• Home  
  • ಬ್ರಹ್ಮಾವರ: ಗ್ಲೋಬಲ್‌ ಸ್ಕೂಲ್‌ನಲ್ಲಿ ವಿಶ್ವ ಯೋಗ ದಿನಾಚರಣೆ (International Day of Yoga Celebration at Brahmavara Global School)
- ಶಾಲಾ ಕಾಲೇಜು

ಬ್ರಹ್ಮಾವರ: ಗ್ಲೋಬಲ್‌ ಸ್ಕೂಲ್‌ನಲ್ಲಿ ವಿಶ್ವ ಯೋಗ ದಿನಾಚರಣೆ (International Day of Yoga Celebration at Brahmavara Global School)

Share: ಬ್ರಹ್ಮಾವರ: ಗ್ಲೋಬಲ್‌ ಸ್ಕೂಲ್‌ನಲ್ಲಿ ವಿಶ್ವ ಯೋಗ ದಿನಾಚರಣೆ ಯೋಗದಿಂದ ರೋಗ ಮುಕ್ತರಾಗಿ ಆರೋಗ್ಯ  ಕಾಪಾಡಿಕೊಳ್ಳಿ~ ಪ್ರಕಾಶ್ಚಂದ್ರ ಶೆಟ್ಟಿ (Brahmavara) ಬ್ರಹ್ಮಾವರ: ಜಿ.ಎಂ. ಗ್ಲೋಬಲ್ ಸ್ಕೂಲ್, ಬ್ರಹ್ಮಾವರ ಇಲ್ಲಿ ಹತ್ತನೆಯ ವಿಶ್ವ ಯೋಗ ದಿನಾಚರಣೆ ಶುಕ್ರವಾರ ನೆರವೇರಿತು. ಪ್ರಾಂಶುಪಾಲ ಪ್ರಣವ್ ಶೆಟ್ಟಿಯವರು ಜ್ಯೋತಿ ಬೆಳಗಿಸಿ, ಯೋಗ ಶಿಬಿರಕ್ಕೆ ಚಾಲನೆ ನೀಡಿದರು. ಅವರು ಈ ಸಂದರ್ಭ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಯೋಗ, ಭಾರತದ ಪ್ರಾಚೀನ ಮತ್ತು ಸನಾತನ ವಿದ್ಯೆ. ವೇದಕಾಲಕ್ಕಿಂತಲೂ ಹಿಂದೆ ಯೋಗಾಸನಗಳು ರೂಢಿಯಲ್ಲಿದ್ದವು. ಇಂದು ಭಾರತವು ಯೋಗಾಸನ […]

ಬ್ರಹ್ಮಾವರ: ಗ್ಲೋಬಲ್‌ ಸ್ಕೂಲ್‌ನಲ್ಲಿ ವಿಶ್ವ ಯೋಗ ದಿನಾಚರಣೆ

ಯೋಗದಿಂದ ರೋಗ ಮುಕ್ತರಾಗಿ ಆರೋಗ್ಯ  ಕಾಪಾಡಿಕೊಳ್ಳಿ~ ಪ್ರಕಾಶ್ಚಂದ್ರ ಶೆಟ್ಟಿ

(Brahmavara) ಬ್ರಹ್ಮಾವರ: ಜಿ.ಎಂ. ಗ್ಲೋಬಲ್ ಸ್ಕೂಲ್, ಬ್ರಹ್ಮಾವರ ಇಲ್ಲಿ ಹತ್ತನೆಯ ವಿಶ್ವ ಯೋಗ ದಿನಾಚರಣೆ ಶುಕ್ರವಾರ ನೆರವೇರಿತು.

ಪ್ರಾಂಶುಪಾಲ ಪ್ರಣವ್ ಶೆಟ್ಟಿಯವರು ಜ್ಯೋತಿ ಬೆಳಗಿಸಿ, ಯೋಗ ಶಿಬಿರಕ್ಕೆ ಚಾಲನೆ ನೀಡಿದರು.

ಅವರು ಈ ಸಂದರ್ಭ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಯೋಗ, ಭಾರತದ ಪ್ರಾಚೀನ ಮತ್ತು ಸನಾತನ ವಿದ್ಯೆ. ವೇದಕಾಲಕ್ಕಿಂತಲೂ ಹಿಂದೆ ಯೋಗಾಸನಗಳು ರೂಢಿಯಲ್ಲಿದ್ದವು. ಇಂದು ಭಾರತವು ಯೋಗಾಸನ ಕ್ಷೇತ್ರದಲ್ಲಿ ವಿಶ್ವಕ್ಕೆ ಗುರು ಸ್ಥಾನದಲ್ಲಿದೆ ಹಾಗೂ ಯೋಗಕ್ಕೆ ವಿಶ್ವಮಾನ್ಯತೆ ಇದೆ. ಶಿಸ್ತಿನ ಜೀವನವನ್ನು ನಡೆಸುವುದೇ ಒಂದು ಯೋಗ” ಎಂದು ಯೋಗದ ಕುರಿತು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

  ಮುಖ್ಯ ಅತಿಥಿಯಾಗಿ ಯೋಗ ತರಬೇತುದಾರರಾದ  ಮಮತಾ ಗಣೇಶ್ ಅವರು ಅಷ್ಟಾಂಗ ಯೋಗ ಪರಿಪಾಲನೆ ನಿಮ್ಮಲ್ಲಿ ಬೆಳೆಸಿಕೊಳ್ಳಿ ಎಂಬ ಧೈಯ ವಾಕ್ಯದೊಂದಿಗೆ ಯೋಗಾಭ್ಯಾಸದ ಆಸನಗಳನ್ನು ಮನೋಜ್ಞವಾಗಿ ಪ್ರಾತ್ಯಕ್ಷಿಕೆಯನ್ನು ನೀಡಿದರು.  

ಜಿ.ಎಂ. ಗ್ಲೋಬಲ್ ಶಾಲಾ ಸಂಸ್ಥಾಪಕ ಹಾಗೂ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ, ವಿಶ್ವ ಆರೋಗ್ಯಕ್ಕಾಗಿ ಯೋಗ, ಸದೃಢ ಮನಸ್ಸಿಗಾಗಿ ನಿರಂತರವಾಗಿ ಯೋಗಾಭ್ಯಾಸವನ್ನು ಮಾಡಿ ಎಂದ ಅವರು, ಯೋಗದಿಂದ ರೋಗಮುಕ್ತರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕರೆನೀಡಿದರು.

  ವಿದ್ಯಾರ್ಥಿನಿ ಮಾನ್ಯತಾ ಯೋಗದ ಮಹತ್ವದ ಕುರಿತು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿ ಕೌಶಿಕ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಸ್ಮಯನ್ ಶೆಟ್ಟಿ ಸ್ವಾಗತಿಸಿದರು.

ಶಿವಾನಿ ಪಾಟೀಲ್ ಧನ್ಯವಾದ ಸಮರ್ಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.