ಬೆಂಗಳೂರು;ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರವಧಿ ಮುಗಿದ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ಒಂದು ಕಡೆ ಕಸರತ್ತು ನಡೆಯುತ್ತಿದೆ.ಇದರ ಬೆನ್ನಲ್ಲೇ ಮಾಜಿ ಸಚಿವ ವಿ. ಸೋಮಣ್ಣ ನನ್ನನ್ನು ರಾಜ್ಯಾಧ್ಯಕ್ಷನಾಗಿ ಮಾಡುವಂತೆ ಕೇಂದ್ರ ನಾಯಕರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಚುನಾವಣಾ ಬಳಿಕ ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೇನೆ.ಯಾರ ಮೇಲೆ ಏನು ಅಭಿಪ್ರಾಯ ಎಂದು ಹೇಳುವುದಕ್ಕಿಂತ ನಾನು 45 ವರ್ಷದ ಅನುಭವ ಹೇಳಿದ್ದೇನೆ. ನನ್ನನ್ನು ರಾಜ್ಯಾಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ. ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಈ ವಿಚಾರ ಎಷ್ಟು ಚರ್ಚೆ ಆಗುತ್ತದೆ ಎನ್ನುವುದು ಗೊತ್ತಿಲ್ಲ. ನಾನು ಬಿಜೆಪಿಗೆ ಬಂದು 15 ವರ್ಷ ಆಯ್ತು. ನನಗೆ ನೀಡಿದ್ದ ಎಲ್ಲಾ ಟಾಸ್ಕ್ ಮಾಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಒಟ್ಟಿಗೆ ನಡೆಸಿಕೊಂಡು ಹೋಗಬೇಕಿದೆ. ಸೋಮಣ್ಣಗೆ ರಾಜ್ಯಾಧ್ಯಕ್ಷ ಹುದ್ದೆ ಆಗುತ್ತಾ ಎನ್ನುವ ಮಾತು ಆಡ್ತುತ್ತಾರೆ.ಎಲ್ಲಾರಿಗೂ ಬೈತಾರೆ ಎನ್ನುವ ಮಾತು ಹೇಳ್ತಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನನ್ನಷ್ಟು ಓಪನ್ ಯಾರು ಇಲ್ಲ. ನನಗೆ ಅವಕಾಶ ನೀಡಿದರೆ ಗಾಂಭೀರ್ಯದಿಂದ ಕೆಲಸ ಮಾಡುತ್ತೇನೆ.100 ದಿನ ನನಗೆ ಅವಕಾಶ ಕೊಟ್ಟು ನೋಡಿ.ಕೆಲಸ ಮಾಡಿ ತೋರಿಸ್ತೇನೆ
ಎಂದು ಹೇಳಿದ್ದಾರೆ.
ನಾನು ರಿಸ್ಕ್ ತಗೊಂಡು ಕೆಲಸ ಮಾಡಿದ್ದೇನೆ. ಯಾರ್ ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನೋದು ನನಗೆ ಗೊತ್ತಿಲ್ಲ. ಪಕ್ಷಕ್ಕೆ ಹಿನ್ನಡೆ ಆಗಿದೆ. ಹೀಗಾಗಿ ಅವಕಾಶ ಕೊಡಿ ಎಂದು ಹೇಳಿದ್ದೇನೆ. ನಂಗೆ ಕೊಡಿ, ಹೊಂದಾಣಿಕೆ ಹೇಗಾಗತ್ತೆ ನೋಡೊಣ ಎಂದು ಹೇಳಿದ್ದಾರೆ.

