• Home  
  • ಬ್ರಹ್ಮಾವರ : ಬೈಕಿಗೆ ಟಿಪ್ಪರ್‌ ಡಿಕ್ಕಿ, ಓರ್ವ ಗಂಭೀರ, ಮತ್ತೋರ್ವ ಸಾವು (Brahmavar: Horrific road accident, one person in serious condition, another dead)
- ಅಪಘಾತ

ಬ್ರಹ್ಮಾವರ : ಬೈಕಿಗೆ ಟಿಪ್ಪರ್‌ ಡಿಕ್ಕಿ, ಓರ್ವ ಗಂಭೀರ, ಮತ್ತೋರ್ವ ಸಾವು (Brahmavar: Horrific road accident, one person in serious condition, another dead)

Share: ಬ್ರಹ್ಮಾವರ : ಬೈಕಿಗೆ ಟಿಪ್ಪರ್‌ ಡಿಕ್ಕಿ, ಓರ್ವ ಗಂಭೀರ, ಮತ್ತೋರ್ವ ಸಾವು  (Brfhmavara) ಬ್ರಹ್ಮಾವರ : ಬ್ರಹ್ಮಾವರ ತಾಲ್ಲೂಕಿನ ಪೇತ್ರಿ ಸಮೀಪ ಬೈಕಿಗೆ ಟಿಪ್ಪರ್‌ ಡಿಕ್ಕಿ ಹೊಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಘಟಿಸಿದೆ. ಸೋಮೇಶ್ವರದ ಸಮೀಪದ ಕೂಡ್ಲು ಫಾಲ್ಸ್ ಗೆ ಪ್ರವಾಸಕ್ಕೆ ಹೋಗಿದ್ದ ಯುವಕರು ಹಿಂದಿರುಗಿ ಬರುವಾಗ ಅಪಘಾತ ಸಂಭವಿಸಿದ್ದು ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.  ಯುವಕರು ಸಾಸ್ತಾನದ ಗೋಳಿಬೆಟ್ಟಿನವರಾಗಿದ್ದು, […]

 (Brfhmavara) ಬ್ರಹ್ಮಾವರ : ಬ್ರಹ್ಮಾವರ ತಾಲ್ಲೂಕಿನ ಪೇತ್ರಿ ಸಮೀಪ ಬೈಕಿಗೆ ಟಿಪ್ಪರ್‌ ಡಿಕ್ಕಿ ಹೊಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಘಟಿಸಿದೆ.

ಸೋಮೇಶ್ವರದ ಸಮೀಪದ ಕೂಡ್ಲು ಫಾಲ್ಸ್ ಗೆ ಪ್ರವಾಸಕ್ಕೆ ಹೋಗಿದ್ದ ಯುವಕರು ಹಿಂದಿರುಗಿ ಬರುವಾಗ ಅಪಘಾತ ಸಂಭವಿಸಿದ್ದು ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

 ಯುವಕರು ಸಾಸ್ತಾನದ ಗೋಳಿಬೆಟ್ಟಿನವರಾಗಿದ್ದು, ದೀಕ್ಷಿತ್ ಮತ್ತು ಅಭಿ ಎಂದು ಗುರುತಿಸಲಾಗಿದೆ.

ಬ್ರಹ್ಮಾವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.