ಮಂಗಳೂರು ವಿ.ವಿ ಅಂತರ್ ಕಾಲೇಜು ಬಾಡಿಬಿಲ್ಡಿಂಗ್ ಚಾಂಪಿಯನ್ಶಿಫ್: ಆಳ್ವಾಸ್ಗೆ ಸಮಗ್ರ ತಂಡ ಪ್ರಶಸ್ತಿ
(Moodabidre) ಮೂಡಬಿದಿರೆ: ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜು ಹಾಗೂ ಮಂಗಳೂರು ವಿಶ್ವ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ.ವಿ ಅಂತರ್ ಕಾಲೇಜು ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ನಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು.
ಆಳ್ವಾಸ್ ಕಾಲೇಜಿನ ಕಿಶಾನ್ ಶೆಟ್ಟಿ ಮಿಸ್ಟರ್ ಯೂನಿವರ್ಸಿಟಿ ಪಟ್ಟವನ್ನು ಪಡೆದುಕೊಂಡರು. ಎಂಟು ವಿವಿಧ ದೇಹತೂಕ ವಿಭಾಗಗಳಲ್ಲಿ ಜರಗಿದ ಈ ಸ್ಪರ್ಧಾ ಕೂಟದಲ್ಲಿ, ಆಳ್ವಾಸ್ ಕಾಲೇಜು ಒಟ್ಟು 3ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಪಡೆದುಕೊಂಡಿದೆ.
10 ಕೆ.ಜಿ ದೇಹತೂಕ ವಿಭಾಗದಲ್ಲಿ ಧನಂಜಯ, 90 ಕೆ.ಜಿಯಲ್ಲಿ ಕಿಶನ್ ಶೆಟ್ಟಿ, 90+ ಕೆ.ಜಿಯಲ್ಲಿ ಕಿಶೋರ್ ಕುಮಾರ್ ಚಿನ್ನದ ಪದಕ ಪಡೆದುಕೊಂಡರೆ, 75ಕೆ.ಜಿಯಲ್ಲಿ ಅರುಣ್.ಟಿ, 85 ಕೆ.ಜಿಯಲ್ಲಿ ಸುಲೈಮಾನ್, 90 ಕೆ.ಜಿಯಲ್ಲಿ ದರ್ಶನ್ ಬೆಳ್ಳಿಯ ಪದಕ ಪಡೆzರು.
65 ಕೆ.ಜಿ ವಿಭಾಗದಲ್ಲಿ ಗುಡ್ಡಪ್ಪ ಕಂಚಿನ ಪದಕವನ್ನು ಪಡೆದುಕೊಂಡರು. ಕಳೆದ 12ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರು ಡಾ. ಎಮ್ ಮೋಹನ ಆಳ್ವ (Mohan Alva) ಅಭಿನಂದಿಸಿದ್ದಾರೆ.

