• Home  
  • ಮುಂಬೈ ಉದ್ಯಮಿಯ ಅಪಹರಣ ಪ್ರಕರಣ : ಪ್ರಮುಖ ಆರೋಪಿಯ ಬಂಧನ
- ಅಪರಾಧ - ದೇಶ-ವಿದೇಶ

ಮುಂಬೈ ಉದ್ಯಮಿಯ ಅಪಹರಣ ಪ್ರಕರಣ : ಪ್ರಮುಖ ಆರೋಪಿಯ ಬಂಧನ

Share: ನಕಲಿ ಪೋಲೀಸರನಿಂದ ಉದ್ಯಮಿಯ ಅಪಹರಣ ಪ್ರಕರಣ : ಪ್ರಮುಖ ಆರೋಪಿಯ ಬಂಧನ  ಮುಂಬಯಿ : ಮಹಾರಾಷ್ಟ್ರದ ಮುಂಬಯಿ ನಗರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿಯಂತೆ ಸೋಗು ಹಾಕಿಕೊಂಡು ಉದ್ಯಮಿಗಳನ್ನು ಅಪಹರಿಸಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆರು ಸದಸ್ಯರ ಗ್ಯಾಂಗ್ ಸೇರಿದ ಪ್ರಮುಖ ಆರೋಪಿಯನ್ನು ಬಾಂದ್ರ ಕ್ರೈಂ ಬ್ರಾಂಚ್ ನ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ಅವರ ತಂಡ ಬಂಧಿಸಿದೆ ಎಂದು ತಿಳಿದು ಬಂದಿದೆ. ಪೊಲೀಸರಿಂದ ಬಂಧನವಾದ ಆರೋಪಿ ದೀಪಕ್ ಜಾಧವ್ ಎಂದು […]

ನಕಲಿ ಪೋಲೀಸರನಿಂದ ಉದ್ಯಮಿಯ ಅಪಹರಣ ಪ್ರಕರಣ : ಪ್ರಮುಖ ಆರೋಪಿಯ ಬಂಧನ

 ಮುಂಬಯಿ : ಮಹಾರಾಷ್ಟ್ರದ ಮುಂಬಯಿ ನಗರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿಯಂತೆ ಸೋಗು ಹಾಕಿಕೊಂಡು ಉದ್ಯಮಿಗಳನ್ನು ಅಪಹರಿಸಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆರು ಸದಸ್ಯರ ಗ್ಯಾಂಗ್ ಸೇರಿದ ಪ್ರಮುಖ ಆರೋಪಿಯನ್ನು ಬಾಂದ್ರ ಕ್ರೈಂ ಬ್ರಾಂಚ್ ನ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ಅವರ ತಂಡ ಬಂಧಿಸಿದೆ ಎಂದು ತಿಳಿದು ಬಂದಿದೆ.

ಪೊಲೀಸರಿಂದ ಬಂಧನವಾದ ಆರೋಪಿ ದೀಪಕ್ ಜಾಧವ್ ಎಂದು ಗುರುತಿಸಲಾಗಿದೆ.

ಈ ಆರೋಪಿಯ ಮೇಲೆ ಪುಣೆಯಿಂದ ಮುಂಬಯಿ ತನಕ ಹಲವಾರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಈತ ಮತ್ತು ಆರು ಮಂದಿಯ ತಂಡ ಉದ್ಯಮಿಯೊಬ್ಬರನ್ನು ಅಪಹರಿಸಿ ಅವರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಉದ್ಯಮಿಯ ದೂರಿನಂತೆ ಬಾಂದ್ರ ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ಅವರ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.