• Home  
  • ಬೆಂಗಳೂರಿನಲ್ಲಿ ರೈಲ್ವೇ ಬೋಗಿಗೆ ಹತ್ತಿಕೊಂಡ ಬೆಂಕಿ: ಎಲ್ಲರೂ ಪಾರು
- ಅಪರಾಧ

ಬೆಂಗಳೂರಿನಲ್ಲಿ ರೈಲ್ವೇ ಬೋಗಿಗೆ ಹತ್ತಿಕೊಂಡ ಬೆಂಕಿ: ಎಲ್ಲರೂ ಪಾರು

Share: ಬೆಂಗಳೂರಿನಲ್ಲಿ ರೈಲ್ವೇ ಬೋಗಿಗೆ ಹತ್ತಿಕೊಂಡ ಬೆಂಕಿ: ಎಲ್ಲರೂ ಪಾರು ಬೆಂಗಳೂರು: ಇಂದು ಬೆಳಿಗ್ಗೆ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲಿನ ಎಸಿ ಬೋಗಿಯೊಂದರಲ್ಲಿ ಏಕಾ ಏಕಿ ಹೊಗೆ ಬರಲಾರಂಭಿಸಿದ್ದು, ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿದೆ. ಸಾರ್ವಜನಿಕರು ಆತಂಕಿತರಾಗಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ರೈಲ್ವೇ ಪೊಲೀಸರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಈ ಸಂದರ್ಭ ರೈಲ್ವೆ ಎಸ್ಪಿ ಸೌಮ್ಯಲತ ಮಾಧ್ಯಮದೊಂದಿಗೆ ಮಾತನಾಡಿ,  ಉದ್ಯಾನ ಎಕ್ಸ್‌ಪ್ರೆಸ್‌ ಮುಂಬೈಯಿಂದ ಬೆಂಗಳೂರು ನಿಲ್ದಾಣಕ್ಕೆ ಭಾನುವಾರ ಬೆಳಿಗ್ಗೆ 6 ಗಂಟೆಗೆ  ಆಗಮಿಸಿದೆ. ಪ್ರಯಾಣಿಕರು ಎಲ್ಲರೂ ಸುರಕ್ಷಿತವಾಗಿ […]

ಬೆಂಗಳೂರಿನಲ್ಲಿ ರೈಲ್ವೇ ಬೋಗಿಗೆ ಹತ್ತಿಕೊಂಡ ಬೆಂಕಿ: ಎಲ್ಲರೂ ಪಾರು

ಬೆಂಗಳೂರು: ಇಂದು ಬೆಳಿಗ್ಗೆ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲಿನ ಎಸಿ ಬೋಗಿಯೊಂದರಲ್ಲಿ ಏಕಾ ಏಕಿ ಹೊಗೆ ಬರಲಾರಂಭಿಸಿದ್ದು, ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿದೆ. ಸಾರ್ವಜನಿಕರು ಆತಂಕಿತರಾಗಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ರೈಲ್ವೇ ಪೊಲೀಸರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಈ ಸಂದರ್ಭ ರೈಲ್ವೆ ಎಸ್ಪಿ ಸೌಮ್ಯಲತ ಮಾಧ್ಯಮದೊಂದಿಗೆ ಮಾತನಾಡಿ,  ಉದ್ಯಾನ ಎಕ್ಸ್‌ಪ್ರೆಸ್‌ ಮುಂಬೈಯಿಂದ ಬೆಂಗಳೂರು ನಿಲ್ದಾಣಕ್ಕೆ ಭಾನುವಾರ ಬೆಳಿಗ್ಗೆ 6 ಗಂಟೆಗೆ  ಆಗಮಿಸಿದೆ. ಪ್ರಯಾಣಿಕರು ಎಲ್ಲರೂ ಸುರಕ್ಷಿತವಾಗಿ ಇಳಿದಿದ್ದಾರೆ. ನಿಲ್ಲಿಸಿದ ರೈಲಿನ ಎಸಿ ಬೋಗಿಯಲ್ಲಿ 7:45 ರ ಸುಮಾರಿಗೆ ಹೊಗೆ ಕಾಣಿಸಿ ಕೊಂಡಿದೆ.  ಒಂದು ಭೋಗಿಗೆ ಸಂಪೂರ್ಣ ಬೆಂಕಿ ತಗುಲಿದೆ. ಅಗ್ನಿಶಾಮಕದಳದವರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಯಾವ ಕಾರಣದಿಂದ ಬೆಂಕಿ ಹೊತ್ತಿದೆ ಎಂಬ ಮಾಹಿತಿ ಲಭಿಸಿಲ್ಲ. ಸಿಸಿ ಕ್ಯಾಮರಾದ ದೃಶ್ಯಾವಳಿ ಪರಿಶೀಲಿಸಲಾಗುವುದು ಮತ್ತು ರೈಲಿನಲ್ಲಿ ಬಂದ ಪ್ರಯಾಣಿಕರ ಸಂಪೂರ್ಣ ಮಾಹಿತಿ ಕಲೆಹಾಕಲಾಗುವುದು ಎಂದು ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.