• Home  
  • ಮಹಿಳೆಯರು ದೈಹಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯದ ಬಗ್ಗೆ ಗಮನ ನೀಡಬೇಕು: ಡಾ. ಅಂಜಲಿ ಸುನಿಲ್ (women should pay attention to physically, Mental health: Dr. Anjali sunil)
- health

ಮಹಿಳೆಯರು ದೈಹಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯದ ಬಗ್ಗೆ ಗಮನ ನೀಡಬೇಕು: ಡಾ. ಅಂಜಲಿ ಸುನಿಲ್ (women should pay attention to physically, Mental health: Dr. Anjali sunil)

Share: ಮಹಿಳೆಯರು ದೈಹಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯದ ಬಗ್ಗೆ ಗಮನ ನೀಡಬೇಕು: ಡಾ. ಅಂಜಲಿ ಸುನಿಲ್    (Udupi) ಉಡುಪಿ: ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕಂಡು ಬರುತ್ತದೆ. ಅದಕ್ಕೆ ಮುಖ್ಯ ಕಾರಣ ತೊಂದರೆ ಕಾಣಿಸಿಕೊಂಡಾಗ ಮಾತ್ರ ಅವರು ವೈದ್ಯರ ಬಳಿಗೆ ಹೋಗುತ್ತಾರೆ. ಸಮಸ್ಯೆಗಳು ಇಲ್ಲದಾಗಲೇ ಸಮಸ್ಯೆಗಳು ಬರದಂತೆ ಮುಂಜಾಗರೂಕತೆ ವಹಿಸಲು ಪ್ರತಿವರ್ಷ ಅಥವಾ ಕನಿಷ್ಠ ಮೂರು ವರ್ಷಕ್ಕೊಮ್ಮೆಯಾದರೂ ಮಹಿಳೆಯರು ವೈದ್ಯರನ್ನು ಭೇಟಿ ಮಾಡಲೇಬೇಕು ಎಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ರಿಪ್ರೊಡಕ್ಟಿವ್ […]

ಮಹಿಳೆಯರು ದೈಹಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯದ ಬಗ್ಗೆ ಗಮನ ನೀಡಬೇಕು: ಡಾ. ಅಂಜಲಿ ಸುನಿಲ್  

 (Udupi) ಉಡುಪಿ: ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕಂಡು ಬರುತ್ತದೆ. ಅದಕ್ಕೆ ಮುಖ್ಯ ಕಾರಣ ತೊಂದರೆ ಕಾಣಿಸಿಕೊಂಡಾಗ ಮಾತ್ರ ಅವರು ವೈದ್ಯರ ಬಳಿಗೆ ಹೋಗುತ್ತಾರೆ. ಸಮಸ್ಯೆಗಳು ಇಲ್ಲದಾಗಲೇ ಸಮಸ್ಯೆಗಳು ಬರದಂತೆ ಮುಂಜಾಗರೂಕತೆ ವಹಿಸಲು ಪ್ರತಿವರ್ಷ ಅಥವಾ ಕನಿಷ್ಠ ಮೂರು ವರ್ಷಕ್ಕೊಮ್ಮೆಯಾದರೂ ಮಹಿಳೆಯರು ವೈದ್ಯರನ್ನು ಭೇಟಿ ಮಾಡಲೇಬೇಕು ಎಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ರಿಪ್ರೊಡಕ್ಟಿವ್ ಮೆಡಿಸಿನ್ ನ ಅಸೋಸಿಯೇಟ್ ಪ್ರೊಫೆಸರ್ ಡಾ| ಅಂಜಲಿ ಸುನಿಲ್ ಮುಂಡ್ಕೂರು ಹೇಳಿದ್ದಾರೆ.

ಅವರು ಬ್ರಾಹ್ಮಿ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಹಮ್ಮಿಕೊಂಡ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಹಾಗೂ ವಿಪ್ರ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

  ಮಹಿಳಾ ದಿನಾಚರಣೆಯ ಅಂಗವಾಗಿ ಖ್ಯಾತ ಲೇಖಕಿ, ಸಾಹಿತಿ, ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ರವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಸ್ತ್ರೀಯರನ್ನು ಪುರುಷ ಸಮಾಜ ದೇವರನ್ನಾಗಿ ಮಾಡಿ ಕಟ್ಟುಪಾಡುಗಳಿಂದ ಬಂದಿಯಾಗಿಸಿದೆ. ಹಿಂದಿನ ಕಾಲದ ಚಿಂತನೆ ನಂತರದ ಸುಧಾರಣೆ, ಕಾಯ್ದೆಗಳ ಬಗ್ಗೆ ಮಾತನಾಡುತ್ತಾ, ಈಗಲೂ ಅಂತಹ ಕೆಲವು ಮೂಢ ಆಚರಣೆಗಳು ಹಳ್ಳಿಯ ಪ್ರದೇಶದಲ್ಲಿ ಕಾಣಸಿಗುತ್ತವೆ ಎಂದು ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ  ತಿಳಿ ಹೇಳಿದರು.

 ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭರತನಾಟ್ಯ ವಿಷಾರದೆ ವಿದುಷಿ ಶ್ರೀಮತಿ ಯಶಾರಾಮಕೃಷ್ಣ, ಅಂಚೆ ಸಹಾಯಕಿ, ಸಾಹಿತಿ ಫಿಲಾಟಲಿ ಮತ್ತು ಕಾರ್ಯಕ್ರಮ ನಿರ್ವಹಣೆ ಇತ್ಯಾದಿ ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಪೂರ್ಣಿಮಾ ಜನಾರ್ಧನ್,  ರಾಷ್ಟ್ರೀಯ ಈಜು ಪಟು- ವಾಣಿ ಬಾಲಚಂದ್ರರವರನ್ನು ಸನ್ಮಾನಿಸಲಾಯಿತು.

  ಜೊತೆಗೆ ಒಂದಷ್ಟು ಸಾಧನೆ ಮಾಡಿದ ಸಂಸ್ಥೆಯ ವಿಪ್ರ ಮಹಿಳಾ ಸದಸ್ಯರನ್ನು ಗೌರವಿಸಲಾಯಿತು.

  ಆರೋಗ್ಯ ಸುರಕ್ಷಾ ಕಾರ್ಡಿನ ನ ಪ್ರಯೋಜನ ಹಾಗೂ ಇನ್ನಿತರ ಮಾಹಿತಿಯನ್ನು ಅದರ ಸಂಚಾಲಕಿ ಚೈತನ್ಯ ಎಂ ಜಿ ಅವರು ನೀಡಿದರು.

 ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರಾಧಿಕಾ ಚಂದ್ರಕಾಂತ್  ವಹಿಸಿದ್ದರು.

  ಈ ಸಂದರ್ಭದಲ್ಲಿ 18 ಕ್ಕೂ ಹೆಚ್ಚು ನೂತನ ಮಹಿಳಾ ಸದಸ್ಯರು ಪರಿಷತ್ತಿಗೆ ಸೇರ್ಪಡೆಗೊಂಡರು. ಆರೋಗ್ಯ ಕಾರ್ಡಿನ ನಿರ್ವಹಣೆಯನ್ನು ಮಾಡಿದ ರಘುಪತಿ ರಾವ್, ಮುರಳಿ ಅಡಿಗ, ಜನಾರ್ದನ್ ಭಟ್ ಮತ್ತು ಹರಿಪ್ರಸಾದ್ ರವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಶ್ರೀಮತಿ ಅಮಿತಾ ಕ್ರಮಾಧಾರಿ , ಶ್ರೀಮತಿ ವಸುಧ ಕೃಷ್ಣರಾಜ , ಶ್ರೀಮತಿ ರೂಪಶ್ರೀ ರಾಜೇಶ್,  ಶ್ರೀಮತಿ ಪದ್ಮಲತ ವಿಷ್ಣು, ಶ್ರೀಮತಿ ದಿವ್ಯ ವಿ ಪಾಡಿಗಾರು, ಸುನಿತಾ ಚೈತನ್ಯ, ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ ಕೆ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಆರೋಗ್ಯ ಕಾರ್ಡ್ ನ ಸಂಚಾಲಕಿ ಚೈತನ್ಯ ಎಂ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಜ್ಯೋತಿ ಲಕ್ಷ್ಮಿ ಅವರು ಕಾರ್ಯಕ್ರಮ ನಿರ್ವಹಿಸಿದರು.

  ಶ್ರೀಮತಿ ಆಶಾ ರಘುಪತಿ ರಾವ್ ರವರು ಸ್ವಾಗತಿಸಿದರು. ಶ್ರೀಮತಿ ಶಶಿಪ್ರಭ ಕಾರಂತ್ ರವರು ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀಮತಿ ಸುಮನಾ ಕಕ್ಕುಂಜೆಯವರ ನೇತ್ರತ್ವದಲ್ಲಿ ಮಹಿಳಾ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.