದವರು ಉದಾಹರಿಸಿದರು.

  ಬಂಟ ಸಮುದಾಯದಲ್ಲಿ ಹುಟ್ಟಿ ಹಿಂದೂ ಧರ್ಮದಲ್ಲಿ ಬದುಕುತ್ತಿರುವುದು ತಮ್ಮೆಲ್ಲರ ಪುಣ್ಯ ಎಂದ ಅವರು ನಮ್ಮ ಪೂರ್ವಜರ ಸಾಧನೆಯ ಹೆಗ್ಗಳಿಕೆಯೇ ನಮ್ಮನ್ನು ಮುನ್ನಡೆಸುತ್ತಿದೆ ಎಂದರು.

  ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅದ್ಯಕ್ಷ ಐಕಳ ಹರೀಶ್ ಶೆಟ್ಟಿ (Aikala Harish Shetty) ವಹಿಸಿದ್ದರು.

 ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುರಚಿತ ಶೆಟ್ಟಿ ಆಗಮಿಸಿದ್ದರು.

  ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರ. ಕಾರ್ಯದರ್ಶಿ ಜಯಕರ ಶೆಟ್ಟಿಇಂದ್ರಾಳಿ (Jayakara Shetty Indrali) , ಪದಾಧಿಕಾರಿಗಳಾದ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ, ಚಂದ್ರಿಕಾ ಹರೀಶ್ ಶೆಟ್ಟಿ ವೇದಿಕೆಯಲ್ಲಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.