ಬಾಲಕಿಯರ ಸರಕಾರಿ ಪ. ಪೂ.ಕಾಲೇಜಿಗೆ ಉಡುಪಿ ಕಸಾಪದಿಂದ ಪುಸ್ತಕಗಳ ಕೊಡುಗೆ
ಪುಸ್ತಕ ಹಸ್ತಾಂತರಿಸಿದ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ ಪಿ.
(Udupi) : ಉಡುಪಿ: ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪುಸ್ತಕಗಳ ಕೊಡುಗೆಯನ್ನು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ ಪಿ. ಕಾಲೇಜು ಪ್ರಾoಶುಪಾಲ ಜಗದೀಶ ಕುಮಾರ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ರಂಜನಿ ವಸಂತ್, ಸಂಘಟನಾ ಕಾರ್ಯದರ್ಶಿ ಸತೀಶ್ ಕೊಡವೂರು, ದೀಪಾ ಕರ್ಕಿ, ಎನ್. ಎಸ್. ಎಸ್. ಕಾರ್ಯಕ್ರಮಾಧಿಕಾರಿ ಭವ್ಯಾ ನಾಗರಾಜ ಎನ್. ಎಸ್. ಎಸ್. ನಾಯಕಿ ಮೇಘಾ ಹಾಗೂ ಉಪನ್ಯಾಸಕಿ ಸುಧಾ ಆಡುಕಳ ಉಪಸ್ಥಿತರಿದ್ದರು.

