ಬ್ಯಾಡಗಿ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತ: ರೈತರ ಆಕ್ರೋಶ, ಹಲವಾರು ವಾಹನಗಳಿಗೆ ಬೆಂಕಿ
(Haveri) ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತದಿಂದ ಹಾವೇರಿ ರೈತರು ಅಕ್ರೋಶಗೊಂಡಿದ್ದಾರೆ.
ಹಾವೇರಿ ಎಪಿಎಂಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಉದ್ರಿಕ್ತಗೊಂಡ ರೈತರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ 6 ಕಾರು, ಒಂದು ಅಗ್ನಿಶಾಮಕ ದಳ ವಾಹನ, 6 ಬೈಕ್ ಸೇರಿದಂತೆ ಆಡಳಿತ ಕಚೇರಿ ಸುಟ್ಟು ಭಸ್ಮ ಆಗಿವೆ.
ಈ ಘಟನೆಗೆ ಸಂಬಂಧ ಪೊಲೀಸರು 47 ಮಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
ಹಾವೇರಿ ಎಪಿಎಂಸಿ ಕಚೇರಿ ಬಳಿ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಇದೆ. ಘಟನಾ ಸ್ಥಳಕ್ಕೆ ಐಜಿ ತ್ಯಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದ್ದು ಸ್ಥಳದಲ್ಲಿ ಸ್ಥಳದಲ್ಲಿ ಸುಮಾರು ಇನನೂರಕ್ಕೂ ಅಧಿಕ ಪೋಲಿಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸುಮಾರು 1000ಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಪ್ರತಿಭಟನೆ ತಡೆಯಲು ಬಂದ ಪೊಲೀಸರನ್ನೇ ರೈತರು ಓಡಿಸಿದ್ದಾರೆ. ಆಡಳಿತದ ಕಚೇರಿ ಬಳಿ ಬಂದ 15 ಕ್ಕೂ ಅಧಿಕ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲಾಗದೇ ಕೈ ಹಿಸುಕಿಕೊಂಡಿದ್ದಾರೆ.
ಕೈಯಲ್ಲಿ ದೊಣ್ಣೆ ಹಿಡಿದು ಪ್ರತಿಭಟನಾಕಾರರು ಪೊಲೀಸರನ್ನು ಓಡಿಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಾಯವಾಗಿದೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್ (Home Minister DR G Parameshwar) ಸ್ಪಷ್ಟನೆ ನೀಡಿ, ಒಂದೇ ದಿನ 20 ಸಾವಿರದಿಂದ 8 ಸಾವಿರಕ್ಕೆ ಬೆಲೆ ಕುಸಿತ ಆಗಿದೆ. ಇದರಿಂದ ರೈತರಿಗೆ ಸಮಸ್ಯೆ ಆಗಿದೆ. ಕಾರಣ ನೋಡಿಕೊಂಡು ಮುಂದಿನ ಕ್ರಮ ಕೈಗೊಳಲಾಗುವುದು ಎಂದರು.

