• Home  
  • ಬಡ ಕುಟುಂಬವೊಂದಕ್ಕೆ ಸೂರು ಕಲ್ಪಿಸಲು ಶಟರ್‌ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡದಿಂದ ವೇಷ (Shutterbox Helping Hands team steps in to provide shelter for a poor family)
- help - ವ್ಯವಹಾರ - ಸಂಘ, ಸಂಸ್ಥೆಗಳು

ಬಡ ಕುಟುಂಬವೊಂದಕ್ಕೆ ಸೂರು ಕಲ್ಪಿಸಲು ಶಟರ್‌ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡದಿಂದ ವೇಷ (Shutterbox Helping Hands team steps in to provide shelter for a poor family)

Share: ಬಡ ಕುಟುಂಬವೊಂದಕ್ಕೆ ಸೂರು ಕಲ್ಪಿಸಲು ಶಟರ್‌ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡದಿಂದ ವೇಷ ಕಾಪುವಿನ ಪ್ರಸಿದ್ದ ಯೂಟ್ಯೂಬರ್ ಶಟರ್‌ಬಾಕ್ಸ್ ಸಚಿನ್ ಶೆಟ್ಟಿ ನೇತೃತ್ವದ  ತಂಡ (Kaup) ಕಾಪು :ಕಳೆದ ಮೂರು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷ ಧರಿಸುವುದರ ಮೂಲಕ ಸಂಗ್ರಹವಾಗುವ ಹಣವನ್ನು ಅನಾರೋಗ್ಯ ಪೀಡಿತರಿಗೆ, ನೊಂದವರಿಗೆ ನೆರವು ನೀಡುವ ಮೂಲಕ ಸಮಾಜದ  ಉದ್ದಾರಕ್ಕಾಗಿ ಶ್ರಮಿಸಿದ ಕಾಪುವಿನ ಶಟರ್‌ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡ ಈ ಬಾರಿ ಬಡ ಕುಟುಂಬವೊಂದಕ್ಕೆ ವಾಸಿಸಲು ಬೇಕಾಗುವ ಸೂರೊಂದನ್ನು ಕಲ್ಪಿಸಿ ಕನಸ್ಸು ಕಟ್ಟಿಕೊಂಡಿದೆ.     […]

(Kaup) ಕಾಪು :ಕಳೆದ ಮೂರು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷ ಧರಿಸುವುದರ ಮೂಲಕ ಸಂಗ್ರಹವಾಗುವ ಹಣವನ್ನು ಅನಾರೋಗ್ಯ ಪೀಡಿತರಿಗೆ, ನೊಂದವರಿಗೆ ನೆರವು ನೀಡುವ ಮೂಲಕ ಸಮಾಜದ  ಉದ್ದಾರಕ್ಕಾಗಿ ಶ್ರಮಿಸಿದ ಕಾಪುವಿನ ಶಟರ್‌ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡ ಈ ಬಾರಿ ಬಡ ಕುಟುಂಬವೊಂದಕ್ಕೆ ವಾಸಿಸಲು ಬೇಕಾಗುವ ಸೂರೊಂದನ್ನು ಕಲ್ಪಿಸಿ ಕನಸ್ಸು ಕಟ್ಟಿಕೊಂಡಿದೆ.

    ಕಾಪುವಿನ ಪ್ರಸಿದ್ದ ಯೂಟ್ಯೂಬರ್ ಶಟರ್‌ಬಾಕ್ಸ್ ಸಚಿನ್ ಶೆಟ್ಟಿಯವರ ನೇತೃತ್ವದ ತಂಡ, ಕಳೆದ ಮೂರು ವರ್ಷಗಳಿಂದ ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾನಾ ವೇಷವನ್ನು ತೊಟ್ಟು ಜನರಿಂದ ಹಣವನ್ನು ಸಂಗ್ರಹಿಸುವ ಮೂಲಕ ಅಸಕ್ತರಿಗೆ ಹಾಗೂ ನೊಂದವರಿಗೆ ನೆರವಾಗಿದ್ದಾರೆ.

    2023 ರಲ್ಲಿ ರೂ.10ಲಕ್ಷದ 81 ಸಾವಿರ ಸಂಗ್ರಹಿಸಿ ಒಂದು ಪುಟ್ಟ ಬಾಲಕಿಯ ಚಿಕಿತ್ಸೆಗೆ ನೆರವು ನೀಡಿದ್ದಾರೆ. 2024ರ ಕಳೆದ ವರ್ಷ ಬೈಲೂರಿನ ಹೊಸ ಬೆಳಕು ಆಶ್ರಮಕ್ಕೆ ಸುಮಾರು 15 ಲಕ್ಷಕ್ಕೂ ಅಧಿಕ ಮೊತ್ತದ ನೆರವು ನೀಡಿದ್ದಾರೆ. ಪ್ರಸ್ತುತ ಈ ವರ್ಷದಲ್ಲಿ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಬಡ ಕುಟುಂಬವೊಂದಕ್ಕೆ ಸುಮಾರು 15 ಲಕ್ಷಕ್ಕೂ ಅಧಿಕ ಮೊತ್ತದ ಸ್ವಂತ ಮನೆಯೊಂದನ್ನು ನಿರ್ಮಿಸುವ ದೊಡ್ದ ಯೋಜನೆಗೆ ಯುವಕರ ತಂಡ ಕೈ ಹಾಕಿದೆ. ಈ ಯುವಕರ ಕನಸ್ಸು ನನಸಾಗಲು ಸಹೃದಯಿ ದಾನಿಗಳ ನೆರವಿನ ಅಗತ್ಯವೂ ದೊಡ್ಡ ಮಟ್ಟದಲ್ಲಿ ಬೇಕಾಗಿದೆ.

