• Home  
  • ಮುಕುಂದ ಕೃಪಾ ಶಾಲಾ ವಾರ್ಷಿಕೋತ್ಸವ, ಬಹುಮಾನ ವಿತರಣೆ (Mukunda Kripa School Anniversary, Prize Distribution)
- ಶಾಲಾ ಕಾಲೇಜು

ಮುಕುಂದ ಕೃಪಾ ಶಾಲಾ ವಾರ್ಷಿಕೋತ್ಸವ, ಬಹುಮಾನ ವಿತರಣೆ (Mukunda Kripa School Anniversary, Prize Distribution)

Share: ಮುಕುಂದ ಕೃಪಾ ಶಾಲಾ ವಾರ್ಷಿಕೋತ್ಸವ, ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ (Udupi) ಉಡುಪಿ: ಉಡುಪಿಯಮುಕುಂದ ಕೃಪಾ ಶಾಲೆಯಲ್ಲಿ ವಾರ್ಷಿಕೋತ್ಸವ ಮತ್ತು ವಾರ್ಷಿಕ ಬಹುಮಾನ ವಿತರಣಾ ಸಮಾರಂಭ ಜರಗಿತು.    ಮುಖ್ಯ ಅತಿಥಿಗಳಾಗಿ ಎ.ವಿ ಬಾಳಿಗಾ ಆಸ್ಪತ್ರೆಯ ಆಡಳಿತ ಅಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.     ಅವರು ಮಾತನಾಡಿ, ಮಕ್ಕಳು ಹಾಗೂ ಹೆತ್ತವರು ಹಿತಮಿತವಾಗಿ ಮೊಬೈಲ್ ಬಳಕೆಯನ್ನು ಮಾಡಬೇಕು.  ಹೆತ್ತವರು ಮಕ್ಕಳಿಗೆ ಮಾದರಿಯಾಗಿ ಇರಬೇಕೆಂದು ಸಲಹೆ […]

(Udupi) ಉಡುಪಿ: ಉಡುಪಿಯಮುಕುಂದ ಕೃಪಾ ಶಾಲೆಯಲ್ಲಿ ವಾರ್ಷಿಕೋತ್ಸವ ಮತ್ತು ವಾರ್ಷಿಕ ಬಹುಮಾನ ವಿತರಣಾ ಸಮಾರಂಭ ಜರಗಿತು.

   ಮುಖ್ಯ ಅತಿಥಿಗಳಾಗಿ ಎ.ವಿ ಬಾಳಿಗಾ ಆಸ್ಪತ್ರೆಯ ಆಡಳಿತ ಅಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.

    ಅವರು ಮಾತನಾಡಿ, ಮಕ್ಕಳು ಹಾಗೂ ಹೆತ್ತವರು ಹಿತಮಿತವಾಗಿ ಮೊಬೈಲ್ ಬಳಕೆಯನ್ನು ಮಾಡಬೇಕು.  ಹೆತ್ತವರು ಮಕ್ಕಳಿಗೆ ಮಾದರಿಯಾಗಿ ಇರಬೇಕೆಂದು ಸಲಹೆ ನೀಡಿದರು.

   ಶಾಲಾ  ಹಳೆ ವಿದ್ಯಾರ್ಥಿಗಳಾದ ಡಾ. ವೆಂಕಟೇಶ್ ಹಾಗೂ ಡಾ. ನಮೃತಾ ನಾಯಕ್ ಮಕ್ಕಳಿಗೆ ಬಹುಮಾನ ವಿತರಿಸಿದರು.

    ಶಾಲಾ ವ್ಯವಸ್ಥಾಪನಾ ಸಮಿತಿಯ ಟಿ. ರಂಗ ಪೈ ಅಧ್ಯಕ್ಷತೆ ವಹಿಸಿ, ಹಿತವಚನ ನೀಡಿ ಶುಭ ಹಾರೈಸಿದರು.

    ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುರೇಂದ್ರ ಮಂಡನ್ ಸಂದರ್ಭೋಚಿತವಾಗಿ ಮಾತನಾಡಿದರು.

    ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವಿನುತಾ ಎಸ್ ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅನನ್ಯ ಹಾಗೂ ಪುಷ್ಪಹಾಸ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶ್ರೀಮತಿ. ಜಯಲಕ್ಷ್ಮಿ, ಗೀತಾ ಹಾಗೂ ವಿದ್ಯಾ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಗೀತಾ, ಪ್ರತಿಭಾ ಮತ್ತು ದಿಶಾ ವಾಚಿಸಿದರು. ಶ್ರೀಮತಿ ಗಾಯತ್ರಿ ವಂದನಾರ್ಪಣೆ ಗೈದರು.

  ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.  

Leave a comment

Your email address will not be published. Required fields are marked *

eMedia Kannada  @2025. All Rights Reserved.