ಬ್ರಹ್ಮಾವರ : ಗೋವಿನ ರುಂಡ ಪತ್ತೆ ಪ್ರಕರಣ- ಉನ್ನತಮಟ್ಟದ ತನಿಖೆಗೆ ಶರಣ್ ಪಂಪ್ ವೆಲ್ ಒತ್ತಾಯ
(Udupi) ಉಡುಪಿ: ಇತ್ತೀಚೆಗೆ ಬ್ರಹ್ಮಾವರದ ಕುಂಜಾಲುವಿನಲ್ಲಿ ಗೋವಿನ ರುಂಡ ಪತ್ತೆ ಪ್ರಕರಣದಲ್ಲಿ ಆರು ಜನ ಹಿಂದೂಗಳು ಬಂಧನವಾಗಿರುವುದು ಆತಂಕಕಾರಿ ವಿಷಯ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗುರುವಾರ ಉಡುಪಿಯಲ್ಲಿ ಒತ್ತಾಯ ಮಾಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ದೇಶಾದ್ಯಂತ ಇಸ್ಲಾಮಿಕ್ ಮತೀಯವಾದಿಗಳು ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ. ಗೋ ಮಾಫಿಯಾದಲ್ಲಿ ಭಾಗಿಯಾಗುತ್ತಿದ್ದಾರೆ. ಕುಂಜಾಲು ಪ್ರಕರಣದಲ್ಲೂ ಅವರ ಕೈವಾಡ ಇರುವ ಸಾಧ್ಯತೆ ಇದೆ. ಸುಹಾಶ್ ಶೆಟ್ಟಿ ಹತ್ಯೆಯಲ್ಲೂ ಇಬ್ಬರು ಹಿಂದೂಗಳಿದ್ದರು. ಇಲ್ಲೂ ಆರು ಜನ ಹಿಂದೂಗಳಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ಕುಂಜಾಲುವಿನ ಆರು ಜನ ಹಿಂದೂಗಳನ್ನು ಬಳಸಿಕೊಂಡಿರುವ ಸಾಧ್ಯತೆ ಇದೆ.
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯವರು ಸಮಗ್ರ ತನಿಖೆ ನಡೆಸಬೇಕು ಎಂದೂ ಶರಣ್ ಪಂಪ್ ವೆಲ್ ಅವರು ಒತ್ತಾಯ ಮಾಡಿದ್ದಾರೆ.

