• Home  
  • ಬಳ್ಳಿಗೇರಿ : ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 229ನೆಯ ಜನ್ಮಜಯಂತ್ಯೋತ್ಸವ (Balligeri: 229th birth anniversary of Sri Krantiveer Sangolli Rayanna)
- ಸಂಘ, ಸಂಸ್ಥೆಗಳು

ಬಳ್ಳಿಗೇರಿ : ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 229ನೆಯ ಜನ್ಮಜಯಂತ್ಯೋತ್ಸವ (Balligeri: 229th birth anniversary of Sri Krantiveer Sangolli Rayanna)

Share:  ಬಳ್ಳಿಗೇರಿ : ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 229ನೆಯ ಜನ್ಮಜಯಂತ್ಯೋತ್ಸವ   ಎಸ್.ಎಸ್.ಎಲ್. ಸಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ​(Athani) ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಆಡಳಿತ ಹಾಗೂ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸೇವಾ ಸಂಘ ಮತ್ತು ಶ್ರೀ ಭೀರಲಿಂಗೇಶ್ವರ ಅಭಿವೃದ್ಧಿ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ, ನಾಡಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 229ನೆಯ ಜನ್ಮ ಜಯಂತ್ಯೋತ್ಸವವನ್ನು ವಿಜೃಂಭಣೆ ಹಾಗೂ […]

​(Athani) ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಆಡಳಿತ ಹಾಗೂ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸೇವಾ ಸಂಘ ಮತ್ತು ಶ್ರೀ ಭೀರಲಿಂಗೇಶ್ವರ ಅಭಿವೃದ್ಧಿ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ, ನಾಡಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 229ನೆಯ ಜನ್ಮ ಜಯಂತ್ಯೋತ್ಸವವನ್ನು ವಿಜೃಂಭಣೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

​  ಬಳ್ಳಿಗೇರಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಭಕ್ತಿಪೂರ್ವಕ ನಮನ ಸಲ್ಲಿಸಲಾಯಿತು.

  ನಂತರ ಗ್ರಾಮ ಪಂಚಾಯತ್ ಕಾರ್ಯಾಲಯ ಹಾಗೂ ವಿವಿಧ ಶಾಲೆಗಳ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

​  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ:

​ಬಳ್ಳಿಗೇರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ, 2024-25 ಹಾಗೂ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು. ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸಲು ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ 1,000 ರೂ.  ಪ್ರತ್ಯೇಕ ಗೌರವಧನ ನೀಡಲಾಯಿತು.

 ಕುಮಾರಿ ಪವಿತ್ರಾ ಶ್ರೀಶೈಲ ಕುರುಬರ (ಬಳ್ಳಿಗೇರಿ) – 2024-25ನೇ ಸಾಲು, 625ಕ್ಕೆ 618 ಅಂಕಗಳು (98.88%), ​ಕುಮಾರಿ ಸೀತಾ ಶಂಕರ ಕರೋಲಿ (ಅನಂತಪೂರ) – 2025-26ನೇ ಸಾಲು, ಬಿ.ಬಿ. ಇಮ್ಮಡಿ ಸರಕಾರಿ ಪಬ್ಲಿಕ್ ಶಾಲೆ, 625ಕ್ಕೆ 607 ಅಂಕಗಳು (97.12%), ಕುಮಾರಿ ಶ್ರೇಯಾ ಮಹದೇವ ಗುರವ (ಖಿಳೇಗಾಂವ) – ದ್ವಿತೀಯ ಸ್ಥಾನ, 625ಕ್ಕೆ 600 ಅಂಕಗಳು (96.00%). ಕುಮಾರ ಮಹಾಂತೇಶ ಶಿದರಾಯ ಕಾರಜನಗಿ (ಗುಂಡೇವಾಡಿ) – ತೃತೀಯ ಸ್ಥಾನ, 625ಕ್ಕೆ 599 ಅಂಕಗಳು.

​  ಈ ಸನ್ಮಾನ ಸಮಾರಂಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸೇವಾ ಸಂಘ ಹಾಗೂ ಭೀರಲಿಂಗೇಶ್ವರ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಗೌರವಿಸಿದರು.

​  ಸಂಜೆ  ಬಳ್ಳಿಗೇರಿಯ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಶ್ರೀ ರಾಯಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆಯು ವಿವಿಧ ಕಲಾತಂಡಗಳ ಮೇಳೈಕೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಶಿವಾಜಿ ವೃತ್ತದವರೆಗೆ ಯಶಸ್ವಿಯಾಗಿ ಜರುಗಿತು.

  ಅಥಣಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಗಿರಿಮಲ್ಲಪ್ಪ ಉಪ್ಪಾರ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮೆರವಣಿಗೆಯ ಬಳಿಕ ಭೀರಲಿಂಗೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

​ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ಚಂದ್ರಕಾಂತ ಇಮ್ಮಡಿ, ಮಾಜಿ ಜಿ.ಪಂ ಸದಸ್ಯ ನಿಂಗಪ್ಪ ಖೋಕಲೆ, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶ್ರೀದೇವಿ ವಾಲಿ, ಶಾಲೆಯ ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಮುಖಂಡರು, ಯುವಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.