• Home  
  • ಮಂಗಳೂರು ವಿವಿ ಬಿ.ಕಾಂ. ಆರನೇ ಸೆಮಿಸ್ಟರ್‌: 600 ರಲ್ಲಿ 600 ಪೂರ್ಣಾಂಕ ಪಡೆದ ಆಳ್ವಾಸ್ ಕಾಲೇಜಿನ ದೀಕ್ಷಾ ಡಿ ಶೆಟ್ಟಿ(Mangaluru University B.Com Sixth Semister : Deeksha D Shetty with 600 out of 600)
- ಶಾಲಾ ಕಾಲೇಜು

ಮಂಗಳೂರು ವಿವಿ ಬಿ.ಕಾಂ. ಆರನೇ ಸೆಮಿಸ್ಟರ್‌: 600 ರಲ್ಲಿ 600 ಪೂರ್ಣಾಂಕ ಪಡೆದ ಆಳ್ವಾಸ್ ಕಾಲೇಜಿನ ದೀಕ್ಷಾ ಡಿ ಶೆಟ್ಟಿ(Mangaluru University B.Com Sixth Semister : Deeksha D Shetty with 600 out of 600)

Share: ಮಂಗಳೂರು ವಿವಿ ಬಿ.ಕಾಂ. ಆರನೇ ಸೆಮಿಸ್ಟರ್‌: 600 ರಲ್ಲಿ 600 ಪೂರ್ಣಾಂಕ ಪಡೆದ ಆಳ್ವಾಸ್ ಕಾಲೇಜಿನ ದೀಕ್ಷಾ ಡಿ ಶೆಟ್ಟಿ ಮಂಗಳೂರು ವಿವಿಯ ವಾಣಿಜ್ಯ ವಿಭಾಗದ ಪರೀಕ್ಷಾ ಇತಿಹಾಸದಲ್ಲೇ ಪ್ರಥಮ   (Moodabidri) ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ 2024-25 ಸಾಲಿನ ಬಿ.ಕಾಂ. ಆರನೇ ಸೆಮಿಸ್ಟರ್‌ನ ಎಲ್ಲಾ ವಿಷಯಗಳಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಡಿ ಶೆಟ್ಟಿ ಪೂರ್ಣ ಅಂಕ ಗಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪರೀಕ್ಷಾ ಇತಿಹಾಸದಲ್ಲೇ ಇದು ದಾಖಲೆಯಾಗಿದೆ. ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್-2, […]

ಮಂಗಳೂರು ವಿವಿ ಬಿ.ಕಾಂ. ಆರನೇ ಸೆಮಿಸ್ಟರ್‌: 600 ರಲ್ಲಿ 600 ಪೂರ್ಣಾಂಕ ಪಡೆದ ಆಳ್ವಾಸ್ ಕಾಲೇಜಿನ ದೀಕ್ಷಾ ಡಿ ಶೆಟ್ಟಿ

ಮಂಗಳೂರು ವಿವಿಯ ವಾಣಿಜ್ಯ ವಿಭಾಗದ ಪರೀಕ್ಷಾ ಇತಿಹಾಸದಲ್ಲೇ ಪ್ರಥಮ  

(Moodabidri) ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ 2024-25 ಸಾಲಿನ ಬಿ.ಕಾಂ. ಆರನೇ ಸೆಮಿಸ್ಟರ್‌ನ ಎಲ್ಲಾ ವಿಷಯಗಳಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಡಿ ಶೆಟ್ಟಿ ಪೂರ್ಣ ಅಂಕ ಗಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪರೀಕ್ಷಾ ಇತಿಹಾಸದಲ್ಲೇ ಇದು ದಾಖಲೆಯಾಗಿದೆ.

ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್-2, ಇನ್‌ವೆಸ್ಟ್ಮೆಂಟ್ ಮ್ಯಾನೆಜ್‌ಮೆಂಟ್, ಅಡ್ವಾನ್ಸ್ಡ್‌  ಫೈನಾನ್ಶಿಯಲ್ ಮ್ಯಾನೆಜ್‌ಮೆಂಟ್, ಇನ್‌ಕಂ ಟ್ಯಾಕ್ಸ್ ಲಾ ಆ್ಯಂಡ್ ಪ್ರಾಕ್ಟೀಸ್ 2, ಮ್ಯಾನೆಜ್‌ಮೆಂಟ್ ಅಕೌಂಟಿಂಗ್, ಅಸೆಸ್‌ಮೆಂಟ್ ಆಫ್ ಪರ್ಸನ್ಸ್ ಅದರ್ ದೆನ್ ಇಂಡಿವಿಜ್ಯುವಲ್ಸ್  ಆ್ಯಂಡ್ ಫೈಲಿಂಗ್ ಐಟಿಆರ್ಸ್‌, ಹಾಗೂ ಮಿನಿ ಪ್ರಾಜೆಕ್ಟ್ ವಿಷಯಗಳಲ್ಲಿ ಪೂರ್ಣಾಂಕ ಗಳಿಸಿದ್ದಾಳೆ.

ದೀಕ್ಷಾ ಡಿ ಶೆಟ್ಟಿಯವರ ಒಟ್ಟಾರೆ ಸರಾಸರಿ ಅಂಕವು ಶೇಕಡಾ 95.54ಇದೆ. ಕಾಲೇಜಿನ ಕ್ಯಾಂಪಸ್ ಸಂದರ್ಶನದಲ್ಲಿ ಟಿಸಿಎಸ್ ಕಂಪೆನಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದು, ಪಾಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯಳಾಗಿದ್ದಳು.

ಮೂಡುಬಿದಿರೆ ದರೆಗುಡ್ಡೆ ನಿವಾಸಿ ದಿನೇಶ ಶೆಟ್ಟಿ ಹಾಗೂ ಜಯಶ್ರೀ ಶೆಟ್ಟಿ ದಂಪತಿಗಳ ಪುತ್ರಿ.

ದೀಕ್ಷಾ ಡಿ ಶೆಟ್ಟಿಯವರ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ  ಶ್ಲಾಘಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.