• Home  
  • ಬಿರುವೆರ್ ಕಾಪು ಸೇವಾ ಸಮಿತಿಯ ವತಿಯಿಂದ ಕಾಪು ಪೇಟೆಯಲ್ಲಿ 3ನೇ ವರ್ಷದ ಕಷಾಯ ವಿತರಣಾ ಕಾರ್ಯಕ್ರಮ
- ಕರಾವಳಿ

ಬಿರುವೆರ್ ಕಾಪು ಸೇವಾ ಸಮಿತಿಯ ವತಿಯಿಂದ ಕಾಪು ಪೇಟೆಯಲ್ಲಿ 3ನೇ ವರ್ಷದ ಕಷಾಯ ವಿತರಣಾ ಕಾರ್ಯಕ್ರಮ

Share:  ಕಾಪು : ಆಟಿ ಅಮಾವಾಸ್ಯೆಯ ಪ್ರಯುಕ್ತ ಸೋಮವಾರ ಹಾಲೆ ಮರದ ತೊಗಟೆಯ ಕಷಾಯವನ್ನು ಸಿದ್ಧಪಡಿಸಿ ಕಾಪುವಿನ ತೃಪ್ತಿ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು.   ಸುಮಾರು 250 ಲೀಟರ್ ಕಷಾಯ ಮತ್ತು ಮೆಂತೆ ಗಂಜಿ (ಪಾಯಸ) ಸಿದ್ಧಪಡಿಸಲಾಗಿದ್ದು, ಕಾಪು ಪೇಟೆಯಲ್ಲಿ ಸರ್ವಧರ್ಮಿಯರು ಸಹಿತ ನೂರಾರು ಮಂದಿ ಕಷಾಯ ಸ್ವೀಕರಿಸಿದರು.  ಸೋಮವಾರ ಮುಂಜಾನೆ 3 ಗಂಟೆಗೆ ಮಲ್ಲಾರು, ಕಾಪು ಹಳೆಮಾರಿಗುಡಿ ಭಾಗದ ಹಾಲೆ ಮರದ ಕೆತ್ತೆಯನ್ನು ಸಂಗ್ರಹಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಆಟಿದ ಕಷಾಯವನ್ನು ಸಿದ್ಧಪಡಿಸಲಾಗಿದ್ದು, […]

 ಕಾಪು : ಆಟಿ ಅಮಾವಾಸ್ಯೆಯ ಪ್ರಯುಕ್ತ ಸೋಮವಾರ ಹಾಲೆ ಮರದ ತೊಗಟೆಯ ಕಷಾಯವನ್ನು ಸಿದ್ಧಪಡಿಸಿ ಕಾಪುವಿನ ತೃಪ್ತಿ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು.

  ಸುಮಾರು 250 ಲೀಟರ್ ಕಷಾಯ ಮತ್ತು ಮೆಂತೆ ಗಂಜಿ (ಪಾಯಸ) ಸಿದ್ಧಪಡಿಸಲಾಗಿದ್ದು, ಕಾಪು ಪೇಟೆಯಲ್ಲಿ ಸರ್ವಧರ್ಮಿಯರು ಸಹಿತ ನೂರಾರು ಮಂದಿ ಕಷಾಯ ಸ್ವೀಕರಿಸಿದರು.

 ಸೋಮವಾರ ಮುಂಜಾನೆ 3 ಗಂಟೆಗೆ ಮಲ್ಲಾರು, ಕಾಪು ಹಳೆಮಾರಿಗುಡಿ ಭಾಗದ ಹಾಲೆ ಮರದ ಕೆತ್ತೆಯನ್ನು ಸಂಗ್ರಹಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಆಟಿದ ಕಷಾಯವನ್ನು ಸಿದ್ಧಪಡಿಸಲಾಗಿದ್ದು, ನಾಗರಿಕರಿಗೆ ಉಚಿತವಾಗಿ ವಿತರಿಸುವ ಮೂಲಕ ಬಿರುವೆರ್ ಕಾಪು ಸೇವಾ ಸಮಿತಿಯ ಸದಸ್ಯರು ಮಾದರಿಯಾಗಿದ್ದಾರೆ.

 ಬಿರುವೆರ್ ಕಾಪು ಸೇವಾ ಸಮಿತಿ ಉಪಾಧ್ಯಕ್ಷ ಸುಧಾಕರ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು, ಜೊತೆ ಕಾರ್ಯದರ್ಶಿ ಅತಿಥ್ ಸುವರ್ಣ ಪಾಲಮೆ, ಸದಸ್ಯರಾದ ಪ್ರಶಾಂತ್ ಪೂಜಾರಿ, ಸುಜನ್ ಎಲ್. ಸುವರ್ಣ, ಅನಿಲ್ ಅಮೀನ್ ಕಾಪು, ಅಶ್ವಿನಿ ನವೀನ್, ಸಂಧ್ಯಾ ಬಾಲಕೃಷ್ಣ ಕೋಟ್ಯಾನ್, ವರುಣ್ ಬಿ. ಕೋಟ್ಯಾನ್ ಮೊದಲಾದವರು ಇದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.