ಬೆಂಗಳೂರು ಮಧ್ಯ ರಸ್ತೆಯಲ್ಲಿ ಹೊತ್ತಿ ಉರಿದ ಬಿಎಂಟಿಸಿ ಬಸ್ಸು: ಪ್ರಯಾಣಿಕರು ಪಾರು
(Bengaluru) ಬೆಂಗಳೂರು : ಪ್ರಯಾಣಿಕರಿಂದ ತುಂಬಿದ್ದ ಬಿಎಂಟಿಸಿ ಬಸ್ಸೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಬೆಂಗಳೂರು ನಗರದ ಎಂ. ಜಿ . ರೋಡಿನಲ್ಲಿ ಇಂದು ಬೆಳಗ್ಗೆ ಗಟಿಸಿದೆ.
ಘಟನೆಯಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ.
ಈ ಸಂದರ್ಭ ಬಸ್ಸಿನಲ್ಲಿ 30 ಮಂದಿ ಪ್ರಯಾಣಿರಿದ್ದರು. ಚಾಲಕನ ಸಮಯ ಪ್ರಜ್ಞೆಯಇಂದಾಗಿ ಪ್ರಯಾಣಿಕರ ಪ್ರಾಣ ಉಳಿಸಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದೆ.
ಬಿಎಂಟಿಸಿ ಬಸ್ ರೋಸ್ ಗಾರ್ಡನ್ ನಿಂದ ಶಿವಾಜಿ ನಗರಕ್ಕೆ ಬರುತ್ತಿತ್ತು. ದಾರಿ ಮಧ್ಯೆ ಎಂ.ಜಿ. ರೋಡ್ ನ ಅನಿಲ್ ಕುಂಬ್ಳೆ ಸಿಗ್ನಲ್ ನಲ್ಲಿ ಚಾಲಕ ಬಸ್ ನಿಲ್ಲಿಸಿದಾಗ ಬಸ್ಸು ಬಂದಾಗಿದೆ. ಮತ್ತೆ ಸ್ಟಾರ್ಟ್ ಮಾಡಲು ಯತ್ನಿಸಿದಾಗ ಸ್ಟಾರ್ಟ್ ಆಗಲೇ ಇಲ್ಲ. ಚಾಲಕ 2-3 ಸಲ ಸ್ಟಾರ್ಟ್ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿದ್ದಾರೆ.
ಬಸ್ಸಿಗೆ ಬೆಂಕಿ ಆವರಿಸಿ ಸಂಪೂರ್ಣ ಸುಟ್ಟು ಕರಕಲಾಗಿದೆ.

