• Home  
  •   ಬಿಪಿಎಲ್ ಕಾರ್ಡ್‌ ಅನುಮೋದನೆಗೆ ಸರಕಾರದ ವೀಳಂಬ ನೀತಿಯಿಂದ ತೊಂದರೆ : ಶಾಸಕ ಗುರ್ಮೆ (Government’s delay in approving BPL cards is causing problems: MLA Gurme)
- ರಾಜಕೀಯ

  ಬಿಪಿಎಲ್ ಕಾರ್ಡ್‌ ಅನುಮೋದನೆಗೆ ಸರಕಾರದ ವೀಳಂಬ ನೀತಿಯಿಂದ ತೊಂದರೆ : ಶಾಸಕ ಗುರ್ಮೆ (Government’s delay in approving BPL cards is causing problems: MLA Gurme)

Share:   ಬಿಪಿಎಲ್ ಕಾರ್ಡ್‌ ಅನುಮೋದನೆಗೆ ಸರಕಾರದ ವೀಳಂಬ ನೀತಿಯಿಂದ ತೊಂದರೆ : ಶಾಸಕ ಗುರ್ಮೆ   873 ಬಿಪಿಎಲ್‌ ಪಡಿತರ ಚೀಟಿ ಎಪಿಎಲ್‌ ಆಗಿ ಪರಿವರ್ತನೆ: ಸಚಿವ ಮುನಿಯಪ್ಪ (Belgaum) ಬೆಳಗಾವಿ: ಕಾಪು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 873 ಬಿಪಿಎಲ್‌ ಪಡಿತರ ಚೀಟಿಯನ್ನು ಎಪಿಎಲ್‌ ಪಡಿತರ ಚೀಟಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.    ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕೇಳಿದ ಚುಕ್ಕೆ ಗುರುತಿಲ್ಲದ […]

(Belgaum) ಬೆಳಗಾವಿ: ಕಾಪು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 873 ಬಿಪಿಎಲ್‌ ಪಡಿತರ ಚೀಟಿಯನ್ನು ಎಪಿಎಲ್‌ ಪಡಿತರ ಚೀಟಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

   ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಅವರು ಉತ್ತರಿಸಿದರು.

 ಶಾಸಕ ಗುರ್ಮೆ ಮಾತನಾಡಿ, ರಾಜ್ಯದಲ್ಲಿ ಸುಮಾರು 3 ವರ್ಷಗಳಿಂದ ಬಿಪಿಎಲ್ ಪಡಿತರ ಚೀಟಿ ವಿತರಣೆಯಲ್ಲಿನ ವಿಳಂಬದಿಂದಾಗಿ ಸಾರ್ವಜನಿಕರು ಸರಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಇತ್ತೀಚಿನ 2 ವರ್ಷಗಳಲ್ಲಿ ಬಿಪಿಎಲ್‌ ಪಡಿತರ ಚೀಟಿಯನ್ನು ನಾನಾ ಕಾರಣಗಳಿಂದ ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಿರುವುದರಿಂದ ಗಂಭೀರ ಖಾಯಿಲೆಗಳ ಪ್ರಕರಣದಲ್ಲಿ ಬಿಪಿಎಲ್ ಕಾರ್ಡಿನ ಅನುಮೋದನೆ ನೀಡುವಲ್ಲಿನ ವಿಳಂಬತೆಯಿಂದ ಸಾರ್ವಜನಿಕರು ಆಯುಷ್ಮಾನ್ ಹಾಗೂ ಇತರ ವೈದ್ಯಕೀಯ ವಿನಾಯತಿ ಪ್ರಕರಣಗಳಲ್ಲಿ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಸಾರ್ವಜನಿಕರ ಸಂಕಷ್ಟದ ಅರಿವು ಸರಕಾರಕ್ಕಿದೆಯೇ ಎಂದು ಕೇಳಿದ್ದರು.

  ಇದಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, ಬಿಪಿಎಲ್ ಪಡಿತರ ಚೀಟಿ ಕೋರಿ  2, 95,986 ಅರ್ಜಿಗಳ ವಿಲೇ ವಾರಿಗೆ ಅನುಮತಿ ನೀಡಲಾಗಿದೆ. ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಅನರ್ಹರನ್ನು ಎಪಿಎಲ್ ಆಗಿ ಆದ್ಯತೇತರ ಪರಿವರ್ತಿತ ಚೀಟಿಗಳನ್ನಾಗಿ ಪರಿವರ್ತಿಸಲು ಕ್ರಮವಹಿಸಲು ಆದೇಶಿ ಸಲಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಮಾಡ್ಯೂಲ್ ಮೂಲಕ ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.