ಮಣಿಪಾಲ ಎಂಐಟಿಯ ಸಹ ಪ್ರಾಧ್ಯಾಪಕ ರಾಮಕೃಷ್ಣ ನಾಯಕ್‌ರವರಿಗೆ ಪಿಎಚ್‌ಡಿ ಪದವಿ
(Manipal) ಮಣಿಪಾಲ: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾ ಹುಮಾನಿಟೀಸ್ ಅಂಡ್ ಮ್ಯಾನೇಜ್ಮೆಂಟ್ ವಿಭಾಗದ ಸಹ ಪ್ರಾಧ್ಯಾಪಕ ರಾಮಕೃಷ್ಣ ನಾಯಕ್ ಅವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲ ಪಿಎಚ್‌ಡಿ ಪದವಿ ನೀಡಿದೆ.
ರಾಮಕೃಷ್ಣ ನಾಯಕ್‌ರವರು ಮಂಡಿಸಿದ “ಫ್ಯಾಬ್ರಿಕೇಷನ್ ಅಂಡ್ ಕಾರಾಕ್ಟ್ ರೈಸೇಷನ್ ಆಫ್ ಪ್ರಿಂಟೆಡ್ ಫ್ಲೆಕ್ಸಿಬಲ್ ಥೆರ್ಮೋಎಲೆಕ್ಟ್ರಿಕ್ ಜೆನೆರೇಟರ್ಸ್ ಬೇಸ್ಡ್ ಆನ್ ನಾವೆಲ್ ಇಂಕ್ ಫಾರ್ಮುಲೇಶನ್ಸ್” ಎನ್ನುವ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲ ಪಿಎಚ್ ಡಿ. ನೀಡಿದೆ.
ಇದರ ಒಂದು ಲೇಖನವು 2022 ನೇ ಸಾಲಿನ ಡಾI. ಟಿ ಎಂ ಎ ಪೈ ಚಿನ್ನದ ಪದಕವನ್ನು ಪಡೆದಿದೆ.
ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಾ ಪ್ರೊಫೆಸರ್ ಡಾ. ಪ್ರಕಾಶ ಶೆಟ್ಟಿ ಹಾಗೂ ಎಂಐಟಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸೆಲ್ವಕುಮಾರ್‌ರವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದ ರಾಮಕೃಷ್ಣ ನಾಯಕ್‌ರವರು ಹಿರಿಯಡ್ಕ -ಗುಡ್ಡೆಅಂಗಡಿಯ ದಿ. ಎ. ರಂಗಪ್ಪ ನಾಯಕ್ ಮತ್ತು ಶಾರದಾ ನಾಯಕ್ ದಂಪತಿಯ ಪುತ್ರ.

