ಬೈಂದೂರು; ಗೋದಾಮಿನಿಂದ ಐದು ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ನಾಲ್ವರ ಬಂಧನ, ಸೊತ್ತುಗಳು ವಶ
(Bynduru) ಬೈಂದೂರು: ಬೈಂದೂರು ತಾಲೂಕಿನ ಮಸೂದ್ ಪಟೇಲ್ ಎಂಬವರ ಗೋದಾಮಿನಿಂದ ಸುಮಾರು ಐದು ಲಕ್ಷ ಮೌಲ್ಯದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆ ಕಳ್ಳತನ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತೋಷ(35) ಶಾನೂರು ಬಾಬುಲಾಲ್ (31) ಮಹಮ್ಮದ್ ಖ್ವಾಜಾ (26) ಮತ್ತು ಮಹಮ್ಮದ್ ಸಾಧಿಕ್ ಬಂಧಿತರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಪ್ರಕರಣಗಳಲ್ಲಿ ಕಳವು ಮಾಡಿದ 455 ಕೆ.ಜಿ ಅಡಿಕೆ ಮತ್ತು ಸಾಗಾಟ ಮಾಡಲು ಬಳಸಿದ ಕಾರನ್ನು ಪೊಲೀಸರು ಸ್ವಾಧೀಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 106/2025 ಕಲಂ 331(3) 331(4) 305 BNS ರಂತೆ ಪ್ರಕರಣ ದಾಖಲಾಗಿದೆ.

