ಮಹೇಶ್ ಮರ್ಣೆಯವರ ಲೀಫ್ ಆರ್ಟ್ ಮೂಲಕ ನಾಗರಪಂಚಮಿಗೆ ಶುಭ ಹಾರೈಕೆ
ಉಡುಪಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ಕಾಪು ತಾಲೂಕಿನ ಮಹೇಶ್ ಮರ್ಣೆಯವರ ಅಶ್ವತ್ಥ ಎಲೆಯ ಮೂಲಕ ನಾಗರಪಂಚಮಿಗೆ ಶುಭ ಹಾರೈಸಿದ್ದಾರೆ.
ಹುಟ್ಟುಹಬ್ಬ, ರಾಷ್ಟ್ರೀಯ ಹಬ್ಬಗಳು ಸಂದರ್ಭದಲ್ಲಿ ಅಶ್ವತ್ಥ ಎಲೆಯ ಮೇಲೆ ಆರ್ಟ್ ಮಾಡುತ್ತಾರೆ.
ಈ ವರ್ಷ ಹೆಡೆಯೆತ್ತಿದ ಸರ್ಪ ವನ್ನು ಎಲೆಯಲ್ಲಿ ಸೃಷ್ಟಿ ಮಾಡಿದ್ದಾರೆ.
ಎಲೆಯನ್ನು ಎತ್ತಿ ಹಿಡಿದರೆ ಅದ್ಭುತ ಕಲಾ ದರ್ಶನವಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಈ ಲೀಫ್ ಆರ್ಟ್ ಎಲ್ಲೆಡೆ ವೈರಲ್ ಆಗಿದೆ.
