• Home  
  • ಮಾ. 5 ಹೆಜಮಾಡಿಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ (Mar 5 Cricket Tournment of Udupi Dist Journalist at Hejamadi)
- ಕ್ರೀಡೆ

ಮಾ. 5 ಹೆಜಮಾಡಿಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ (Mar 5 Cricket Tournment of Udupi Dist Journalist at Hejamadi)

Share: ಮಾ. 5 ಹೆಜಮಾಡಿಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ (Kaup) ಕಾಪು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಸಂಭ್ರಮದ ಅಂಗವಾಗಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಾರ್ಚ್ 5 ಮಂಗಳವಾರ ಹೆಜಮಾಡಿಯ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ ಅಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಪತ್ರಕರ್ತರ ಸಂಘಗಳ ತಂಡಗಳು ಪಂದ್ಯಾಟದಲ್ಲಿ ರಜತ ಸಂಭ್ರಮ ಟ್ರೋಫಿಗಾಗಿ ಸೆಣಸಾಡಲಿದೆ. ಮಾ.5 ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಪಂದ್ಯಾಟ […]

ಮಾ. 5 ಹೆಜಮಾಡಿಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ

(Kaup) ಕಾಪು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಸಂಭ್ರಮದ ಅಂಗವಾಗಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಾರ್ಚ್ 5 ಮಂಗಳವಾರ ಹೆಜಮಾಡಿಯ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ ಅಯೋಜಿಸಲಾಗಿದೆ.

ಜಿಲ್ಲೆಯ ಎಲ್ಲಾ ತಾಲೂಕುಗಳ ಪತ್ರಕರ್ತರ ಸಂಘಗಳ ತಂಡಗಳು ಪಂದ್ಯಾಟದಲ್ಲಿ ರಜತ ಸಂಭ್ರಮ ಟ್ರೋಫಿಗಾಗಿ ಸೆಣಸಾಡಲಿದೆ.

ಮಾ.5 ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಪಂದ್ಯಾಟ ಆರಂಭಗೊಳ್ಳಲಿದೆ. 11 ಗಂಟೆಗೆ ಕಾಪು ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ (Harish Hejmady)ಅಧ್ಯಕ್ಷತೆಯಲ್ಲಿ ಉಡುಪಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ (Rajesh Shetty Alevooru) ಉಪಸ್ಥಿತಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme Suresh Shetty) ಪಂದ್ಯಾಟ ಉದ್ಘಾಟಿಸುವರು.

ಪಡುಬಿದ್ರಿ ಆಸ್ಪಿನ್ ಇನ್ಫ್ರಾ ಲಿ.ನ ಜಿ. ಎಮ್. ಅಶೋಕ್ ಕುಮಾರ್‌ ಶೆಟ್ಟಿ (Ashok Kumar Shetty), ಕಾಪು ತಹಸೀಲ್ದಾರ್ ಡಾ. ಪ್ರತಿಭಾ ಆರ್.(DR Prathibha R), ಪಡುಪಣಂಬೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ (Vinod Salian) , ಉಡುಪಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು(Prakash Shetty Padebettu), ತಾ.ಪಂ. ಮಾಜಿ ಸದಸ್ಯ ಸಚಿನ್ ನಾಯಕ್ (Sachin naik), ತಾಲೂಕು ಯುವಜನ ಮತ್ತು ಕ್ರೀಡಾ ಅಧಿಕಾರಿ ರಿತೇಶ್ ಕುಮಾರ್ ಶೆಟ್ಟಿ (Ritesh Kumar Shetty), ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ (Dayananda Hejmady), ರಜತ ಸಂಭ್ರಮ ಸಮಿತಿಯ ಸಂಚಾಲಕ ಮೊಹಮ್ಮದ್ ಶರೀಫ್ (Mohd Sharif Karkala)ಮುಖ್ಯ ಅತಿಥಿಗಳಾಗಿರುವರು.

ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ (EX Minister Vinaykumar Sorake) ಪ್ರಶಸ್ತಿ ವಿತರಿಸುವರು.

ಅದಾನಿ ಪವರ್ ಲಿ. ಅಧ್ಯಕ್ಷ ಕಿಶೋರ್ ಆಳ್ವ (Kishore Alva), ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು(Rathakar Raj Arasu Kinnakka Ballal), ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್(Y Sudheer Kumar), ಕಾಪು ಗಾರ್ಡನ್ ಪ್ಯಾಲೇಸ್ ಎಮ್.ಡಿ. ಗೌರವ್ ಶೇಣವ (Gaurav Shenava), ಪಡುಬಿದ್ರಿ ಅಮರ್ ಕಂಫರ್ಟ್ಸ್‌ ಮಾಲೀಕ ಮಿಥುನ್ ಆರ್. ಹೆಗ್ಡೆ (Mithun Hegde), ಕೆಪಿಸಿಸಿ ಕೋರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ(KPCC Cordinator Navinchandra J Shetty) ಮುಖ್ಯ ಅತಿಥಿಗಳಾಗಿರುವರು ಎಂದು ಕ್ರೀಡಾ ಸಮಿತಿಯ ಸಂಚಾಲಕ ರಾಕೇಶ್ ಕುಂಜೂರು (Rakesh Kunjuru)ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.