• Home  
  • ಬಜ್ಪೆ: ಕೆಂಜಾರು ಕಾಲೇಜು ಹಾಸ್ಟೇಲಿನ ಕೊಳಚೆ ನೀರಿನಿಂದ ರೋಗ ಭೀತಿ, ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ (Disease scare due to sewage water in Kenjaru College hostel, negligence by the administration)
- PROBLEMS

ಬಜ್ಪೆ: ಕೆಂಜಾರು ಕಾಲೇಜು ಹಾಸ್ಟೇಲಿನ ಕೊಳಚೆ ನೀರಿನಿಂದ ರೋಗ ಭೀತಿ, ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ (Disease scare due to sewage water in Kenjaru College hostel, negligence by the administration)

Share: ಬಜ್ಪೆ: ಕೆಂಜಾರು ಕಾಲೇಜು ಹಾಸ್ಟೇಲಿನ ಕೊಳಚೆ ನೀರಿನಿಂದ ರೋಗ ಭೀತಿ, ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ (Bajpe) ಬಜ್ಪೆ: ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು ಪ್ರದೇಶದಲ್ಲಿರುವ  ಶ್ರೀ ದೇವಿ ಕಾಲೇಜು   ಹಾಸ್ಟೆಲಿನ ಕೊಳಚೆ ನೀರನ್ನು ಪೈಪ್‌ ಮೂಲಕ ಸುಂದರಿ ಶೆಡ್ತಿ ಎಂಬವರಿಗೆ ಸೇರಿದ ಜಾಗಕ್ಕೆ ಬಿಡುತ್ತಿರುವ ಬಗ್ಗೆ ದೂರು ನೀಡಿದ್ದು, ಪಂಚಾಯತ್ ನೋಟಿಸ್ ನೀಡಿದ್ದರೂ, ಸಂಬಂಧಪಟ್ಟ ಕಾಲೇಜು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹಾಸ್ಟೆಲ್‌ ಕಟ್ಟಡದ ಕೊಳಚೆ ನೀರನ್ನು ಬೇರೆಯವರ […]

ಬಜ್ಪೆ: ಕೆಂಜಾರು ಕಾಲೇಜು ಹಾಸ್ಟೇಲಿನ ಕೊಳಚೆ ನೀರಿನಿಂದ ರೋಗ ಭೀತಿ, ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ

(Bajpe) ಬಜ್ಪೆ: ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು ಪ್ರದೇಶದಲ್ಲಿರುವ  ಶ್ರೀ ದೇವಿ ಕಾಲೇಜು   ಹಾಸ್ಟೆಲಿನ ಕೊಳಚೆ ನೀರನ್ನು ಪೈಪ್‌ ಮೂಲಕ ಸುಂದರಿ ಶೆಡ್ತಿ ಎಂಬವರಿಗೆ ಸೇರಿದ ಜಾಗಕ್ಕೆ ಬಿಡುತ್ತಿರುವ ಬಗ್ಗೆ ದೂರು ನೀಡಿದ್ದು, ಪಂಚಾಯತ್ ನೋಟಿಸ್ ನೀಡಿದ್ದರೂ, ಸಂಬಂಧಪಟ್ಟ ಕಾಲೇಜು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಹಾಸ್ಟೆಲ್‌ ಕಟ್ಟಡದ ಕೊಳಚೆ ನೀರನ್ನು ಬೇರೆಯವರ ಜಾಗಕ್ಕೆ ಬಿಡಲು ಅವಕಾಶ ಇಲ್ಲ. ಹೀಗಾಗಿ ಪಂಚಾಯತಿಗೆ ನೀಡಿರುವ ದೂರಿನ ಆಧಾರದಲ್ಲಿ ಸಂಸ್ಥೆಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ಸೂಕ್ತ ಕ್ರಮ ಜರಗಿಸದೆ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಕೊಳಚೆ ನೀರು ಹರಿಯುವುದನ್ನು ತಡೆಯಲು ಇಂಗು ಗುಂಡಿ ಅಥವಾ ಎಸ್ ಟಿಪಿ, ಟ್ರೀಟ್ ‌ಮೆಂಟ್ ಪ್ಲಾಂಟ್‌  ಅಳವಡಿಸುವಂತೆ ಪಂಚಾಯತ್ ಅಧಿಕಾರಿಗಳು ಹೇಳಿದ್ದರೂ, ಕಾಲೇಜು ಆಡಳಿತ ಮಂಡಳಿ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂದು ದೂರಿದ್ದಾರೆ.

ಕೊಳಚೆ ನೀರು ತೆರೆದ ಪ್ರದೇಶದಲ್ಲಿ ಹರಿಯುತ್ತಿದ್ದು, ಪರಿಸರದಲ್ಲಿ ಮೂಗು ಮುಚ್ಚಿಕೊಂಡು ವಾಸ ಮಾಡುವ ಪರಿಸ್ಥಿತಿ ಬಂದೊದಗಿದೆ. ಕೊಳಚೆ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ರೋಗ ಹರಡುವ ಭೀತಿ ಎದುರಾಗಿದೆ. ಕೂಡಲೇ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತು ಕೊಳ್ಳದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾದೀತು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.