• Home  
  • ಮುಂಡ್ಕೂರಿನಲ್ಲಿ ಮಕ್ಕಳ ಕನ್ನಡ ಕಲರವ 2023 (Childrens sound at Mundkuru)
- ಶಾಲಾ ಕಾಲೇಜು

ಮುಂಡ್ಕೂರಿನಲ್ಲಿ ಮಕ್ಕಳ ಕನ್ನಡ ಕಲರವ 2023 (Childrens sound at Mundkuru)

Share: ಮುಂಡ್ಕೂರಿನಲ್ಲಿ ಮಕ್ಕಳ ಕನ್ನಡ ಕಲರವ 2023   ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯ ಬೆಳೆಸಬೇಕಾದರೆ ವೇದಿಕೆ ಅಗತ್ಯ – ಭಾಸ್ಕರ್ ಟಿ. (mundkuru) ಮೂಂಡ್ಕೂರು:  ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯ ಬೆಳೆಸಬೇಕಾದರೆ, ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಬೇಕಾಗಿದೆ. ಅದಕ್ಕೆ ಇಂತಹ ವೇದಿಕೆಗಳು ಅಗತ್ಯ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಟಿ. (Education dept officer Bhaskar T)ಹೇಳಿದರು. ಕನ್ನಡ ಸಾಹಿತ್ಯ ಪರಿಷದ್ ಕಾರ್ಕಳ ಘಟಕ ಮತ್ತು ನಮ್ಮ ಫ್ರೆಂಡ್ಸ್ (ರಿ. ) ಮುಂಡ್ಕೂರು ಇವರ ಸಂಯುಕ್ತ ಆಶ್ರಯದಲ್ಲಿ ಮುಂಡ್ಕೂರು ವ್ಯವಸಾಯ […]

ಮುಂಡ್ಕೂರಿನಲ್ಲಿ ಮಕ್ಕಳ ಕನ್ನಡ ಕಲರವ 2023

  ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯ ಬೆಳೆಸಬೇಕಾದರೆ ವೇದಿಕೆ ಅಗತ್ಯ – ಭಾಸ್ಕರ್ ಟಿ.

(mundkuru) ಮೂಂಡ್ಕೂರು:  ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯ ಬೆಳೆಸಬೇಕಾದರೆ, ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಬೇಕಾಗಿದೆ. ಅದಕ್ಕೆ ಇಂತಹ ವೇದಿಕೆಗಳು ಅಗತ್ಯ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಟಿ. (Education dept officer Bhaskar T)ಹೇಳಿದರು.

ಕನ್ನಡ ಸಾಹಿತ್ಯ ಪರಿಷದ್ ಕಾರ್ಕಳ ಘಟಕ ಮತ್ತು ನಮ್ಮ ಫ್ರೆಂಡ್ಸ್ (ರಿ. ) ಮುಂಡ್ಕೂರು ಇವರ ಸಂಯುಕ್ತ ಆಶ್ರಯದಲ್ಲಿ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ  ಸಮೃದ್ಧಿ ಸಭಾಂಗಣದಲ್ಲಿ  ನಡೆದ ಮಕ್ಕಳ ಕನ್ನಡ ಕಲರವ- 2023′ ಕಾರ್ಯಕ್ರಮದಲ್ಲಿ ಅವರು  ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್  ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

 ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯ ಆಶೀರ್ವಚನ ನೀಡಿದರು.

  ಮುಖ್ಯ ಅತಿಥಿಗಳಾಗಿ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಾದಿರಾಜ ಶೆಟ್ಟಿ, ನಮ್ಮ ಫ್ರೆಂಡ್ಸ್‌ ಅಧ್ಯಕ್ಷ ಅರುಣ್ ರಾವ್, ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ, ಇನ್ನಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕುಶಾ ಅರ್. ಮೂಲ್ಯ, ನಿವೃತ್ತ ಗ್ರಾಮ ಕರಣಿಕ ಅವಿಲ್ ಡಿಸೋಜ, ರಾಜಶ್ರೀ ರೈಸ್ ಇಂಡಸ್ಟ್ರೀಸ್ ಮಾಲಕರಾದ ಜಿನ್ನೋ ಜಿ ರಾವ್ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಂಗಸ್ವಾಮಿ, ನಮ್ಮ ಫ್ರೆಂಡ್ಸ್ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ, ಸಂಚಾಲಕ ಆನಂದ ಸಾಲ್ಯಾನ್, ಗುರುತಿಲಕ್, ಪ್ರಮೋದ್ ಕಜೆ, ಪ್ರಶಾಂತ್ ಆಚಾರ್ಯ ರಾಜೇಶ್ ಸಾಂತೂರು ಲೋಕೇಶ್ ಮೆಂಡನ್ ಉಪಸ್ಥಿತರಿದ್ದರು.

  ನಮ್ಮ ಪ್ರಯತ್ನ ಗೌರವ ಸಲಹೆಗಾರ ಪ್ರಕಾಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

 ನಮ್ಮ ಫ್ರೆಂಡ್ಸ್‌ ಅಧ್ಯಕ್ಷ ಅರುಣ್ ರಾವ್ ಸ್ವಾಗತಿಸಿದರು.

 ಗೌರವ ಸಲಹೆಗಾರ ಪತ್ರಕರ್ತ ಉದಯ ಮುಂಡ್ಕೂರು (Uday mundkuru) ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.