• Home  
  • ಮಣಿಪಾಲ: ಪಂಚತಾರಾ ಹೊಟೇಲುಗಳಿಗೆ ವಂಚನೆ, ಆರೋಪಿ ಬಂಧನ (Manipala : Fraud for Five Star Hotel, accuse arrested
- ಅಪರಾಧ

ಮಣಿಪಾಲ: ಪಂಚತಾರಾ ಹೊಟೇಲುಗಳಿಗೆ ವಂಚನೆ, ಆರೋಪಿ ಬಂಧನ (Manipala : Fraud for Five Star Hotel, accuse arrested

Share: ಮಣಿಪಾಲ: ಪಂಚತಾರಾ ಹೊಟೇಲುಗಳಿಗೆ ವಂಚನೆ, ಆರೋಪಿ ಬಂಧನ (Manipala) ಮಣಿಪಾಲ, ಡಿ.11: ರಾಷ್ಟ್ರದ ವಿವಿಧ  ಪ್ರತಿಷ್ಠಿತ ಪಂಚಾತಾರ ಹೊಟೇಲ್‌ಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ತಮಿಳುನಾಡು ಮೂಲಕ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶ ಸಾಧಿಸಿದ್ದಾರೆ.  ತಮಿಳುನಾಡು ರಾಜ್ಯದ ತೂತುಕುಡಿಯ ಬಿಮೈಂಟ್ ಜಾನ್(67) ಬಂಧಿತ ಆರೋಪಿಯಾಗಿದ್ದ. ಮಣಿಪಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಬಿಮೈಂಟ್ ಜಾನ್, ಡಿ.7ರಂದು ಮಣಿಪಾಲ ಕಂಟ್ರಿ ಇನ್ ಹೊಟೇಲ್‌ನಲ್ಲಿ ತನಗೆ ಕಾನ್ಫರೆನ್ಸ್ […]

ಮಣಿಪಾಲ: ಪಂಚತಾರಾ ಹೊಟೇಲುಗಳಿಗೆ ವಂಚನೆ, ಆರೋಪಿ ಬಂಧನ

(Manipala) ಮಣಿಪಾಲ, ಡಿ.11: ರಾಷ್ಟ್ರದ ವಿವಿಧ  ಪ್ರತಿಷ್ಠಿತ ಪಂಚಾತಾರ ಹೊಟೇಲ್‌ಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ತಮಿಳುನಾಡು ಮೂಲಕ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶ ಸಾಧಿಸಿದ್ದಾರೆ.

 ತಮಿಳುನಾಡು ರಾಜ್ಯದ ತೂತುಕುಡಿಯ ಬಿಮೈಂಟ್ ಜಾನ್(67) ಬಂಧಿತ ಆರೋಪಿಯಾಗಿದ್ದ. ಮಣಿಪಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಬಿಮೈಂಟ್ ಜಾನ್, ಡಿ.7ರಂದು ಮಣಿಪಾಲ ಕಂಟ್ರಿ ಇನ್ ಹೊಟೇಲ್‌ನಲ್ಲಿ ತನಗೆ ಕಾನ್ಫರೆನ್ಸ್ ಮೀಟಿಂಗ್ ಇದೆ ಎಂದು  ಹೇಳಿ ರೂಮ್ ಪಡೆದುಕೊಂಡಿದ್ದನು.

 ಮುಂಗಡ ಹಣವನ್ನು ಡಿ.9ರಂದು ಕೊಡುವುದಾಗಿ ಹೇಳಿ ಡಿ.12ರಂದು ರೂಮ್ ಚೆಕ್‌ಔಟ್ ಮಾಡುತ್ತೇನೆ ಎಂದು ಹೊಟೇಲ್ ಮ್ಯಾನೇಜರ್‌ನ್ನು ನಂಬಿಸಿ, ರೂಮ್‌ನಲ್ಲಿ ಉಳಿದುಕೊಂಡಿದ್ದನು. ಬಳಿಕ ಹೊಟೆಲ್‌ನಲ್ಲಿಯೇ ಊಟ ತಿಂಡಿ ಮಾಡಿ ಒಟ್ಟು 39,298ರೂ. ಬಿಲ್ ಮಾಡಿ ಹಣ ಕೊಡದೇ ಪರಾರಿಯಾಗಿ ನಂಬಿಸಿ ಮೋಸ ಮಾಡಿರುವುದಾಗಿ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ದೇವರಾಜ್‌ ನೇತೃತ್ವದ ತಂಡ ಆರೋಪಿ ಜೋನ್ ನನ್ನು ಮಣಿಪಾಲದಲ್ಲಿ ಡಿ. 9ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಇದೇ ರೀತಿ ದೇಶದ ದೆಹಲಿ, ಮಹಾರಾಷ್ಟ್ರ ಥಾಣೆ, ಕೇರಳದ ಕೊಲ್ಲಂ ಸೇರಿದಂತೆ ಹಲವು ರಾಜ್ಯಗಳಲ್ಲಿನ ಪ್ರತಿಷ್ಠಿತ ಪಂಚತಾರಾ ಹೊಟೇಲ್‌ಗಳಲ್ಲಿ ರೂಮ್ ಪಡೆದುಕೊಂಡು ಸಾವಿರಾರು ರೂ. ಬಿಲ್ ಮಾಡಿ, ಬಳಿಕ ಹಣ ಪಾವತಿಸದೆ ಪರಾರಿಯಾಗಿ ವಂಚಿಸುತ್ತಿದ್ದನು ಎಂದು ತಿಳಿದುಬಂದಿದೆ.

 ಪದವೀಧರನಾಗಿರುವ ಈತನ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 49 ಪ್ರಕರಣಗಳು ದಾಖಲಾಗಿವೆ. ಈತ ಅವಿವಾಹಿತನಾಗಿದ್ದು, ಈತ ಈ ರೀತಿಯ ವಂಚನೆ ಪ್ರಕರಣದಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಬಂಧಿತನಾಗಿದ್ದನು. ಈ ಪ್ರಕರಣದಲ್ಲಿ ಈತ 1996ರಲ್ಲಿ ಐದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.