ಮಲಬಾರ್ ಗೋಲ್ಡ್ ನಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಶೋ ಅನಾವರಣ
ಡಿ. 20ರಿಂದ 28ರ ವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
(udupi) ಉಡುಪಿ : ಉಡುಪಿ ನಗರದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಶೋ ಶಾಖೆಯಲ್ಲಿ ಅನಾವರಣಗೊಳಿಸಲಾಯಿತು.
ಈ ಪ್ರದರ್ಶನ ಮತ್ತು ಮಾರಾಟವು ಡಿಸೆಂಬರ್ 20ರಿಂದ 28ರ ವರೆಗೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಲಬಾರ್ ಗೊಲ್ಡ್‌ನ ಗ್ರಾಹಕರಾದ ಬಿಂದು ತಂಗಪ್ಪನ್, ಸ್ವಾತಿ ಮಿಥುನ್, ವಿದ್ಯಾಸರಸ್ವತಿ ಹಾಗೂ ಚರಿಷ್ಮಾ ಶೆಟ್ಟಿ ಇವರು ಆಭರಣಗಳ ಅನಾವರಣಗೊಳಿಸಿದರು.
ಬಿಂದು ತಂಗಪ್ಪನ್ ರವರು ಆಭರಣದ ಗುಣಮಟ್ಟ ಮತ್ತು ವೈಶಿಷ್ಟ್ಯವನ್ನು ಪ್ರಶಂಸಿಸಿದರು.
ಸ್ವಾತಿ ಮಿಥುನ್ ರವರು ಗ್ರಾಹಕರ ಸೇವೆ ಮತ್ತು ಚಿನ್ನದ ಲೈಟ್ ವೈಟ್ ಆಭರಣ ಗಳ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಚರಿಷ್ಮ ಶೆಟ್ಟಿಯವರು ಅಂಟಿಕ್ ಡಿಸೈನ್ ಮತ್ತು ಡೈಮಂಡ್ ನ ಸಂಗ್ರಹದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವಿದ್ಯಾ ಸರಸ್ವತಿ ಇವರು ಮಲಬಾರ್ ಸಾಮಾಜಿಕ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ರೂಪದರ್ಷಿಗಳಾದ ಶ್ರಾವ್ಯ ಪ್ರವೀಣ, ವೈಷ್ಣವಿ ಶೆಟ್ಟಿ ಪೂರ್ವಿಕ ಶೆಟ್ಟಿ ರಾಂಪ್ ವಾಕ್ ಮಾಡುವ ಮೂಲಕ ಆಭರಣ ಪ್ರದರ್ಶಿಸಿದರು.
ಸಂದೀಪ್ ಸಫಲ್ಯ ಡೈಮಂಡ್ಸ್ ಪ್ರಿಶಿಯಾ ಮತ್ತು ಆಂಟಿಕ್ ಡಿಸೈನ್ ನಲ್ಲಿರುವ ಕರ ಕುಶಲತೆ ಬಗ್ಗೆ ವಿವರಿಸಿ, ಚಿನ್ನ, ರತ್ನ, ವಜ್ರಭರಣಗಳ ಮೇಲೆ ಶೇ. 30 ರವರೆಗೆ ಕಡಿತಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ಮೆನೇಜರ್ ಮುಸ್ತಾಫ ಎ.ಕೆ , ದಿವ್ಯ ಉಪಸ್ಥಿತರಿದ್ದರು.
ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

