• Home  
  •   ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ, ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ (Asha Bhosle, the famous singer of Indian cinema, passes away)
- ನಿಧನ

  ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ, ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ (Asha Bhosle, the famous singer of Indian cinema, passes away)

Share:   ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ, ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ ಆಶಾ ಭೋಂಸ್ಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ (Mumbai) ಮುಂಬಯಿ : ಚಿತ್ರರಂಗದ  ಗಾನ ಕೋಗಿಲೆ ಎಂದು ಪ್ರಖ್ಯಾತಿ ಪಡೆದ, ಬಹು ಭಾಷೆಗಳಲ್ಲಿ ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದ ಆಶಾ ಭೋಂಸ್ಲೆ (92) ಅವರು ಭಾನುವಾರ ಮುಂಬೈನಲ್ಲಿ ನಿಧನರಾದರು.     ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಶನಿವಾರ ಮುಂಬಯಿಯ ಖ್ಯಾತ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು […]

(Mumbai) ಮುಂಬಯಿ : ಚಿತ್ರರಂಗದ  ಗಾನ ಕೋಗಿಲೆ ಎಂದು ಪ್ರಖ್ಯಾತಿ ಪಡೆದ, ಬಹು ಭಾಷೆಗಳಲ್ಲಿ ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದ ಆಶಾ ಭೋಂಸ್ಲೆ (92) ಅವರು ಭಾನುವಾರ ಮುಂಬೈನಲ್ಲಿ ನಿಧನರಾದರು.

    ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಶನಿವಾರ ಮುಂಬಯಿಯ ಖ್ಯಾತ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

 ಆಶಾ ಭೋಂಸ್ಲೆ ಅವರ ನಿಧನದೊಂದಿಗೆ ಭಾರತೀಯ ಸಂಗೀತ ಲೋಕದ ಒಂದು ಸುವರ್ಣ ಯುಗ ಅಂತ್ಯಗೊಂಡಿದೆ.

 ಆಶಾ ಭೋಂಸ್ಲೆ ಅವರು ಕೇವಲ ಒಬ್ಬ ಗಾಯಕಿಯಾಗಿ ಮಾತ್ರವಲ್ಲದೆ, ಒಬ್ಬ ಯಶಸ್ವಿ ಉದ್ಯಮಿಯಾಗಿಯೂ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದರು. ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 200 ರಿಂದ 250 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಸಾವಿರಾರು ಹಾಡುಗಳ ಮೂಲಕ ಗಳಿಸಿದ ಸಂಭಾವನೆ ಮಾತ್ರವಲ್ಲದೆ, ದೇಶ ವಿದೇಶಗಳಲ್ಲಿ ನಡೆಸಿಕೊಟ್ಟ ನೂರಾರು ಸಂಗೀತ ಕಾರ್ಯಕ್ರಮಗಳ ಮೂಲಕವೂ ಅಪಾರ ಸಂಪತ್ತನ್ನು ಗಳಿಸಿದ್ದರು. ವಯಸ್ಸಾದ ಮೇಲೂ ಅವರು ದುಬೈ, ಅಮೆರಿಕ ಮತ್ತು ಕೆನಡಾದಂತಹ ದೇಶಗಳಲ್ಲಿ ಸ್ಟೇಜ್ ಶೋಗಳನ್ನು ನೀಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

  ಸಂಗೀತದ ಹೊರತಾಗಿ ಆಶಾ ಅವರಿಗೆ ಅಡುಗೆಯ ಮೇಲೆ ವಿಶೇಷ ಪ್ರೀತಿಯಿತ್ತು. ಇದನ್ನೇ ಅವರು ಒಂದು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿದ್ದರು. ‘ಆಶಾಸ್’ (Asha’s) ಎಂಬ ಹೆಸರಿನ ಅವರ ರೆಸ್ಟೋರೆಂಟ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದೆ. ದುಬೈ, ಕುವೈತ್, ಬಹ್ರಿನ್ ಸೇರಿದಂತೆ ಲಂಡನ್, ಬರ್ಮಿಂಗ್ ಹ್ಯಾಮ್ ಮತ್ತು ಮ್ಯಾಂಚೆಸ್ಟ‌ರ್ ನಂತಹ ನಗರಗಳಲ್ಲಿ ಈ ಹೋಟೆಲ್‌ಗಳು ಭಾರತೀಯ ಆಹಾರದ ರುಚಿಯನ್ನು ಪಸರಿಸುತ್ತಿವೆ. ಈ ಉದ್ಯಮವು ಅವರ ಆರ್ಥಿಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿತ್ತು.

  ಮುಂಬೈ ಮತ್ತು ಪುಣೆ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಆಶಾಜಿ ಅವರು ಐಷಾರಾಮಿ ಮನೆಗಳನ್ನು ಹೊಂದಿದ್ದರು.

  ಸರಳ ವ್ಯಕ್ತಿತ್ವದ ಆಶಾ ಅವರು ಕಷ್ಟಪಟ್ಟು ತಮ್ಮ ಪ್ರತಿಭೆಯಿಂದ ಈ ಮಟ್ಟದ ಯಶಸ್ಸನ್ನು ಗಳಿಸಿದ್ದರು. ಇಂದು ಅವರು ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಹಾಡುಗಳು ಹಾಗೂ ಅವರು ನಿರ್ಮಿಸಿದ ಈ ಬೃಹತ್ ಸಾಧನೆಯ ಹಾದಿ ಎಂದೆಂದಿಗೂ ನೆನಪಿನಲ್ಲಿ ಜೀವಂತವಾಗಿರಲಿದೆ.

 ಆಶಾ ಭೋಂಸ್ಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ನವದೆಹಲಿ: ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

 ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾದ ಆಶಾ ಭೋಸ್ಥೆ ಅವರ ನಿಧನದಿಂದ ತೀವ್ರ ದುಃಖವಾಗಿದೆ. ದಶಕಗಳ ಕಾಲದ ಅವರ ಅಸಾಧಾರಣ ಸಂಗೀತ ಪ್ರಯಾಣವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿತ್ತು. ಪ್ರಪಂಚದಾದ್ಯಂತ ಅಸಂಖ್ಯಾತ ಹೃದಯಗಳನ್ನು ಮುಟ್ಟಿತ್ತು. ಭಾವಪೂರ್ಣ ಸಂಗೀತವಾಗಿರಲಿ ಅಥವಾ ರೋಮಾಂಚಕ ಸಂಯೋಜನೆಗಳಾಗಲಿ, ಅವರ ಧ್ವನಿಯಲ್ಲಿ ಕಾಲಾತೀತ ತೇಜಸ್ಸು ಇತ್ತು.

  ನಾನು ಅವರೊಂದಿಗಿನ ಮಾತುಗಳನ್ನು ಯಾವಾಗಲೂ ಸ್ಮರಿಸುತ್ತೇನೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಸಂಗೀತ ಪ್ರಿಯರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಆಶಾ ಭೋಂಸ್ಲೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತೆಲೇ ಇರುತ್ತಾರೆ. ಅವರ ಹಾಡುಗಳು ಜನರ ಜೀವನದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತವೆ” ಎಂದು ಸಂತಾಪ ಸೂಚಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.