• Home  
  • ಬಿಸಿಯೂಟ ತಯಾರಕಿ ಪುತ್ರ  ಸಮರ್ಥ್ ಆರ್. ಜೋಷಿ 621 ಅಂಕ : ರಾಜ್ಯಕ್ಕೆ 5ನೇ ರ‍್ಯಾಂಕ್ (Samarth Joshi Uchila Got 5th Rank fo State in SSLC)
- ಶಾಲಾ ಕಾಲೇಜು

ಬಿಸಿಯೂಟ ತಯಾರಕಿ ಪುತ್ರ  ಸಮರ್ಥ್ ಆರ್. ಜೋಷಿ 621 ಅಂಕ : ರಾಜ್ಯಕ್ಕೆ 5ನೇ ರ‍್ಯಾಂಕ್ (Samarth Joshi Uchila Got 5th Rank fo State in SSLC)

Share: ಬಿಸಿಯೂಟ ತಯಾರಕಿ ಪುತ್ರ  ಸಮರ್ಥ್ ಆರ್. ಜೋಷಿ 621 ಅಂಕ : ರಾಜ್ಯಕ್ಕೆ 5ನೇ ರ‍್ಯಾಂಕ್  ಪಡುಬಿದ್ರಿ : ಉಚ್ಚಿಲ ಸರಸ್ವತಿ ಮಂದಿರ ಪ್ರೌಢ ಶಾಲೆಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸುವ ಮೂಲಕ ಸಮರ್ಥ್ ಆರ್. ಜೋಷಿ ರಾಜ್ಯಮಟ್ಟದಲ್ಲಿ 5ನೇ ರ‍್ಯಾಂಕ್ ಗಳಿಸಿದಂತಾಗಿದೆ. ಕನ್ನಡ 125, ಇಂಗ್ಲಿಷ್ 99, ಹಿಂದಿ 100, ಗಣಿತ 98, ವಿಜ್ಞಾನ 99, ಸಾಮಾನ್ಯ ವಿಜ್ಞಾನ 100 ಅಂಕ ಗಳಿಕೆಯ ಸಾಧನೆ ಮಾಡಿರುವ ಈತ ಇದೇ ಶಾಲೆಯ ಅಕ್ಷರ ದಾಸೋಹದ […]

ಬಿಸಿಯೂಟ ತಯಾರಕಿ ಪುತ್ರ  ಸಮರ್ಥ್ ಆರ್. ಜೋಷಿ 621 ಅಂಕ : ರಾಜ್ಯಕ್ಕೆ 5ನೇ ರ‍್ಯಾಂಕ್

 ಪಡುಬಿದ್ರಿ : ಉಚ್ಚಿಲ ಸರಸ್ವತಿ ಮಂದಿರ ಪ್ರೌಢ ಶಾಲೆಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸುವ ಮೂಲಕ ಸಮರ್ಥ್ ಆರ್. ಜೋಷಿ ರಾಜ್ಯಮಟ್ಟದಲ್ಲಿ 5ನೇ ರ‍್ಯಾಂಕ್ ಗಳಿಸಿದಂತಾಗಿದೆ.

ಕನ್ನಡ 125, ಇಂಗ್ಲಿಷ್ 99, ಹಿಂದಿ 100, ಗಣಿತ 98, ವಿಜ್ಞಾನ 99, ಸಾಮಾನ್ಯ ವಿಜ್ಞಾನ 100 ಅಂಕ ಗಳಿಕೆಯ ಸಾಧನೆ ಮಾಡಿರುವ ಈತ ಇದೇ ಶಾಲೆಯ ಅಕ್ಷರ ದಾಸೋಹದ ಮುಖ್ಯ ಅಡುಗೆಯನ್ನು ಮಾಡುವ ಅನಿತಾ ಜೋಶಿ ಮತ್ತು ಮುಲ್ಕಿ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಹಾಯಕ ಅರ್ಚಕ ರಾಜೀವ ಜೋಶಿಯ ಪುತ್ರನಾಗಿದ್ದಾನೆ.

ಮುಂದಕ್ಕೆ ವಿಜ್ನಾನ ವಿಭಾಗದಲ್ಲಿ ಅಧ್ಯಯನ ಮಾಡಿ ವೈದ್ಯನಾಗುವ ಗುರಿಯನ್ನು ಹೊಂದಿರುವ ಸಮರ್ಥ್, ತರಗತಿಯಲ್ಲಿ ಪಾಠಕ್ಕೆ ಹೆಚ್ಚು ಗಮನವನ್ನು ಕೊಟ್ಟಿದ್ದು, ಇತರೇ ಪುಸ್ತಕಗಳ ಅಧ್ಯಯನವನ್ನು ಮಾಡುವ ಮೂಲಕ ಹಾಗೂ ಶಿಕ್ಷಕರು, ಮನೆಮಂದಿಯ ಪ್ರೋತ್ಸಾಹದಿಂದ ಈ ಸಾಧನೆಯು ಸಾಧ್ಯವಾಯಿತು ಎಂದು ಸಂತಸವನ್ನು ವ್ಯಕ್ತ ಪಡಿಸಿದ್ದಾನೆ.

  ೬೨೫ ಅಂಕ ಗಳಿಸುವ ವಿಶ್ವಾಸ ಇದ್ದು, ಕೆಲ ಅಂಕಗಳನ್ನು ಕೈ ಚೆಲ್ಲಿರುವುದಕ್ಕೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಈತನ ಸಾಧನೆಯಿಂದ ಉಡುಪಿ ಜಿಲ್ಲೆ ಕಾಪು ವಿಧಾಣಸಭಾ ಕ್ಷೇತ್ರ ವ್ಯಾಪ್ತಿಯ ಉಚ್ಚಿಲದ  ಸರಕಾರಿ ಅನುದಾನಿತ ಸರಸ್ವತಿ ಮಂದಿರ ಕನ್ನಡ ಮಾಧ್ಯಮ ಶಾಲೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಿದೆ,

  ಈತನ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಶಿಕ್ಷಕ ವೃಂದ, ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಗಂಗಾಧರ ಸುವರ್ಣ ಅವರು ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.