    ಒಂದೆಡೆ ಮುದಿ ವಯಸ್ಸಿನ ತಾಯಿ ಮತ್ತೊಂದೆಡೆ ಮಗುವಿನ ವಿದ್ಯಾಭ್ಯಾಸ ಇವೆಲ್ಲದರ ಮಧ್ಯೆ ದೈವ ನರ್ತನ ಸೇವೆಯಲ್ಲೇ ದಿನ ಕಳೆಯುವ ಕುಟುಂಬವೊಂದು ಸ್ವಂತ ಸೂರನ್ನು ಭದ್ರಪಡಿಸಿಕೊಳ್ಳಲು ಕಳೆದ ಹಲವು ವರ್ಷಗಳಿಂದಲೂ ಹರ ಸಾಹಸವನ್ನು ಪಡುತ್ತಿದೆ.

   ಗಾಳಿ ಮಳೆಗೆ ಯಾವುದೇ ಸಂದರ್ಭದಲ್ಲಿ ಧರೆಗೆ ಬೀಳುವ ಮಟ್ಟಕ್ಕೆ ತಲುಪಿದ ಮನೆಯಲ್ಲೇ ನಿತ್ಯ ಕಷ್ಟದ ದಿನಗಳನ್ನು ಕಳೆಯುತ್ತಿರುವ ಕಾರ್ಕಳದ ಪಳ್ಳಿ  ಗ್ರಾಮದ 90 ವರ್ಷದ ವಯೋವೃದ್ಧ ತಾಯಿ ಕೊರಪಳು, ಮಗ ಬಾಬು ಅವರ ಪತ್ನಿ ಹಾಗೂ 6ನೇ ತರಗತಿಯಲ್ಲಿ ಓದುತ್ತಿರುವ ಮಗ ಇದೇ ಜೋಪಡಿಯಂತಿರುವ ಮನೆಯಲ್ಲಿ ಗಾಳಿ ಮಳೆಯ ಸಂದರ್ಭದಲ್ಲಿ ನಿದ್ದೆ ಬಿಟ್ಟು ಜೀವಭಯದಲ್ಲೇ ದಿನ ಕಳೆಯುವಂತಾಗಿದೆ.

   ಇವರು ವಾಸಿಸುತ್ತಿರುವ ಮನೆ ಸಂಪೂರ್ಣ ಹಾಳಾಗಿದ್ದು, ತುಂಬಾ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಕುಟುಂಬದ ಕಣ್ಣೀರ ಕಥೆಯನ್ನು ಅರಿತ ಶಟರ್‌ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡ ಬಡ ಕುಟುಂಬಕ್ಕೆ ಸ್ವಂತ ಮನೆಯೊಂದನ್ನು ನಿರ್ಮಿಸಲು ಪಣ ತೊಟ್ಟಿದೆ.

  ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸುಮಾರು 30 ಯುವಕರ ತಂಡವನ್ನು ಒಳಗೊಂಡ ಶಟರ್ ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್‌ನ ತಂಡ, ಈ ಬಾರಿಯೂ ವಿಭಿನ್ನ ವೇಷವನ್ನು ತೊಟ್ಟು ಉಡುಪಿಯ ಮುಖ್ಯ ಪೇಟೆ ಪರಿಸರ, ಕೃಷ್ಣ ಮಠ, ಮಲ್ಪೆ ಸೇರಿದಂತೆ ನಗರ ಪ್ರಮುಖ ಬೀದಿಗಳಲ್ಲಿ ಸಂಚಾರವನ್ನು ನಡೆಸಿದ್ದಾರೆ. ಈ ವರ್ಷವೂ ಸಚಿನ್ ಶೆಟ್ಟಿಯವರ ವೇಷದ ಜೊತೆಗೆ ಸ್ನೇಹಿತರಾದ ಅಭಿಷೇಕ್ ಶೆಟ್ಟಿ, ರೇಖನಾಥ್, ಜಗದೀಪ್ ಮೆಂಡನ್, ಸಿದ್ದಾರ್ಥ್ ಸಾಲಿಯಾನ್ ಬಣ್ಣ ಬಣ್ಣದ ಉಡುಗೆಯ ವೇಷವನ್ನು ತೊಟ್ಟು ಮನರಂಜನೆಯ ಜೊತೆಗೆ ಬಡ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಹಣವನ್ನು ಸಂಗ್ರಹಿಸಿದೆ.

 ಇಡೀ ದಿನದಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಬಡಕುಟುಂಬಕ್ಕೆ ಮನೆಯನ್ನು ಕಟ್ಟಿಕೊಡುವ ದೊಡ್ಡ ಸಾಹಸಕ್ಕೆ ಯುವಕರ ತಂಡ ಕೈ ಹಾಕಿದೆ. ಈ ಯೋಜನೆಗೆ  ಶಂಕು ಸ್ಥಾಪನೆಯನ್ನು ಮಾಡಲಾಗಿದೆ.

 ಈ ಬಡ ಕುಟುಂಬಕ್ಕೆ ಬೆಳಕು, ಭದ್ರತೆಯ ಆಶಾಕಿರಣ ನೀಡಲು  ಹೊರಟಿರುವ  ಯುವಕರ ತಂಡಕ್ಕೆ  ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.