ಮೂಳೂರು: ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಹಾಳೆ ಮರದ ತೊಗಟೆ ಕಷಾಯ ವಿತರಣೆ
(Mooluru) ಮೂಳೂರು: ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ಮೂಳೂರು ಇದರ ವತಿಯಿಂದ ಭಾನುವಾರ ಆಷಾಡ (ತುಳುವರ ಆಟಿ) ಅಮವಾಸ್ಯೆಯ ಪ್ರಯುಕ್ತ, ಮೂಳೂರು ಸರಕಾರಿ ಸಂಯುಕ್ತ ಶಾಲೆಯ ಆವರಣದಲ್ಲಿ ಹಾಳೆ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ಸಂದರ್ಭ ಟ್ರಸ್ಟಿನ ಕಾರ್ಯದರ್ಶಿ ಧೀರೇಶ್ ಡಿ ಪೂಜಾರಿ ಮಾತನಾಡಿ, ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ಕಳೆದ 9ನೇ ವರ್ಷಗಳಿಂದ ಉಚಿತವಾಗಿ ನಿರಂತರವಾಗಿ ಹಾಳೆ ಮರದ ತೊಗಟೆಯಿಂದ ಮಾಡಿದ ಕಷಾಯ ಉಚಿತವಾಗಿ ವಿತರಿಸುತ್ತಿದೆ. ಈ ಬಾರಿ ಸಂಜೀವ ಪೂಜಾರಿ ಕಟಪಾಡಿಯವರ ಸಹಕಾರದೊಂದಿಗೆ ಆಟಿ ಕಷಾಯ ಮಾಡಲಾಗಿದೆ. ಆಷಾಡ ಅಮಾವಾಸ್ಯೆಯ ಪ್ರಯುಕ್ತ ತುಳುವರ ಈ ಪುರಾತನ ಸಂಪ್ರದಾಯದ ಪ್ರಯೋಜನವನ್ನು ಪರಿಸರದ ಗ್ರಾಮಗಳ ಸುಮಾರು 5೦೦ ಜನರು ಪಡೆದಿದ್ದಾರೆ ಎಂದರು.
ಈ ಸಂದರ್ಭ ಟ್ರಸ್ಟಿ ಪ್ರತೀಕ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ, ಸದಸ್ಯರಾದ ದಿನೇಶ್ ಪಾಣರ, ಸುನೀಲ್ ಕರ್ಕೇರ, ಅರುಣ್ ಕುಲಾಲ್, ಕಾರ್ತಿಕ್ ಸುವರ್ಣ, ಗಗನ್ ಮೆಂಡನ್, ಆಕಾಶ್, ಅವೀಶ್, ವಿಕಾಸ್, ಶಲಿನ್, ತನೀಶ್, ಪ್ರಜೇಶ್, ಗುರುರಾಜ್ ಪೂಜಾರಿ, ಮನ್ವಿತ್ ಕರ್ಕೇರ, ಜಯೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
