• Home  
  • ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ (Former CM, Jagadhish Shettar back to BJP)
- ರಾಜಕೀಯ

ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ (Former CM, Jagadhish Shettar back to BJP)

Share: ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ (New dhelhi)ನವದೆಹಲಿ: ಬಿಜೆಪಿಯ ನೇತಾರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (EX CM Jagadhish Shettar) ಕಾಂಗ್ರೆಸ್ಸಿನಿಂದ ಮತ್ತೆ ಬಿಜೆಪಿಗೆ ಇಂದು ನವ ದೆಹಲಿಯಲ್ಲಿ ಸೇರ್ಪಡೆಯಾದರು.  ನವ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (EX CM BS Yadiyurappa) ಸಮ್ಮುಖ ಜಗದೀಶ್ ಶೆಟ್ಟರ್ ಅವರು ಮತ್ತೆ  ಬಿಜೆಪಿ ಘರ್ ವಾಪಸಿ ಆಗಿದ್ದಾರೆ.  ಈ ಸಂದರ್ಭ ಕೇಂದ್ರ ಸಚಿವ ಉಪೇಂದ್ರ ಯಾದವ್ (Upendra […]

ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ

(New dhelhi)ನವದೆಹಲಿ: ಬಿಜೆಪಿಯ ನೇತಾರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (EX CM Jagadhish Shettar) ಕಾಂಗ್ರೆಸ್ಸಿನಿಂದ ಮತ್ತೆ ಬಿಜೆಪಿಗೆ ಇಂದು ನವ ದೆಹಲಿಯಲ್ಲಿ ಸೇರ್ಪಡೆಯಾದರು.

 ನವ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (EX CM BS Yadiyurappa) ಸಮ್ಮುಖ ಜಗದೀಶ್ ಶೆಟ್ಟರ್ ಅವರು ಮತ್ತೆ  ಬಿಜೆಪಿ ಘರ್ ವಾಪಸಿ ಆಗಿದ್ದಾರೆ.

 ಈ ಸಂದರ್ಭ ಕೇಂದ್ರ ಸಚಿವ ಉಪೇಂದ್ರ ಯಾದವ್ (Upendra Yadav) ಉಪಸ್ಥಿತರಿದ್ದರು.

 2023ರ ವಿಧಾನಸಭಾ ಚುನಾವಣೆಯ ಸಂದರ್ಭ ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಮುನಿಸಿಕೊಂಡು ಕಾಂಗ್ರೆಸಿಗೆ ಸೇರ್ಪಡೆಯಾಗಿದ್ದರು.

ಈ ಸಂದರ್ಭ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಧ್ಯಮದೊಂದಿಗೆ ಮಾತನಾಡಿ,  ಮುಖ್ಯಮಂತ್ರಿಯಾಗಿ ಪಕ್ಷದಲ್ಲಿ ದುಡಿದ ಹಿರಿಯ ರಾಜಕಾರಣಿ ಅವರ ವಾಪಸ್ಸಿ ಅತ್ಯಂತ ಸಂತಸ ತಂದಿದೆ ಎಂದರು.

ಮತ್ತೆ ಬಿಜೆಪಿಗೆ ಸೇರ್ಪಡೆ ಆದ ಜಗದೀಶ್ ಶೆಟ್ಟರ್‌  ಮಾತನಾಡಿ, ನಾನು ರಾಜೀನಾಮೆ ಕೊಟ್ಟು ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿದ್ದೇನೆ. ಕೇಂದ್ರ ಮತ್ತು ರಾಜ್ಯದ ನಾಯಕರ ಅಪೇಕ್ಷೆಯಂತೆ ಮತ್ತೆ ಬಿಜೆಪಿ  ಸೇರಬೇಕೆಂಬ  ಆಗ್ರಹ ಇತ್ತು. ಇಂದು ಬೆಳಿಗ್ಗೆ ನಾನು ದೆಹಲಿಯ ಕೇಂದ್ರ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಳ್ಳುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.