ಮಲ್ಪೆಯಲ್ಲಿ ಯಥೇಚ್ಛವಾಗಿ ಬೋಂಡಾಸ್ (ಬಂಡಸೆ) ಮೀನುಗಳು: ಮೀನುಗಾರರು ಫುಲ್ ಖುಷ್
ಉಡುಪಿ : ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭವಾಗಿ, ಮೀನಿನ ಸುಗ್ಗಿ ಶುರುವಾಗಿದೆ.
ಮೀನುಗಾರರು ಬೀಸುವ ಬಲೆಗೆ ಯಥೇಚ್ಛವಾಗಿ ಬೋಂಡಾಸ್ (ಬಂಡಸೆ) ಮೀನುಗಳು ಬೀಳುತ್ತಿದ್ದು, ಬೊಂಡಾಸ್ನಿಂದ ಮೀನುಗಾರಿಗೆ ಬಂಪರ್ ಹೊಡೆದಿದೆ.
ಆಳ ಸಮುದ್ರಕ್ಕೆ ತೆರಳಿದ ಬೋಟ್ಗಳು ಆಕ್ಟೊಪಸ್ ತಳಿಯ ಬೊಂಡಾಸ್ ಹೊತ್ತು ತರುತ್ತಿದೆ. ಮಲ್ಪೆ ಬಂದರಿನ ಹರಾಜು ಕೇಂದ್ರಗಳಲ್ಲಿ ಬೊಂಡಾಸ್ ರಾಶಿಗಳೇ ಕಾಣಸಿಗುತ್ತದೆ. ಕಳೆದ ಬಾರಿ ಇದೇ ರೀತಿ ಬಂಗುಡೆ ಮೀನುಗಳು ಸಿಗುತ್ತಿದ್ರೆ, ಈ ಬಾರಿ ಬೊಂಡಾಸ್ ಮೀನುಗಳು ಹೇರಳ ಪ್ರಮಾಣದಲ್ಲಿ ಸಿಗುತ್ತಿದೆ. ಬೊಂಡಾಸ್ ಮೀನು ಇತರೆ ಮೀನುಗಳಿಗಿಂತ ನೋಡಲು ಆಕಾರದಲ್ಲಿ ಭಿನ್ನವಾಗಿದ್ದು, ಆಕ್ಟೊಪಸ್ ರೀತಿ ಹೋಲುತ್ತದೆ.
ಸಾಮಾನ್ಯ ದಿನಗಳಲ್ಲಿ ಬೊಂಡಸ್ ಕಿಲೋಗೆ 400 ರಷ್ಟಿದ್ರೆ, ಸದ್ಯ ಬೊಂಡಾಸ್ ರಾಶಿ ರಾಶಿ ಸಿಗುವ ಕಾರಣದಿಂದ ೩೦- ರಿಂದ ೪೦ ರೂಗಳಿಗೆ ಬಿಕರಿಯಾಗುತ್ತಿದೆ.
ಬೊಂಡಾಸ್ ಮೀನು ಸುಕ್ಕ ಮಾಡಿ ತಿಂದ್ರೆ ಟೆಸ್ಟ್ ಆಗಿರುತ್ತೆ ಆನ್ನೋದು ಮೀನೂಟ ಪ್ರಿಯರ ಮಾತು.
