ಬ್ಯಾಡಗಿ : ದಾಸ ಶ್ರೇಷ್ಠ ಕನಕ ದಾಸರ ಜಯಂತೋತ್ಸವ ಆಚರಣೆ
ಬ್ಯಾಡಗಿಯ ಸುಭಾಷ್ ನಗರ ಜನತಾ ಪ್ಲಾಟ್ ನಲ್ಲಿ ಆಚರಣೆ
ಬ್ಯಾಡಗಿ : ಸುಭಾಷ್ ನಗರ ಜನತಾ ಪ್ಲಾಟ್ನಲ್ಲಿ ನಿವಾಸಿಗಳ ಸಹಕಾರದೊಂದಿಗೆ ದಾಸ ಶ್ರೇಷ್ಠ ಕನಕ ದಾಸರ ಜಯಂತೋತ್ಸವವನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಈ ಶುಭ ಸಮಾರಂಭದಲ್ಲಿ ಸುಭಾಷ್ ನಗರದ ನಿವಾಸಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಭೀಮ್ ರಾಜ್ಯ ದಲಿತ ಸೇವಾ ಸಮಿತಿಯ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಪರಶುರಾಮ್ ಗದಗಕರ, ರಾಜು ನಾಯಕ್ಕ, ಬುದ್ಧಿವಂತ ಹಂಜಗಿ, ರಾಜು ಅರಳಿಮಟ್ಟ, ಮಾಂತೇಶ್ ಕಲ್ಯಾಣಿ, ರಾಜು ಸುಟುಕಪ್ಪನವರು, ಸಿದ್ದಪ್ಪ ಬಳಗಾರ್, ಹುಲಿಗೆಪ್ಪ ಕೋಡಿಹಳ್ಳಿ, ಈರಪ್ಪ ಬಳೆಗಾರ, ಅಜ್ಜಪ್ಪ ಕುರುಗೋಡ, ಗಿರೀಶ್ ಭಾಗಮ್ಮನವರು, ಮುತ್ತು ಹುಲ್ಲೂರು, ಗಣೇಶ್ ವಿ. ಕೆರೊಡಿ, ಆನಂದ್ ಮ್ಯಾದರ್, ಪರಮೇಶಿ ಕುದ್ರೆಹಾಳ, ಗುರುತೇಜ ಗದಗಕರ, ವಿನೋದ, ರಾಜು ಸುಟಗಪ್ಪನವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

