• Home  
  • ಮುಲ್ಕಿ: ವೀರಕೇಸರಿ ತರುಣ ವೃಂದ ಮತ್ತು ಮಾತೃ ಬಳಗದ ವತಿಯಿಂದ 15ನೇ ವರ್ಷದ ಯುಗಾದಿ ಉತ್ಸವ ಆಚರಣೆ (Mulki: Veerakesari Taruna Vrinda and Matru Balaga celebrate the 15th year of Ugadi festival)
- fastival

ಮುಲ್ಕಿ: ವೀರಕೇಸರಿ ತರುಣ ವೃಂದ ಮತ್ತು ಮಾತೃ ಬಳಗದ ವತಿಯಿಂದ 15ನೇ ವರ್ಷದ ಯುಗಾದಿ ಉತ್ಸವ ಆಚರಣೆ (Mulki: Veerakesari Taruna Vrinda and Matru Balaga celebrate the 15th year of Ugadi festival)

Share: ಮುಲ್ಕಿ: ವೀರಕೇಸರಿ ತರುಣ ವೃಂದ ಮತ್ತು ಮಾತೃ ಬಳಗದ ವತಿಯಿಂದ 15ನೇ ವರ್ಷದ ಯುಗಾದಿ ಉತ್ಸವ ಆಚರಣೆ (Mulki)ಮುಲ್ಕಿ: ವೀರಕೇಸರಿ ತರುಣ ವೃಂದ ಮತ್ತು ಮಾತೃ ಬಳಗದ ವತಿಯಿಂದ 15ನೇ ವರ್ಷದ ಯುಗಾದಿ ಉತ್ಸವ ಹಾಗೂ 5ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಕೆಎಸ್ ರಾವ್‌ನಗರದ ಲಿಂಗಪ್ಪಯ್ಯ ಕಾಡು ನಾಗಬನದ ಬಳಿ ನಡೆಯಿತು ಕಾರ್ಯಕ್ರಮವನ್ನು ಬಜರಂಗದಳ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಉದ್ಘಾಟಿಸಿದರು. ದಾರ್ಮಿಕ ಚಿಂತಕ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಿ, ಜೀವನದಲ್ಲಿ […]

(Mulki)ಮುಲ್ಕಿ: ವೀರಕೇಸರಿ ತರುಣ ವೃಂದ ಮತ್ತು ಮಾತೃ ಬಳಗದ ವತಿಯಿಂದ 15ನೇ ವರ್ಷದ ಯುಗಾದಿ ಉತ್ಸವ ಹಾಗೂ 5ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಕೆಎಸ್ ರಾವ್‌ನಗರದ ಲಿಂಗಪ್ಪಯ್ಯ ಕಾಡು ನಾಗಬನದ ಬಳಿ ನಡೆಯಿತು

ಕಾರ್ಯಕ್ರಮವನ್ನು ಬಜರಂಗದಳ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಉದ್ಘಾಟಿಸಿದರು.

ದಾರ್ಮಿಕ ಚಿಂತಕ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಿ, ಜೀವನದಲ್ಲಿ ಸಂಪಾದನೆಯ ಪ್ರತಿಯೊಂದು ಹೆಜ್ಜೆ ನೆನಪಿನಲ್ಲಿಟ್ಟುಕೊಂಡು ಸಾಧಕರಾಗಿ, ಜಾತಿ ಧರ್ಮ ಆಚರಿಸಿ, ನೀತಿ ಬಿಡಬೇಡಿ. ಭಾರತೀಯರಾಗಲು ಯೋಗ ಹಾಗೂ ಯೋಗ್ಯತೆ ಬೇಕು. ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸರಳತೆಯ ಜೀವನದ ಮೂಲಕ  ಸಮಾಜಮುಖಿ ಜೀವನ ನಡೆಸಿ ಆದರ್ಶಪ್ರಾಯರಾಗಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಧಾಮ ಫೌಂಡೇಶನ್  ಅಧ್ಯಕ್ಷ ಸುನಿಲ್ ಆಳ್ವ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮುಲ್ಕಿ ನ. ಪಂ.ಅಧ್ಯಕ್ಷ ಸತೀಶ್ ಅಂಚನ್, ಮಂಗಳೂರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್  ಸ್ಥಾಪಕಾಧ್ಯಕ್ಷ ಮನೋಜ್ ಕೋಡಿಕೆರೆ, ವಿಜಯ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಉದ್ಯಮಿ ಪ್ರಶಾಂತ್ ಕಾಂಚನ್, ವೀರಣ್ಣ ಅರಳಗುಂಡಿ, ವೀರ ಕೇಸರಿ ತರುಣ ವೃಂದದ ಅಧ್ಯಕ್ಷ ಶರಣ್ ವಾಲಿಕರ್, ಮಾತೃ ಬಳಗದ ಅಧ್ಯಕ್ಷೆ ವಿಶಾಲಾಕ್ಷಿ ಕೆ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂ  ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ರವರಿಂದ ದಿಕ್ಸೂಚಿ ಭಾಷಣ ನಡೆಯಿತು.

 ಶರಣ್ ವಾಲಿಕರ್ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಹಾಗೂ ಮಾತೃ  ಬಳಗದ ಪ್ರಧಾನ ಕಾರ್ಯದರ್ಶಿ ಸಂಗೀತ ನಿರೂಪಿಸಿದರು.

 ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.