• Home  
  • ಮಣಿಪಾಲ : ಇ ಎಸ್ ಐ ಆಸ್ಪತ್ರೆಗಾಗಿ ಡಿಸಿ ಕಚೇರಿ ಮುಂದೆ  ಉಪವಾಸ ಸತ್ಯಾಗ್ರಹ (Manipal: Fasting protest in front of DC’s office for ESI hospital)
- PROBLEMS

ಮಣಿಪಾಲ : ಇ ಎಸ್ ಐ ಆಸ್ಪತ್ರೆಗಾಗಿ ಡಿಸಿ ಕಚೇರಿ ಮುಂದೆ  ಉಪವಾಸ ಸತ್ಯಾಗ್ರಹ (Manipal: Fasting protest in front of DC’s office for ESI hospital)

Share: ಮಣಿಪಾಲ : ಇ ಎಸ್ ಐ ಆಸ್ಪತ್ರೆಗಾಗಿ ಡಿಸಿ ಕಚೇರಿ ಮುಂದೆ  ಉಪವಾಸ ಸತ್ಯಾಗ್ರಹ (Manipala) ಮಣಿಪಾಲ: ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ಮಂಜೂರು ಮಾಡಿದ್ದ ಇ ಎಸ್ ಐ ಆಸ್ಪತ್ರೆ ಇನ್ನೂ ಉಡುಪಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರ ಆಸ್ಪತ್ರೆ ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಜಿ.ಎ. ಕೋಟೆಯಾರ್ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.  ಕೇಂದ್ರ ಸರಕಾರ ಹಲವು ಜಿಲ್ಲೆಗಳಿಗೆ ಇಎಸ್ ಐ ಆಸ್ಪತ್ರೆ […]

ಮಣಿಪಾಲ : ಎಸ್ ಆಸ್ಪತ್ರೆಗಾಗಿ ಡಿಸಿ ಕಚೇರಿ ಮುಂದೆ  ಉಪವಾಸ ಸತ್ಯಾಗ್ರಹ

(Manipala) ಮಣಿಪಾಲ: ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ಮಂಜೂರು ಮಾಡಿದ್ದ ಇ ಎಸ್ ಐ ಆಸ್ಪತ್ರೆ ಇನ್ನೂ ಉಡುಪಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರ ಆಸ್ಪತ್ರೆ ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಜಿ.ಎ. ಕೋಟೆಯಾರ್ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.

 ಕೇಂದ್ರ ಸರಕಾರ ಹಲವು ಜಿಲ್ಲೆಗಳಿಗೆ ಇಎಸ್ ಐ ಆಸ್ಪತ್ರೆ ಮಂಜೂರು ಮಾಡಿದೆ. ಆದರೆ ಉಡುಪಿಗೆ ಇನ್ನೂ ಬಂದಿಲ್ಲ. ಇದರಿಂದಾಗಿ ಕಾರ್ಮಿಕರಿಗೆ, ಬಡ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ, ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಲಕ್ಷಾಂತರ ಜನ ಸೇರಿ ನಮ್ಮ ಹಕ್ಕನ್ನು ಕೇಳಿ ಪಡೆಯುತ್ತೇವೆ ಎಂದು ಹೋರಾಟಗಾರ ಜಿ.ಎ .ಕೋಟೆಯಾರ್ ಹೇಳಿದರು.

 ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮನವಿ ಸ್ವೀಕರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.