• Home  
  • ಬೈಂದೂರು : ಸರಕಾರಿ ಕೆಲಸ ಕೊಡಿಸುವುದಾಗಿ ಹೇಳಿ 30 ವರ್ಷಗಳ ಹಿಂದೆ 200 ರೂ. ಪಡೆದು ವಂಚಿಸಿದ್ದ ಆರೋಪಿ ಬಂಧನ ! (Byndoor: Accused arrested for defrauding a man of Rs 200, After 30 years ago by promising him a government job!)
- ಅಪರಾಧ

ಬೈಂದೂರು : ಸರಕಾರಿ ಕೆಲಸ ಕೊಡಿಸುವುದಾಗಿ ಹೇಳಿ 30 ವರ್ಷಗಳ ಹಿಂದೆ 200 ರೂ. ಪಡೆದು ವಂಚಿಸಿದ್ದ ಆರೋಪಿ ಬಂಧನ ! (Byndoor: Accused arrested for defrauding a man of Rs 200, After 30 years ago by promising him a government job!)

Share: ಬೈಂದೂರು : ಸರಕಾರಿ ಕೆಲಸ ಕೊಡಿಸುವುದಾಗಿ ಹೇಳಿ 30 ವರ್ಷಗಳ ಹಿಂದೆ 200 ರೂ. ಪಡೆದು ವಂಚಿಸಿದ್ದ ಆರೋಪಿ ಬಂಧನ ! (Byndooru) ಬೈಂದೂರು: ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ 30 ವರ್ಷಗಳ ಹಿಂದೆ 200 ರೂ. ಪಡೆದು ಮೋಸ ಮಾಡಿದ್ದ ಆರೋಪಿ ಬೈಂದೂರಿನ ಮಯ್ಯಾಡಿಯ ಬಿ.ಕೆ. ರಾಮಚಂದ್ರ ರಾವ್ ಎಂಬಾತನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಶಿರಸಿಯ ಬಿಳಿಗಿರಿ ಕೊಪ್ಪದ ವೆಂಕಟೇಶ ಅವರಿಗೆ ಪದವಿ ಓದುತ್ತಿರುವಾಗ ರಾಮಚಂದ್ರನ ಪರಿಚಯವಾಗಿತ್ತು. ಆತ ಸರಕಾರಿ […]

(Byndooru) ಬೈಂದೂರು: ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ 30 ವರ್ಷಗಳ ಹಿಂದೆ 200 ರೂ. ಪಡೆದು ಮೋಸ ಮಾಡಿದ್ದ ಆರೋಪಿ ಬೈಂದೂರಿನ ಮಯ್ಯಾಡಿಯ ಬಿ.ಕೆ. ರಾಮಚಂದ್ರ ರಾವ್ ಎಂಬಾತನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಶಿರಸಿಯ ಬಿಳಿಗಿರಿ ಕೊಪ್ಪದ ವೆಂಕಟೇಶ ಅವರಿಗೆ ಪದವಿ ಓದುತ್ತಿರುವಾಗ ರಾಮಚಂದ್ರನ ಪರಿಚಯವಾಗಿತ್ತು. ಆತ ಸರಕಾರಿ ನೌಕರಿ ಕೊಡಿಸುವುದಾಗಿ 200 ರೂ. ಪಡೆದು ಕೆಲಸ ಕೊಡಿಸದೆ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು.

 ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಡಿಎಸ್ಪಿ ಗೀತಾ ಪಾಟೀಲ್ ಹಾಗೂ ಶಿರಸಿ ಗ್ರಾಮೀಣ ಠಾಣೆ ಪಿಐ ಮಂಜುನಾಥ್ ಎಂ., ಪಿಎಸ್‌ಐ ಸಂತೋಷ ಕುಮಾರ್ ಎಂ., ಅಶೋಕ್ ರಾಠೋಡ್ ಮಾರ್ಗದರ್ಶನದಂತೆ ಠಾಣೆಯ ರಾಘವೇಂದ್ರ ಜಿ. ಮತ್ತು ಮಾರುತಿ ಗೌಡ ಬೆಂಗಳೂರಿನ ಬಳೆಪೇಟೆಯಲ್ಲಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ಕರೆ ತಂದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.