• Home  
  • ಮಣಿಪಾಲ : ರಸ್ತೆ ಕಾಮಗಾರಿ ವೀಳಂಬ, ಸ್ಥಳೀಯರ ಪ್ರತಿಭಟನೆ, ತರಾಟೆ (Manipal: Delay in road work, locals protest, scuffle)
- Mansoon - PROBLEMS

ಮಣಿಪಾಲ : ರಸ್ತೆ ಕಾಮಗಾರಿ ವೀಳಂಬ, ಸ್ಥಳೀಯರ ಪ್ರತಿಭಟನೆ, ತರಾಟೆ (Manipal: Delay in road work, locals protest, scuffle)

Share: ಮಣಿಪಾಲ : ರಸ್ತೆ ಕಾಮಗಾರಿ ವೀಳಂಬ, ಸ್ಥಳೀಯರ ಪ್ರತಿಭಟನೆ, ತರಾಟೆ (Manipala) ಮಣಿಪಾಲ: ಮಣಿಪಾಲ – ಬಜಪೆ ರಾಜ್ಯ ಹೆದ್ದಾರಿ, ಆತ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಹಿರೇಬೆಟ್ಟು ಗ್ರಾಮದ ಪಟ್ಲ ಬೈಲು ಪ್ರದೇಶದಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ವೀಳಂಬದಿಂದ ರೋಸಿಹೋದ ಸಾರ್ವಜನಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ರಸ್ತೆ, ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಂಪರ್ಕ ರಸ್ತೆ ಕಡಿತಗೊಂಡಿದೆ. ಯಾವುದೇ ವಾಹನಗಳು ಸಂಚರಿಸಲು ಆಗದ ಪರಿಸ್ಥಿತಿ ಇದೆ. ಪರ್ಯಾಯ ಸಂಪರ್ಕ ರಸ್ತೆ ಮಾಡಿದ್ದರೂ, ಅದು […]

(Manipala) ಮಣಿಪಾಲ: ಮಣಿಪಾಲ – ಬಜಪೆ ರಾಜ್ಯ ಹೆದ್ದಾರಿ, ಆತ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಹಿರೇಬೆಟ್ಟು ಗ್ರಾಮದ ಪಟ್ಲ ಬೈಲು ಪ್ರದೇಶದಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ವೀಳಂಬದಿಂದ ರೋಸಿಹೋದ ಸಾರ್ವಜನಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ರಸ್ತೆ, ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಂಪರ್ಕ ರಸ್ತೆ ಕಡಿತಗೊಂಡಿದೆ. ಯಾವುದೇ ವಾಹನಗಳು ಸಂಚರಿಸಲು ಆಗದ ಪರಿಸ್ಥಿತಿ ಇದೆ. ಪರ್ಯಾಯ ಸಂಪರ್ಕ ರಸ್ತೆ ಮಾಡಿದ್ದರೂ, ಅದು ಕೂಡ ನೆರೆ ನೀರಿನಿಂದ ಕೊಚ್ಚಿ ಹೋಗಿದೆ. ಜನರಿಗೆ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಈ ಎಲ್ಲಾ ಸಮಸ್ಯೆಯನ್ನು ಮನಗಂಡು ಪಟ್ಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

 ಪ್ರತಿಭಟನಾಕಾರರ ಜೊತೆ ಭಾಗವಹಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಮಗಾರಿಯ ವಿಳಂಬ ನೀತಿಯನ್ನು ಖಂಡಿಸಿ, ತುರ್ತಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

 ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಮಂಜುನಾಥ ನಾಯಕ್ ಸ್ಥಳದಲ್ಲಿದ್ದರು. ರಸ್ತೆ ಸಂಪರ್ಕ ಕಡಿತದಿಂದ ಊರಿನ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿನಯ್ ಕುಮಾರ್ ಸೊರಕೆ ತರಾಟೆಗೆ ತೆಗೆದುಕೊಂಡರು.

ಸೊರಕೆಯವರು 20 ದಿನದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

 ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಗುರುದಾಸ ಭಂಡಾರಿ, ಆತ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಸುಧೀರ್ ಕುಮಾರ್ ಪಟ್ಲ, ಇಸ್ಮಾಯಿಲ್ ಆತ್ರಾಡಿ‌, ಸುರೇಶ ನಾಯ್ಕ, ಯತೀಶ ಶೆಟ್ಟಿ, ಮಾಜಿ ತಾಪಂ ಸದಸ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಸಹನಾ ಕಾಮತ್, ಗಣೇಶ ಶೆಟ್ಟಿ, ಕೊಡಂಗಳ ವಿಠಲನಾಯಕ, ಉಡುಪಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್, ಮಹಾದೇವ ನಾಯಕ್, ಗೋಪಾಲ ಮರ್ಣೆ, ಕೇಶವ ಭಂಡಾರಿ, ವಾಸುದೇವ ಭಟ್ಟ, ಗೋಪಾಲ ಮೂಲ್ಯ, ನಾಗೇಶ ನಾಯಕ್, ಮನೋಹರ ಕಾಮತ್, ಜಯಪ್ರಕಾಶ ಕಾಮತ್, ಜಗದೀಶ ಮೂಲ್ಯ ಮತ್ತಿದ್ದರು ಸ್ಥಳದಲ್ಲಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.