ಉತ್ತರಪ್ರದೇಶ: ಬಾಲಕನನ್ನು ಕೊಂದು ತಿಂದ ಮೊಸಳೆಯನ್ನು ಹಿಡಿದು ಜನ ದೊಣ್ಣೆ, ರಾಡ್‍ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾ ದ್ವೀಪದ ಖಾಲ್ಸಾ ಘಾಟ್‌ನಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗೋಕುಲಪುರದ ನಿವಾಸಿ ಧರ್ಮೇಂದ್ರ ದಾಸ್ ಕುಟುಂಬ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಗಂಗಾ ನದಿಯ ದಡಕ್ಕೆ ತೆರಳಿದ್ದರು.ಈ ವೇಳೆ ಅವರು ಪುತ್ರ ಅಂಕಿತ್ ನೀರು ತರಲೆಂದು ನದಿಗೆ ಇಳಿದಿದ್ದಾಗ, ಇದ್ದಕ್ಕಿದ್ದಂತೆ ಮೊಸಳೆ ದಾಳಿ ಮಾಡಿದ ಬಾಲಕನನ್ನು ನೀರಿನೊಳಗೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ.
ಕುಟುಂಬಸ್ಥರು ಅಂಕಿತ್ನನ್ನು ರಕ್ಷಿಸಲು ಯತ್ನಿಸಿದರಾದರೂ ಮೊಸಳೆ ದಾಳಿಯಿಂದ ಸಾವನ್ನಪ್ಪಿದ್ದಾನೆ. ವಿಷಯ ತಿಳಿದು ಸ್ಥಳೀಯರು ನದಿಯ ಬಳಿ ಜಮಾಯಿಸಿ ಮೊಸಳೆಗೆ ಬಲೆ ಬೀಸಿ ದಡಕ್ಕೆ ಎಳೆದು ತಂದು ದೊಣ್ಣೆ ಮತ್ತು ರಾಡ್‌ನಿಂದ ಹೊಡೆದು ಸಾಯಿಸಿದ್ದಾರೆ.
ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ತನಿಖೆ ನಡೆಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಸಳೆಯನ್ನು ಕೊಂದವರ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ.

