ಮುಂದಿನ ಮೂರು ತಿಂಗಳಲ್ಲಿ ಮಣಿಪಾಲದಲ್ಲಿ ರೊಬೋಟಿಕ್ ಸರ್ಜರಿ ; ಡಾ ಸುದರ್ಶನ್ ಬಲ್ಲಾಳ್
(Karkala) ಕಾರ್ಕಳ: ಮುಂದಿನ ಮೂರು ತಿಂಗಳಲ್ಲಿ ಮಣಿಪಾಲದಲ್ಲಿ ರೊಬೋಟಿಕ್ ಸರ್ಜರಿ ಆರಂಭವಾಗಲಿದೆ ಎಂದು ಮಣಿಪಾಲ ಸಮೂಹ ಆಸ್ಪತ್ರೆಗಳ ಮುಖ್ಯಸ್ಥರಾದ ಡಾ. ಸುದರ್ಶನ್ ಬಲ್ಲಾಳ್ (Dr. Sudarshan Ballal)ತಿಳಿಸಿದರು.
ಅವರು ಕಾರ್ಕಳದ ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ, ಕಾರ್ಕಳದ ಡಾ. ಟಿ ಎಂಎ ಪೈ ರೋಟರಿ ಆಸ್ಪತ್ರೆ ಹಾಗೂ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿ ನಡೆದ ಬೆಂಗಳೂರಿನ ಖ್ಯಾತ ಮೂತ್ರಪಿಂಡ ಡಾ. ಸುದರ್ಶನ್ ಬಲ್ಲಾಳ್ ಇವರೊಂದಿಗಿನ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮೂತ್ರಪಿಂಡ ಕಾಯಿಲೆಯ ಲಕ್ಷಣಗಳು, ಮೂತ್ರ ಪಿಂಡ ಕಾಯಿಲೆಯ ಮುಂಚಿನ ಎಚ್ಚರಿಕೆ ಚಿಹ್ನೆಗಳು ಯಾವುವು ಮತ್ತು ರೋಗವನ್ನು ನಿರ್ವಹಿಸುವಲ್ಲಿ ಆರಂಭಿಕ ಪತ್ತೆ ಎಷ್ಟು ಮುಖ್ಯ ಎಂಬ ಬಗ್ಗೆ ಮಾಹಿತಿ ನೀಡಿದರು.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗೆ, ಮೂತ್ರಪಿಂಡ ಕಾಯಿಲೆಗೆ ಹೇಗೆ ಸಂಬಂಧ ಈ ರೋಗವು ಮುಂದುವರಿದಂತೆ ಹೆಚ್ಚಾಗಿ ಎದುರಿಸುವ ಪ್ರಮುಖ ತೊಡಕು, ಸಮಸ್ಯೆ, ಮುಂಜಾಗರೂಕತಾ ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಸಹ ಕುಲಾಧಿಪತಿ ಹೆಚ್ ಎಸ್ ಬಲ್ಲಾಳ್ (Co-Chancelor HS Ballal), ಡಾ. ಟಿಎಂಎ ಪೈ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್ (DR Keerthinath Ballal), ಮಾಹೆ ಉಪಕುಲಪತಿ ಡಾ. ಎಂ ಡಿ ವೆಂಕಟೇಶ್ (MD Venkatesh), ವ್ಯವಸ್ಥಾಪಕ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.

