• Home  
  • ಮೂಲ್ಕಿ: “ಗಲಾಟೆ ಸಂಸಾರ” ಕನ್ನಡ ವೆಬ್ ಸರಣಿಯ ಶೀರ್ಷಿಕೆ ಅನಾವರಣ (“Galate Samsara” Kannada web series title unveiled)
- ಮನೋರಂಜನೆ

ಮೂಲ್ಕಿ: “ಗಲಾಟೆ ಸಂಸಾರ” ಕನ್ನಡ ವೆಬ್ ಸರಣಿಯ ಶೀರ್ಷಿಕೆ ಅನಾವರಣ (“Galate Samsara” Kannada web series title unveiled)

Share: ಮೂಲ್ಕಿ: “ಗಲಾಟೆ ಸಂಸಾರ” ಕನ್ನಡ ವೆಬ್ ಸರಣಿಯ ಶೀರ್ಷಿಕೆ ಅನಾವರಣ ಗ್ರಾಮೀಣ ಕಲಾವಿದರ ಕೌಶಲ್ಯಕ್ಕೆ ವೇದಿಕೆ ನೀಡಿ : ಶ್ರೀ ಚಂದ್ರಶೇಖರ ಸ್ವಾಮೀಜಿ ಮೂಲ್ಕಿ : ತುಳುನಾಡಿನ ಗ್ರಾಮೀಣ ಭಾಗದ ಕಲಾವಿದರ ಕೌಶಲ್ಯಕ್ಕೆ ಸೂಕ್ತ ವೇದಿಕೆ ನೀಡಿ ಅವರನ್ನು ಪ್ರೋತ್ಸಾಹಿಸಬೇಕೆಂದು ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರು, ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು. ಅವರು ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ನಡೆದ ಮಂಗಳೂರಿನ ಶ್ರೀ ಗುರುನಮನ ಸಂತೃಪ್ತಿ ಫಿಲ್ಮ್ಸ್‌ನ “ಗಲಾಟೆ ಸಂಸಾರ” ಕನ್ನಡ […]

ಮೂಲ್ಕಿ: “ಗಲಾಟೆ ಸಂಸಾರ” ಕನ್ನಡ ವೆಬ್ ಸರಣಿಯ ಶೀರ್ಷಿಕೆ ಅನಾವರಣ

ಗ್ರಾಮೀಣ ಕಲಾವಿದರ ಕೌಶಲ್ಯಕ್ಕೆ ವೇದಿಕೆ ನೀಡಿ : ಶ್ರೀ ಚಂದ್ರಶೇಖರ ಸ್ವಾಮೀಜಿ

ಮೂಲ್ಕಿ : ತುಳುನಾಡಿನ ಗ್ರಾಮೀಣ ಭಾಗದ ಕಲಾವಿದರ ಕೌಶಲ್ಯಕ್ಕೆ ಸೂಕ್ತ ವೇದಿಕೆ ನೀಡಿ ಅವರನ್ನು ಪ್ರೋತ್ಸಾಹಿಸಬೇಕೆಂದು ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರು, ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ನಡೆದ ಮಂಗಳೂರಿನ ಶ್ರೀ ಗುರುನಮನ ಸಂತೃಪ್ತಿ ಫಿಲ್ಮ್ಸ್‌ನ “ಗಲಾಟೆ ಸಂಸಾರ” ಕನ್ನಡ ವೆಬ್ ಸೀರೀಸ್ ಶೀರ್ಷಿಕೆಯನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿದರು.

 ಸಾಮಾಜಿಕ ಜಾಲತಾಣದಲ್ಲಿ ಇರುವ ಅವಕಾಶವನ್ನು ಪಡೆದುಕೊಂಡು ಕಲಾ ಚತುರತೆಯನ್ನು ಪ್ರದರ್ಶಿಸುವ ವಿಫುಲ ಅವಕಾಶವಿದೆ. ಕಿರುತೆರೆಯಲ್ಲಿ ಯುವ ಸಮುದಾಯವು ತಮ್ಮ ಪ್ರತಿಭಾ ಸಾಮರ್ಥ್ಯ ಪ್ರದರ್ಶಿಸಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿರಿ ಎಂದೂ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಶ್ರೀ ಚಂದ್ರಶೇಖರ ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್ ಅವರು “ಗಲಾಟೆ ಸಂಸಾರ” ಶೀರ್ಷಿಕೆಯೊಂದಿಗೆ ಉತ್ತಮವಾಗಿ ಧಾರವಾಹಿ ಮೂಡಿಬರಲಿ ಎಂದು ಶುಭ ಹಾರೈಸಿದರು.

ಧಾರವಾಹಿಯ ನಿರ್ದೇಶಕ ದೇವಿಪ್ರಕಾಶ್ ಮಂಗಳೂರು ಸ್ವಾಗತಿಸಿ, ಪ್ರಸ್ತಾವನೆಗೈದರು.

 ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು ವಂದಿಸಿದರು.

 ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.