• Home  
  • ಮಧುರೈ‌ : ನಿಲ್ಲಿಸಿದ್ದ ರೈಲಿನಲ್ಲಿ ಅಗ್ನಿ‌ ಅವಘಡ – 9 ಮಂದಿ ಸಾವು, 20 ಕ್ಕೂ ಅಧಿಕ ಮಂದಿಗೆ ಗಾಯ
- ಅಪರಾಧ

ಮಧುರೈ‌ : ನಿಲ್ಲಿಸಿದ್ದ ರೈಲಿನಲ್ಲಿ ಅಗ್ನಿ‌ ಅವಘಡ – 9 ಮಂದಿ ಸಾವು, 20 ಕ್ಕೂ ಅಧಿಕ ಮಂದಿಗೆ ಗಾಯ

Share: ಮಧುರೈ‌ : ನಿಲ್ಲಿಸಿದ್ದ ರೈಲಿನಲ್ಲಿ ಅಗ್ನಿ‌ ಅವಘಡ – 9 ಮಂದಿ ಸಾವು, 20 ಕ್ಕೂ ಅಧಿಕ ಮಂದಿಗೆ ಗಾಯ ಮಧುರೈ: ಲಕ್ನೋದಿಂದ ಬಂದಿದ್ದ ರೈಲಿನ ಪ್ರವಾಸಿಗರ ಭೋಗಿಯಲ್ಲಿ ಅಗ್ನಿ ಅವಘಡ ಸಂಭವಿಸಿ 9 ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ಮಧುರೈ ನಿಲ್ದಾಣದಲ್ಲಿ ನಡೆದಿದೆ.  ಅಡುಗೆ ಕೋಚ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.  ಘಟನೆಯಲ್ಲಿ 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ […]

ಮಧುರೈ‌ : ನಿಲ್ಲಿಸಿದ್ದ ರೈಲಿನಲ್ಲಿ ಅಗ್ನಿ‌ ಅವಘಡ – 9 ಮಂದಿ ಸಾವು, 20 ಕ್ಕೂ ಅಧಿಕ ಮಂದಿಗೆ ಗಾಯ

ಮಧುರೈ: ಲಕ್ನೋದಿಂದ ಬಂದಿದ್ದ ರೈಲಿನ ಪ್ರವಾಸಿಗರ ಭೋಗಿಯಲ್ಲಿ ಅಗ್ನಿ ಅವಘಡ ಸಂಭವಿಸಿ 9 ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ಮಧುರೈ ನಿಲ್ದಾಣದಲ್ಲಿ ನಡೆದಿದೆ.

 ಅಡುಗೆ ಕೋಚ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.

 ಘಟನೆಯಲ್ಲಿ 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

 ಪ್ರಾಥಮಿಕ ತನಿಖೆಯ ಪ್ರಕಾರ, ರೈಲಿನಲ್ಲಿದ್ದ ಪ್ರವಾಸಿಗರು ಮುಂಜಾನೆ ಸಿಲಿಂಡರ್ ನೊಂದಿಗೆ ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ.

 ಮಾಹಿತಿ ಪಡೆದ ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ರೈಲಿನ ಕೊನೆಯ ಎರಡು ಬೋಗಿಗಳು ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿವೆ.

 ಈ ರೈಲು ಮೇ 17 ರಂದು 15 ದಿನಗಳ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಲಕ್ನೋದಿಂದ ಹೊರಟಿತ್ತು. ನಿಲ್ಲಿಸಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.