• Home  
  • ಮೂಲ್ಕಿ : ಐಶಾರಾಮಿ ಬೈಕ್ ಕಳ್ಳರ ಬಂಧನ (moolki: Arrest of laxury Bike thieves)
- ಅಪರಾಧ

ಮೂಲ್ಕಿ : ಐಶಾರಾಮಿ ಬೈಕ್ ಕಳ್ಳರ ಬಂಧನ (moolki: Arrest of laxury Bike thieves)

Share: ಮೂಲ್ಕಿ : ಐಶಾರಾಮಿ ಬೈಕ್ ಕಳ್ಳರ ಬಂಧನ (Moolki) ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಶಾರಾಮಿ ಯಮಹಾ ಆರ್-15 ಬೈಕನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಮೂಲ್ಕಿ ಪೊಲೀಸರು ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಬೈಕನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಬಂಧಿತ ಆರೋಪಿಗಳನ್ನು ಬಿಜಾಪುರ ಜಿಲ್ಲೆಯ ನಾಲತವಾಡ್, ಮುದ್ದೆಬಿಹಾಳ ತಾಲ್ಲೂಕಿನ ಅಂಬೇಡ್ಕರ್ ನಗರದ ಮೌನೇಶ್ ಭಜಂತ್ರಿ (23), ಮಹಮ್ಮದ್ ಸಮೀರ್ ಕಸಾಬ(20), ವೀರಭದ್ರಪ್ಪ (25) ಎಂದು ಗುರುತಿಸಲಾಗಿದೆ. ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಗ್ರಾಮದ ಬಪ್ಪನಾಡು […]

ಮೂಲ್ಕಿ : ಐಶಾರಾಮಿ ಬೈಕ್ ಕಳ್ಳರ ಬಂಧನ

(Moolki) ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಶಾರಾಮಿ ಯಮಹಾ ಆರ್-15 ಬೈಕನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಮೂಲ್ಕಿ ಪೊಲೀಸರು ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಬೈಕನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತ ಆರೋಪಿಗಳನ್ನು ಬಿಜಾಪುರ ಜಿಲ್ಲೆಯ ನಾಲತವಾಡ್, ಮುದ್ದೆಬಿಹಾಳ ತಾಲ್ಲೂಕಿನ ಅಂಬೇಡ್ಕರ್ ನಗರದ ಮೌನೇಶ್ ಭಜಂತ್ರಿ (23), ಮಹಮ್ಮದ್ ಸಮೀರ್ ಕಸಾಬ(20), ವೀರಭದ್ರಪ್ಪ (25) ಎಂದು ಗುರುತಿಸಲಾಗಿದೆ.

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಗ್ರಾಮದ ಬಪ್ಪನಾಡು ದೇವಸ್ಥಾನದ ದ್ವಾರದ ಬಳಿ ದಿನಾಂಕ ಮೇ ೨೪ರಂದು ನಿತೇಶ್ ಭಂಡಾರಿ ಎಂವವರು ನಿಲ್ಲಿಸಿದ್ದ ಕೆ.ಎ.19 ಹೆಚ್.ಡಿ.0090 ನೇ ನಂಬ್ರದ ಯಮಹಾ ಆರ್-15 ಬೈಕನ್ನು ಕಳ್ಳರು ಕಳವು ಮಾಡಿದ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

 ಆರೋಪಿಗಳನ್ನು ಮೂಲ್ಕಿ ಠಾಣಾ ಪಿ.ಎಸ್.ಐ. ವಿನಾಯಕ ಬಾವಿಕಟ್ಟಿ ಮತ್ತು ಸಿಬ್ಬಂದಿಗಳು ಜೂನ್ 14 ರಂದು ಪುನರೂರು ಚೆಕ್ ಪೋಸ್ಟ್ ಬಳಿ ದಸ್ತಗಿರಿ ಮಾಡಿದ್ದು, ಆರೋಪಿಗಳಿಂದ ಪ್ರಕರಣದಲ್ಲಿ ಕಳವಾದ ಕೆ.ಎ.19 ಹೆಚ್.ಡಿ.0090  ನೇ ನಂಬ್ರದ ರೂ. 1.20 ಲಕ್ಷ ಮೌಲ್ಯದ ಯಮಹಾ ಆರ್-15 ಬೈಕನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಮಾರ್ಗದರ್ಶನದಂತೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್, ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಮನೋಜ್ ಕುಮಾರ್ ಮತ್ತು ಮೂಲ್ಕಿ ಠಾಣಾ ನಿರೀಕ್ಷಕ ವಿದ್ಯಾಧರ ಡಿ ಬಾಯ್ಕೇರಿಕರ್ ರವರ ನೇತೃತ್ವದಲ್ಲಿ ಠಾಣೆಯ ಪಿ.ಎಸ್.ಐ. ವಿನಾಯಕ ಬಾವಿಕಟ್ಟಿ, ಹೆಡ್ ಕಾನ್ ಸ್ಟೇಬಲ್ ಕಿಶೋರ್, ಚಂದ್ರಶೇಖರ್, ಕಾನ್ ಸ್ಟೇಬಲ್ ಗಳಾದ ಅರುಣ್ ಕುಮಾರ್, ಸುನೀಲ್ ಮತ್ತು ಮಹಿಳಾ ಸಿಬ್ಬಂದಿ ಚಿತ್ರಾ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.